Advertisement

ಗುಳೇದಗುಡ್ಡ: ನಿರ್ಮಿಸಿದ ಆರೇ ತಿಂಗಳಲ್ಲಿ ರಸ್ತೆ ಹಾಳು..!

03:20 PM Jun 07, 2024 | Team Udayavani |

ಉದಯವಾಣಿ ಸಮಾಚಾರ
ಗುಳೇದಗುಡ್ಡ: ಪಟ್ಟಣದ ಸಾಲೇಶ್ವರ ತೇರಿನ ಮನೆಯ ಹಿಂದುಗಡೆ ನಗರೋತ್ಥಾನ ಯೋಜನೆ ಅಡಿಯಲ್ಲಿ ನಿರ್ಮಿಸಿದ ರಸ್ತೆ ಕಳಪೆಯಿಂದ ಕೂಡಿದ್ದು, ರಸ್ತೆ ನಿರ್ಮಿಸಿದ 6 ತಿಂಗಳಲ್ಲೇ ಹಾಳಾಗಿ ಹೋಗುತ್ತಿದೆ. ರಸ್ತೆ ನಿರ್ಮಾಣದ ಸಮಯದಲ್ಲಿ ಡಿಗ್ಗಿಂಗ್‌ ಮಾಡಿ ರಸ್ತೆ ನಿರ್ಮಿಸಬೇಕು. ಅಧಿಕಾರಿಗಳನ್ನು ಕೇಳಿದರೆ ಡಿಗ್ಗಿಂಗ್‌ ಮಾಡಿಯೇ ಮಾಡುತ್ತೇವೆ ಅಂತಾ ಹೇಳಿದ್ದಾರೆ ಆದರೆ ಆ ರೀತಿ ರಸ್ತೆಯ ನಿರ್ಮಿಸಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಈ ರಸ್ತೆ ನಿರ್ಮಿಸುವ ಸಮಯದಲ್ಲಿ ಸ್ಥಳೀಯರು ರಸ್ತೆ ಸರಿಯಾಗಿ ಮಾಡುತ್ತಿಲ್ಲ ಅಂತಾ ತಕರಾರು ತೆಗೆದಿದ್ದರು. ಆಗ ಅಧಿಕಾರಿಗಳು ಉತ್ತಮ ರೀತಿಯಲ್ಲಿ ನಿರ್ಮಿಸುತ್ತೇವೆಂದುತಿಳಿಸಿದ್ದರಿಂದ ಸುಮ್ಮನಾಗಿದ್ದರು. ಆದರೆ ರಸ್ತೆ ನಿರ್ಮಿಸಿ ಇನ್ನೂ ಆರು ತಿಂಗಳು ಕಳೆದಿಲ್ಲ. ಆಗಲೇ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಲ್ಲದೇ 4 ಅಡಿಗಳಷ್ಟು ರಸ್ತೆ ಒಡೆದು ಹೋಗಿದೆ. ಜತೆಗೆ ರಸ್ತೆ ಮಧ್ಯದಲ್ಲಿರುವ ಒಳಚರಂಡಿ ಮ್ಯಾನ್‌ ಹೋಲ್‌ಗ‌ಳು ಸಹ ಒಡೆದು ಹೋಗುತ್ತಿವೆ.

ಹೆಚ್ಚಿದ ವಾಹನ ಸಂಚಾರ: ಪವಾರ್‌ ಕ್ರಾಸ್‌ ಹತ್ತಿರ ರಸ್ತೆ ನಿರ್ಮಿಸುತ್ತಿರುವುದರಿಂದ ಮುಖ್ಯ ರಸ್ತೆ ಮೂಲಕ ಬಾಗಲಕೋಟೆ, ಇಲಕಲ್‌, ಕುಷ್ಟಗಿ, ಶಿರೂರ ಸೇರಿದಂತೆ ಇನ್ನಿತರೆ ನಗರಗಳಿಗೆ ತೆರಳುವ ವಾಹನಗಳು ಸಹ ಕಳೆದ 15 ದಿನಗಳಿಂದ ಈ ಮೂಲಕವೇ ಸಂಚರಿಸುತ್ತಿದ್ದು, ರಸ್ತೆ ಮತ್ತಷ್ಟು ಹಾಳಾಗುತ್ತಿದೆ. ಈ ರಸ್ತೆ ನಿರ್ಮಾಣಕ್ಕಾಗಿ ಎಷ್ಟು ವರ್ಷಗಳಿಂದ ಮನವಿ ಮಾಡುತ್ತ ಬಂದಿದ್ದೇವೆ. ವಾಹನ ಸಂಚಾರ ದಿನೇ ದಿನೇ ಹೆಚ್ಚಾಗಿ ರಸ್ತೆ ಸಂಪೂರ್ಣ ಹಾಳಾಗಿ ಹೋದರೆ ಯಾರು ಹೊಣೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ನಾವು ರಸ್ತೆ ಮಾಡುವಾಗಲೇ ಸರಿಯಾಗಿ ಡಿಗ್ಗಿಂಗ್‌ ಮಾಡಿ, ಈ ಕೆಲಸ ಸರಿಯಾಗುತ್ತಿಲ್ಲ  ಅಂತಾ ಹೇಳಿದ್ದೆವು. ಅಧಿಕಾರಿಗಳು ಸರಿಯಾಗಿ ಮಾಡುತ್ತೇವೆ ಅಂತಾ ಹೇಳಿ ರಸ್ತೆ ಮಾಡಿದರು. ಆದರೆ ರಸ್ತೆ ಸರಿಯಾಗಿ ನಿರ್ಮಿಸಿಲ್ಲ. ಈಗ ವಾಹನ ಸಂಚಾರ ಹೆಚ್ಚಿದ್ದು, ರಸ್ತೆ ಮತ್ತಷ್ಟು ಹಾಳಾಗುತ್ತಿದೆ. ಇದಕ್ಕೆ ಯಾರು ಹೊಣೆ.
*ಮಲ್ಲಿಕಾರ್ಜುನ ಧೋತರದ, ಸ್ಥಳೀಯ ನಿವಾಸಿ

ನಾನು ಆ ರಸ್ತೆಯ ಬಗ್ಗೆ ಮಾಹಿತಿ ಪಡೆದು ಅಭಿಯಂತರರನ್ನು ಸ್ಥಳಕ್ಕೆ ಭೇಟಿ ಕೊಟ್ಟು ವರದಿ ನೀಡಲು ಸೂಚಿಸುತ್ತೇನೆ. ಅಲ್ಲದೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರಿಗೆ ಸೂಚಿಸಲು ಅಭಿಯಂತರರಿಗೆ ತಿಳಿಸುವೆ.
*ವಿಜಯ ಮೆಕ್ಕಳಕಿ,ಯೋಜನಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಬಾಗಲಕೋಟೆ

Advertisement

ನಾನು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಬಗ್ಗೆ ಪರಿಶೀಲಿಸುತ್ತೇನೆ. ಈ ಬಗ್ಗೆ ಮೇಲಾಧಿ ಕಾರಿಗಳಿಗೂ ವರದಿ ನೀಡುತ್ತೇನೆ.
*ಹುಣಸಿಗಿಡದ, ಎಇಇ, ಜಿಲ್ಲಾ ನಗರಾಭಿವೃದ್ಧಿ ಕೋಶ, ಬಾಗಲಕೋಟೆ

*ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next