Advertisement

ನೋಡಿದವರು ಏನಂತಾರೆ… : ಗುಳ್ಟು ಹೀರೋನಾ ಹೊಸ ಚಿತ್ರ

12:39 PM Nov 06, 2020 | Suhan S |

ಸುಮಾರು ಎರಡು ವರ್ಷದ ಹಿಂದೆ ತೆರೆಕಂಡ “ಗುಳುr’ ಚಿತ್ರ ಅನೇಕರಿಗೆ ನೆನಪಿರಬಹುದು. ಈ ಚಿತ್ರದ ಮೂಲಕ ನಾಯಕ ನಟನಾಗಿ ನವೀನ್‌ ಶಂಕರ್‌ ನೋಡುಗರ ಗಮನ ಸೆಳೆದಿದ್ದರು. ಅದಾದ ಬಳಿಕ ನವೀನ್‌ ಶಂಕರ್‌, ನಾಯಕನಾಗಿ ಕೆಲ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಅಲ್ಲಲ್ಲಿ ಸುದ್ದಿಯಾಗಿದ್ದರೂ, ಯಾವುದೇ ಸಿನಿಮಾಗಳು ಅಧಿಕೃತವಾಗಿ ಅನೌನ್ಸ್‌ ಆಗಿರಲಿಲ್ಲ. ಈಗ ನವೀನ್‌ ಶಂಕರ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರವೊಂದರ ಟೈಟಲ್‌ ಅಧಿಕೃತವಾಗಿ ಅನೌನ್ಸ್‌ ಆಗಿದೆ.

Advertisement

ಅಂದಹಾಗೆ, ನವೀನ್‌ ಅಭಿನಯಿಸುತ್ತಿರುವ ಈ ಚಿತ್ರದ ಹೆಸರು “ನೋಡಿದವರು ಏನಂತಾರೆ?’ ಏನಿದು ಚಿತ್ರದ ಟೈಟಲ್‌ ಈ ಥರ ಇದೆಯಲ್ಲ ಎಂದು ಕೇಳಬಹುದು. ಅದಕ್ಕೆ ಚಿತ್ರತಂಡಕೊಡುವ ಉತ್ತರ ಹೀಗಿದೆ, “ಇದು ನಮ್ಮ ಸಮಾಜವನ್ನು ನೋಡಿ ಹೆದರಿಕೊಳ್ಳುತ್ತ, ಅಕ್ಕಪಕ್ಕದವರು ಏನಂದುಕೊಳ್ಳುತ್ತಾರೋ ಎಂದು ಅಂಜಿಕೆಯಿಂದ ಬದುಕುವ ಹುಡುಗನೊಬ್ಬನಕಥೆ. ಹಾಗಾಗಿ ಚಿತ್ರದಕಥೆಗೆ ಸೂಕ್ತವಾಗಿದೆ ಎಂಬ ಕಾರಣಕ್ಕೆ ಈ ಸಿನಿಮಾಕ್ಕೆ “ನೋಡಿದವರು ಏನಂತಾರೆ?’ ಎಂದು ಟೈಟಲ್‌ ಇಡಲಾಗಿದೆ ಎಂದು ವಿವರಣೆ ಕೊಡುತ್ತದೆ.

ಅಂದಹಾಗೆ, ಈ ಚಿತ್ರದಲ್ಲಿ ನವೀನ್‌ ಶಂಕರ್‌ಗೆ ನಾಯಕಿಯಾಗಿ ಕಿರುತೆರೆ ನಟಿ ಅಪೂರ್ವ ಭಾರದ್ವಾಜ್‌ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ಚಿಕ್ಕಮಗಳೂರು ಸುತ್ತಮುತ್ತ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟೈಟಲ್‌ ಅನ್ನು ಲಾಂಚ್‌ ಮಾಡಿದೆ. ನಟ ಶ್ರೀಮುರಳಿ ಈ ಚಿತ್ರದ ಟೈಟಲ್‌ ಲಾಂಚ್‌ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಮೊದಲಾದ ಗಣ್ಯರುಕಾರ್ಯಕ್ರಮದಲ್ಲಿಹಾಜರಿದ್ದು, ಹೊಸಬರ ತಂಡಕ್ಕೆ ಶುಭ ಹಾರೈಸಿದರು. ಇನ್ನು “ನೋಡಿದೋರು ಏನಂತಾರೆ?’ ಚಿತ್ರಕ್ಕೆ ನವ ನಿರ್ದೇಶಕ ಕುಲದೀಪ್‌ಕಾರ್ಯಪ್ಪಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಮೋನಿಶಾ ಗೌಡ, ನಾಗೇಶ್‌ ಗೋಪಾಲ್‌ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ಗೋಕರ್ಣ, ಶಿರಸಿ, ಬೆಂಗಳೂರು ಸುತ್ತಮುತ್ತ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next