Advertisement

“ಶಿಕ್ಷಣದಲ್ಲಿ  ಜಾಗತಿಕ ಗುಣಮಟ್ಟದತ್ತ ಗಮನವಿರಲಿ’

02:38 PM Mar 13, 2017 | Team Udayavani |

ಬೆಳ್ತಂಗಡಿ: ತಂತ್ರಜ್ಞಾನ- ಸಂಶೋಧನೆ ಆಧಾರಿತ ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಿ ಜಾಗತಿಕ ಮನ್ನಣೆಯ ಗುಣಮಟ್ಟ ಕಾಯ್ದುಕೊಳ್ಳುವುದರ ಕಡೆಗೆ ಭಾರತೀಯ ಶೆ„ಕ್ಷಣಿಕ ಸಂಸ್ಥೆಗಳು ಗಮನಹರಿಸಬೇಕು ಎಂದು ನಿವೃತ್ತ ಐಎಎಸ್‌ ಅಧಿಕಾರಿ, ಬೆಂಗಳೂರಿನ ಬಿಎಂಎಸ್‌ ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷ ಕೆ. ಜೈರಾಜ್‌ ಹೇಳಿದರು.

Advertisement

ಅವರು ಶನಿವಾರ ರಾತ್ರಿ ಎಸ್‌.ಡಿ.ಎಂ ಕಾಲೇಜಿನ ಸುವರ್ಣ ಮಹೋತ್ಸವದ ಸಮಾರೋಪ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಂಶೋಧನೆಯ ವಿವಿಧ ಆಯಾಮಗಳ ನೆರವಿನೊಂದಿಗೆ ಬೋಧನೆ ಪರಿಪಕ್ವಗೊಳ್ಳುತ್ತಾ ಸಾಗಬೇಕು. ಸಂಶೋಧನೆಯ ಹೆಜ್ಜೆಗಳ ಜತೆಗಿದ್ದಾಗ ಮಾತ್ರ ಬೋಧಕರು ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯವಾಗುತ್ತದೆ. ಜಾಗತಿಕ-ದೇಶೀಯ ಬೆಳವಣಿಗೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ತರಗತಿ ನಿರ್ವಹಿಸುವ ಕೌಶಲ ಬೋಧಕರಿಗಿರಬೇಕು ಎಂದರು.

ತರಗತಿಗಳು ಸಂಶೋಧನೆ-ತಂತ್ರಜ್ಞಾನ ಆಧಾರಿತ ಬೋಧನೆ ಯೊಂದಿಗೇ ನಿರ್ವಹಿಸಲ್ಪಡಬೇಕು. ನಿರ್ದಿಷ್ಟ ವಿಷಯದ ಜ್ಞಾನದ ಜತೆಗೆ ಸಂವಹನ ಕೌಶಲ ರೂಢಿಸುವಂತಿರಬೇಕು. ಹಾಗಾದಾಗ ಮಾತ್ರ ಭಾರತದ ವಿದ್ಯಾರ್ಥಿಗಳು ಜಾಗತಿಕ ನೆಲೆಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸಾಧ್ಯವಾಗುತ್ತದೆ. ಅತ್ಯಧಿಧಿಕ ಪ್ರಮಾಣದಲ್ಲಿರುವ ಯುವಶಕ್ತಿಯ ಬಲದಲ್ಲಿಯೇ 2050ರ ಹೊತ್ತಿಗೆ ಭಾರತ ಅಭಿವೃದ್ಧಿಯ ಭಿನ್ನ ಹೆಜ್ಜೆಗಳನ್ನಿರಿಸುತ್ತದೆ. ಈ ಅಂಶವನ್ನು ದೃಷ್ಟಿಯಲ್ಲಿರಿಸಿಕೊಂಡು ಶಿಕ್ಷಣದ ಸಂಸ್ಕಾರ ದಾಟಿಕೊಳ್ಳಬೇಕು ಎಂದರು.

ಐಎಎಸ್‌, ಕೆಎಎಸ್‌ ಸೇರಿದಂತೆ ವಿವಿಧ ವಿವಿಧ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವ ಮಹತ್ವಾಕಾಂಕ್ಷೆ ವಿದ್ಯಾರ್ಥಿಗಳಲ್ಲಿರಬೇಕು. ಆ ಪರೀಕ್ಷೆಗಳಲ್ಲಿ ಗೆಲುವು ಸಾಧಿಧಿಸಿ ಆಡಳಿತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು. ಅಂಥದ್ದೊಂದು ಸ್ಪರ್ಧಾತ್ಮಕ ವಾತಾವರಣ ರೂಪಿಸಲು ಶಿಕ್ಷಣ ಸಂಸ್ಥೆಗಳು ಪ್ರತ್ಯೇಕ ರಾಷ್ಟ್ರೀಯ ಆಡಳಿತಾತ್ಮಕ ಸೇವೆಗಳ ಘಟಕವನ್ನು ಸ್ಥಾಪಿಸುವ ಆವಶ್ಯಕತೆ ಇದೆ ಎಂದರು.

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ, ಅಧ್ಯಾಪಕರು ಬೋಧನೆಯ ಗುಣಮಟ್ಟ ಹೆಚ್ಚಿಸಿಕೊಳ್ಳುವ ಪ್ರಜ್ಞೆಯೊಂದಿಗಿದ್ದಾಗ ಮಾತ್ರ ಮಹತ್ವದ ಕೊಡುಗೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎಸ್‌ಡಿಎಂ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಬಿ.ಯಶೋವರ್ಮ ಅವರನ್ನು ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಸಮ್ಮಾನಿಸಿದರು.

ನಿವೃತ್ತರಾದ ಪ್ರೊ| ಶಿವರಾವ್‌, ಪದ್ದಣ್ಣ, ಗೋಪಿನಾಥ ಅವರನ್ನು ಸಮ್ಮಾನಿಸಲಾಯಿತು. ಶೈಕ್ಷಣಿಕ ವರ್ಷದಲ್ಲಿ ಅಪೂರ್ವ ಸಾಧನೆಗೆ„ದ ವಿವಿಧ ವಿದ್ಯಾರ್ಥಿ ಸಾಧಕರಿಗೆ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ವಿತರಿಸಿದರು.

ಪಿಎಚ್‌ಡಿ  ಪದವಿ ಪಡೆದ ಎಸ್‌ಡಿಎಂ ಕಾಲೇಜು  ಪ್ರಾಂಶುಪಾಲ ಡಾ| ಕೆ.ಎಸ್‌.ಮೋಹನ ನಾರಾಯಣ, ಸ್ನಾತಕೋತ್ತರ ಕೇಂದ್ರದ ಸಂಖ್ಯಾಶಾಸ್ತ್ರ ವಿಭಾಗದ ಡಾ| ರಘುನಾಥ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಡಾ| ಪರಶುರಾಮ ಕಾಮತ್‌, ವಾಣಿಜ್ಯ ವಿಭಾಗದ ಡಾ| ದೇವಕಿ ಕೆ.ಕೆ., ಕನ್ನಡ ವಿಭಾಗದ ಡಾ| ಕುಮಾರಸ್ವಾಮಿ ಅವರನ್ನು ಗೌರವಿಸಲಾಯಿತು.

ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರೊ| ಎಸ್‌.ಪ್ರಭಾಕರ್‌ ಉಪಸ್ಥಿತರಿದ್ದರು. ಡಾ| ಬಿ.ಎ.ಕುಮಾರ್‌ ಹೆಗ್ಡೆ, ಡಾ| ಬಿ.ಪಿ.ಸಂಪತ್‌ಕುಮಾರ್‌ ನಿರೂಪಿಸಿದರು. ಪ್ರೊ| ಎಸ್‌. ಸತೀಶ್‌ಚಂದ್ರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next