Advertisement
ಬಿಳಿಗಿರಿರಂಗನಬೆಟ್ಟದ ತಪ್ಪಲಿನಲ್ಲಿರುವ ಈ ಪಂಚಾಯಿತಿಯು ಗುಂಬಳ್ಳಿ, ಕೃಷ್ಣಾಪುರ, ಉಪ್ಪಿನ ಮೋಳೆ, ಕೊಮಾರಪುರ ಗ್ರಾಮಗಳನ್ನು ಒಳಗೊಂಡಿದೆ. 17 ಜನ ಸದಸ್ಯ ಬಲದ ಪಂಚಾಯಿತಿ ಯಲ್ಲಿ 2011ರ ಜನಗಣತಿ ಪ್ರಕಾರ 7,979 ಜನಸಂಖ್ಯೆ ಇದೆ. ನರೇಗಾದಡಿ 2021-21 ನೇ ಸಾಲಿನಲ್ಲಿ 39,838 ಮಾನವ ದಿನಗಳನ್ನು ಸೃಜಿಸಲಾಗಿದೆ. ಕೆರೆ, ಕಟ್ಟೆ, ಕಾಲುವೆ ಸೇರಿದಂತೆ 84 ಸಮುದಾಯ ಕಾಮಗಾರಿ ಗಳು, ವೈಯುಕ್ತಿ ಕಾಮಗಾರಿಗಳಲ್ಲಿ 45 ಇಂಗುಗುಂಡಿ, 85 ಕೈ ತೋಟ, 12 ದನದ ಕೊಟ್ಟಿಗೆ, 15 ವಸತಿ ಯೋಜನೆ ಹಾಗೂ 1 ಗೊಬ್ಬರದ ಗುಂಡಿ, 79 ಶೌಚಗೃಹ ನಿರ್ಮಿಸಲಾಗಿದೆ.
Related Articles
ಗುಂಬಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್‌ಗೆ ದೃಷ್ಟಿ ದೋಷವಿದೆ. ದಿವ್ಯಾಂಗರಾಗಿರುವ ಇವರು ಪಂಚಾಯಿತಿಯ ಅಭಿವೃದ್ಧಿ ಕೆಲಸಗಳಲ್ಲಿ ಸದಾ ಮುಂದಿರುತ್ತಾರೆ. ಪ್ರತಿ ಕೆಲಸವನ್ನು ಖುದ್ದು ನಿಂತು ಪರಿಶೀಲಿಸಿ ಕ್ರಮ ವಹಿಸುವ ಇವರ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ. ಪಂಚಾಯಿತಿಗೆ 203 ಅಂಕ ಪಡೆಯುವುದರೊಂದಿಗೆ ಮೂರನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ. ಅ.2 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
Advertisement
ನಮ್ಮ ಪಂಚಾಯಿತಿಗೆ 203 ಅಂಕಗಳು ಲಭಿಸಿವೆ. ಈ ಹಿಂದೆ 2016-17 ನೇ ಸಾಲು ಹಾಗೂ 17-18 ನೇ ಸಾಲಿನಲ್ಲಿ ಪ್ರಶಸ್ತಿಗೆ ನಮ್ಮ ಪಂಚಾಯಿತಿ ಭಾಜನವಾಗಿದ್ದು ಈಗ 3ನೇ ಬಾರಿ ಪ್ರಶಸ್ತಿ ಲಭಿಸಿದೆ. ಇದಕ್ಕೆ ನಿಗದಿಯಾಗಿದ್ದ ಬಹುತೇಕ ಮಾನದಂಡಗಳಲ್ಲಿ ಪಂಚಾಯಿತಿ ಪ್ರಗತಿ ಸಾಧಿಸಿದೆ. ಇದಕ್ಕೆ ಸಹಕರಿಸಿದ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲಾಗುವುದು.– ಮಹೇಶ್, ಪಿಡಿಒ ಗುಂಬಳ್ಳಿ ಗ್ರಾಪಂ