ಗುವಾಹಟಿ: ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ಶನಿವಾರ ರಾತ್ರಿ ನಡೆದಿದ್ದು, ರಣವೀರ್ ಸಿಂಗ್ ಅಭಿನಯದ ‘ಗಲ್ಲಿ ಬಾಯ್’ ಬರೋಬ್ಬರಿ 13 ಪ್ರಶಸ್ತಿ ಪಡೆದು ದಾಖಲೆ ಬರೆದಿದೆ.
ಶನಿವಾರ ರಾತ್ರಿ ಗುವಾಹಟಿಯಲ್ಲಿ ನಡೆದ ವರ್ಣರಂಜಿತಾ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರೆಟಿಗಳ ನಡುವೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಲ್ಲಿ ಬಾಯ್ ಚಿತ್ರದ ಪಾಲಾಯಿತು. ಅದೇ ಚಿತ್ರದ ನಟನೆಗಾಗಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಪಡೆದರು. ಅದೇ ಚಿತ್ರದ ನಿರ್ದೇಶನಕ್ಕಾಗಿ ಝೋಯಾ ಅಖ್ತರ್ ಗೆ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದರು. ಉಳಿದಂತೆ ಸಿದ್ದಾರ್ಥ್ ಚತುರ್ವೇದಿ ಮತ್ತು ಅಮೃತಾ ಸುಭಾಷ್ ಗೆ ಅತ್ಯುತ್ತಮ ಪೋಷಕ ನಟ ಮತ್ತು ನಟಿ ಪ್ರಶಸ್ತಿ ದೊರೆಯಿತು. ಅತ್ಯುತ್ತಮ ಸಂಗೀತ ಪ್ರಶಸ್ತಿ ಗಲ್ಲಿ ಬಾಯ್ ಚಿತ್ರದ ಝೋಯಾ ಅಖ್ತರ್, ಅಂಕುರ್ ತಿವಾರಿ ಪಾಲಾಯಿತು. ಅದೇ ಚಿತ್ರದ ಅಪ್ನಾ ಟೈಮ್ ಅಯೇಗಾ ಹಾಡಿಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ದೊರೆಯಿತು. ಅತ್ಯುತ್ತಮ ಸಂಭಾಷಣೆ ಮತ್ತು ಚಿತ್ರಕಥೆ ಇದೇ ಚಿತ್ರದ ಪಾಲಾಯಿತು.
ಉಳಿದಂತೆ ವಿಮರ್ಶಕರ ಚಿತ್ರ ಪ್ರಶಸ್ತಿ ಆರ್ಟಿಕಲ್ 15 ಮತ್ತು ಸೋಂಚಿರಿಯಾ ಪಾಲಾಯಿತು. ವಿಮರ್ಶಕರ ಶ್ರೇಷ್ಠ ನಟ ಆಯುಶ್ಮಾನ್ ಖುರಾನಾ ಪಾಲಾದರೆ, ನಟಿ ಪ್ರಶಸ್ತಿ ಭೂಮಿ ಪಡ್ನೇಕರ್ ಮತ್ತು ತಾಪ್ಸಿ ಪಾಲಾಯಿತು.
ಅರ್ಜಿತ್ ಸಿಂಗ್ ಅತ್ಯುತ್ತಮ ಗಾಯಕ ಪ್ರಶಸ್ತಿ ಪಡೆದರೆ, ಗಾಯಕಿ ಪುರಸ್ಕಾರ ಶಿಲ್ಪಾ ರಾವ್ ಪಾಲಾಯಿತು. ರಮೇಶ್ ಸಿಪ್ಪಿ ಅವರನ್ನು ಜೀವಮಾನದ ಸಾಧಕ ಪುರಸ್ಕಾರದಿಂದ ಸನ್ಮಾನಿಸಿದರೆ, ಗೋವಿಂದ ಅರಿಗೆ ಎಕ್ಸಲೆನ್ಸ್ ಇನ ಫಿಲ್ಮ್ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.