Advertisement

ಗುಮ್ಮೆತ್ತು ರೈಲು ಬೋಗಿ ಮಾದರಿ ಶಾಲೆ ಗಮ್ಮತ್ತು!

09:45 PM Dec 29, 2020 | Team Udayavani |

ಕಾರ್ಕಳ: ಸರಕಾರಿ ಶಾಲೆಗಳು ದೀರ್ಘಾವಧಿ ಬಳಿಕ ಜನವರಿಯಲ್ಲಿ ಕಾರ್ಯಾರಂಭ ಮಾಡಲಿದೆ. ಶಾಲಾ ಕಟ್ಟಡಗಳು ಮಕ್ಕಳ ಬರುವಿಕೆ ಯನ್ನೇ ಕಾಯುತ್ತಿದೆ. ಇಲ್ಲೊಂದು ಸರಕಾರಿ ಶಾಲೆ ರೈಲ್ವೇ ಬೋಗಿ ಮಾದರಿಯಾಗಿ ಪರಿವರ್ತನೆ ಗೊಂಡಿದ್ದು, ಮಾದರಿ ಶಾಲೆಯ ಮೆಟ್ಟಿಲೇರಲು ಮಕ್ಕಳು ಕಾತರರಾಗಿದ್ದಾರೆ.

Advertisement

ಈದು ಗ್ರಾಮದ ಮುಳಿಕಾರು ಗುಮ್ಮೆಟ್ಟು ಸ.ಕಿ.ಪ್ರಾ. ಶಾಲೆ ಬಣ್ಣ ಮಾಸಿ ದ್ದ ರಿಂದ ಆಕರ್ಷಣೆ ಕಳೆದುಕೊಂಡಿತ್ತು. ಇದನ್ನು ಗಮನಿಸಿದ ಸಾಮಾಜಿಕ ಸಂಘಟನೆ ಮೇಕಿಂಗ್‌ ಸಮ್ಮರ್‌ ಸೆ¾„ಲ್‌ ಗ್ರೂಪ್‌ ಸದಸ್ಯರು ದಾನಿಗಳ ಸಹಕಾರದಲ್ಲಿ ಸುಮಾರು 1 ಲಕ್ಷ 10 ಸಾವಿರ ರೂ. ವೆಚ್ಚದಲ್ಲಿ ಶಾಲೆಯ ಗೋಡೆಗಳಿಗೆ ರೈಲು ಬೋಗಿ ಮಾದರಿಯಲ್ಲಿ ಬಣ್ಣ ಹಚ್ಚಿದ್ದಾರೆ. ಜತೆಗೆ ಆವರಣ ಗೋಡೆಯನ್ನು ನಿರ್ಮಿಸಿಕೊಟ್ಟಿದ್ದಾರೆ. 2020 ಜ. 26ಕ್ಕೆ ರೈಲ್ವೇ ಬೋಗಿ ಮಾದರಿ ಶಾಲೆ ಮಕ್ಕಳ ಚಟುವಟಿಕೆಗೆ ಸಿಕ್ಕಿತ್ತು. ಅಂದವಾಗಿ ಪರಿವರ್ತನೆಗೊಂಡ ಶಾಲೆ ಮಕ್ಕಳಿಗೆ ಚಟುವಟಿಕೆಗೆ ಹೆಚ್ಚು ದಿನ ಸಿಗಲಿಲ್ಲ. ಕಾರಣ ಮಾರ್ಚ್‌ ತಿಂಗಳಲ್ಲಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಯ ಕೊಠಡಿಯೊಳಗೆ ಮಕ್ಕಳಿಗೆ ಪಠ್ಯದ ಚಟುವಟಿಕೆಗಳಿಗೆ ತಡೆ ಬಿದ್ದಿತ್ತು.

ಮೈದಾನಕ್ಕೆ ಬಂತು ಚುಕುಬುಕು ರೈಲು
ಶಾಲೆಯ ಗೋಡೆಗಳು ರೈಲು ಬೋಗಿಯ ಬಣ್ಣ ಬಳಿದು ಆಕರ್ಷಣೀಯಗೊಂಡಿವೆ. ಕಿಟಕಿಗಳು ಸೇರಿದಂತೆ ರೈಲು ಬೋಗಿಯ ಮಾದರಿಯಲ್ಲಿಯೇ ಚಿತ್ರ ಬರೆದು ಬಣ್ಣ ಬಳಿಯಲಾಗಿದ್ದು ಶಾಲೆ ಅಂಗಳಕ್ಕೆ ಕಾಲಿಟ್ಟ ತತ್‌ಕ್ಷಣ ಮೈದಾನಕ್ಕೆ ರೈಲು ಬಂದು ನಿಂತಿದೆಯೇನೋ ಎನ್ನುವಂತೆ ಭಾಸವಾಗುತ್ತದೆ.

ಡಿ. 27ರಂದು ಇದೇ ಶಾಲೆಯ ಕೊಠಡಿಯಲ್ಲಿ ಮತದಾನದ ಮತಗಟ್ಟೆ ತೆರೆಯಲಾಗಿತ್ತು. ಮತಗಟ್ಟೆಗೆ ಬಂದ ಮತದಾರರೆಲ್ಲ ಶಾಲೆಯನ್ನು ಕಂಡು ಸಂತಸಪಟ್ಟರು. ರೈಲು ಒಳಗೆ ಮತ ಹಾಕಿದೆವು ಎನ್ನುವ ಸಂಭ್ರಮವು ಅವರಲ್ಲಿತ್ತು.

ನಕ್ಸಲ್‌ ಬಾಧಿತ ಗ್ರಾಮ
ಒಂದೊಮ್ಮೆ ನಕ್ಸಲ್‌ ಚಲನವಲನಕ್ಕೆ ಹೆಸರು ಮಾಡಿದ್ದ ಈದು ಗ್ರಾಮದಲ್ಲಿ ಮಕ್ಕಳನ್ನು ಶಾಲೆಯ ಕಡೆಗೆ ಆಕರ್ಷಿಸಲು ಸಂಘಟನೆಯವರ ಪ್ರಯತ್ನವಾಗಿ ಇಂತದ್ದೊಂದು ಶಾಲೆ ಸಿದ್ಧವಾಗಿದ್ದು, ಸ್ಥಳಿಯ ನವೀನ ಎಂಬವರ ಕೈಚಳಕದಿಂದ ರೈಲು ಬೋಗಿ ಮೂಡಿ ಬಂದಿದೆ.

Advertisement

1ರಿಂದ 5ನೇ ತರಗತಿ ಇರುವ ಮೀನಾಡಿ ಶಾಲೆ 1959ರಲ್ಲಿ ಸ್ಥಾಪನೆಗೊಂಡಿತ್ತು. ತೀರಾ ಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ಹಿಂದಿನ ವರ್ಷ 40 ಮಕ್ಕಳಿದ್ದರು. ಈ ಬಾರಿ ಅದು 41 ಆಗಿದೆ.

ಏಕೋಪಾಧ್ಯಾಯ ಶಾಲೆ!
ಶಾಲೆಯು ಉತ್ತಮ ಕಲಿಕಾ ಕೊಠಡಿ, ಶೌಚಾಲಯ, ಅಕ್ಷರ ದಾಸೋಹ ಕಟ್ಟಡ ಹೊಂದಿದೆ. ಶಾಲಾ ಅಂಗಳ ಸಹಿತ ಎಲ್ಲ ವ್ಯವಸ್ಥೆಗಳಿವೆ. ಅದರೆ ಇಲ್ಲಿರುವುದು ಓರ್ವ ಮುಖ್ಯ ಶಿಕ್ಷಕ ಮಾತ್ರ. ಮುಖ್ಯ ಶಿಕ್ಷಕ ಹುದ್ದೆ ಜತೆಗೆ ಗುಮಾಸ್ತ, ಬೋಧನೆ ಸಹಿತ ಎಲ್ಲವನ್ನು ಇದೇ ಶಿಕ್ಷಕರು ನಿರ್ವಹಿಸಬೇಕು.

ಶಾಲೆಗೆ ಬರುತ್ತೇವೆ…
ಶಾಲಾರಂಭದ ನಿರೀಕ್ಷೆಯಲ್ಲಿರುವ ಮಕ್ಕಳು ರೈಲು ಬೋಗಿ ಏರುವ ಕನಸು ಕಾಣುತ್ತಿದ್ದಾರೆ. ಜನವರಿ 16ರಿಂದ ಈ ಶಾಲೆಯ ಆವರಣದಲ್ಲಿ ವಿದ್ಯಾಗಮ ಆರಂಭವಾಗುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ಕೂಡ ದೀರ್ಘಾವಧಿ ಮನೆಗಳಲ್ಲಿ ಉಳಿದು ಕೊಂಡು ಬೋರ್‌ ಆಗಿದೆ. ಶಾಲೆ ಶುರು ವಾದರೆ ರೈಲು ಬೋಗಿಯಂತಹ ಶಾಲಾ ಕೊಠಡಿಯೊಳಗೆ ಪಾಠ ಪ್ರವಚನ ಕೇಳ ಬಹುದೆನ್ನುವ ಖುಷಿಯಲ್ಲಿದ್ದಾರೆ. ನಮಗೆ ರಜೆ ಸಾಕು ನಾವು ಶಾಲೆಗೆ ಬರಬೇಕೆನಿ ಸುತ್ತದೆ ಅಂತಿದ್ದಾರೆ ಇಲ್ಲಿಯ ಮಕ್ಕಳು.

ಖುಷಿ ಜತೆ ಬೇಸರ
ಶಾಲೆಗೆ ನೆರವು ನೀಡುವ ಬಗ್ಗೆ ಸಂಘಟನೆಯ ಪ್ರತಿನಿಧಿಗಳು ಕೇಳಿಕೊಂಡಿದ್ದರು. ಆವಾಗ ಶಾಲೆಗೆ ಬಣ್ಣ ಬಳಿ ಯು ವ ಬಗ್ಗೆ ಅವರಲ್ಲಿ ಹೇಳಿದ್ದೆ. ಅದಕ್ಕವರು ಈ ರೀತಿ ರೈಲು ಬೋಗಿ ಮಾದರಿಯಲ್ಲಿ ಸಿದ್ಧಪಡಿಸಿಕೊಟ್ಟಿದ್ದಾರೆ. ಮಕ್ಕಳು ಖುಷಿ ಪಡುತ್ತಿದ್ದಾರೆ. ಅವರಿಗೆ ಹೆಚ್ಚು ಸಮಯ ಇದರಲ್ಲಿ ಕಳೆಯಲು ಸಾಧ್ಯವಾಗಿಲ್ಲ ಎನ್ನುವುದೇ ಬೇಸರ.
-ಆಲ್ವಿನ್‌, ಮುಖ್ಯ ಶಿಕ್ಷಕ ಗುಮ್ಮೆತ್ತು ಸ.ಕಿ.ಪ್ರಾ. ಶಾಲೆ

ನಿಜ ರೈಲು ಬೋಗಿ ಹತ್ತಿಸುವಾಸೆ
ಭಾರತೀಯ ರೈಲು ಬೋಗಿಯ ಮಾದರಿ ಬಣ್ಣ ಬಳಿಯಲಾಗಿದೆ. ಮಕ್ಕಳನ್ನು ಅಕರ್ಷಿಸಲು ಇದನ್ನು ಸಾಮಾಜಿಕ ಸಂಘಟನೆ ದಾನಿಗಳ ಸಹಕಾರದಿಂದ ಮಾಡಿದ್ದೇವೆೆ. ಮುಂದೆ ಈ ಶಾಲೆಯ ಮಕ್ಕಳನ್ನು ನಿಜವಾದ ರೈಲಿನಲ್ಲಿ ಉಡುಪಿಯಿಂದ -ಮಂಗಳೂರಿಗೆ ಕರೆದೊಯ್ಯುವ ಕನಸಿದೆ.
-ಸಂಪತ್‌ ಜೈನ್‌, ಸ್ಥಳಿಯ ಯುವಕ

Advertisement

Udayavani is now on Telegram. Click here to join our channel and stay updated with the latest news.

Next