Advertisement

Guledagudda: ಅಧಿಕಾರಿಗಳ ಗೈರು; ಸಂಘಟನೆಗಳ ಆಕ್ರೋಶ

01:43 PM Oct 23, 2023 | Team Udayavani |

ಗುಳೇದಗುಡ್ಡ: ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ತಾಲೂಕಿನ ಸುಮಾರು 30ಕ್ಕೂ ಹೆಚ್ಚು ವಿವಿಧ ಇಲಾಖೆಗಳು ಕಾರ್ಯ
ನಿರ್ವಹಿಸುತ್ತಿದ್ದು, ಇಲ್ಲಿನ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಜರುಗಿದ ಕರ್ನಾಟಕ ಸಂಭ್ರಮ -50ರ ರಾಜ್ಯೋತ್ಸವ ಕಾರ್ಯಕ್ರಮದ
ಪೂರ್ವಭಾವಿ ಸಭೆಗೆ ಹಲವು ಇಲಾಖೆಗೆಳ ಅಧಿಕಾರಿಗಳು ಗೈರಾಗಿದ್ದಕ್ಕೆ ಕನ್ನಡಪರ ಸಂಘಟನೆಗಳ ಮುಖಂಡರು ಆಕ್ರೋಶ
ವ್ಯಕ್ತಪಡಿಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ತಹಶೀಲ್ದಾರ್‌ ಎಸ್‌.ಎಫ್‌.ಬೊಮ್ಮಣ್ಣವರ್‌ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯೋತ್ಸವ
ಕಾರ್ಯಕ್ರಮವನ್ನು ತಾಲೂಕಿನಲ್ಲಿ ವಿಜೃಂಭಣೆಯಿಂದ ಆಚರಿಸಲು ಸೇರಿದ ಸಭೆಗೆ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ 5-6 ಇಲಾಖಾ ಪ್ರತಿನಿಧಿಗಳು ಮಾತ್ರ ಹಾಜರಿದ್ದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಎಸ್‌. ಎಫ್‌.ಬೊಮ್ಮಣ್ಣವರ್‌ ಕೆಲ ಇಲಾಖಾ ತಾಲೂಕು ಅಧಿಕಾರಿಗಳಿಗೆ ಸಭೆಗೆ ಏಕೆ ಬಂದಿಲ್ಲವೆಂದು ಎಲ್ಲರ ಸಮಕ್ಷಮದಲ್ಲಿ ಫೋನ್‌ ಮಾಡಿ ಕೇಳಿದರೆ, ಇಲಾಖಾ ಕಚೇರಿ ಗುಳೇದಗುಡ್ಡದಲ್ಲಿ ಇಲ್ಲ, ಬೇರೆ
ಕೆಲಸಗಳಿವೆ, ನಮಗೆ ಸರಿಯಾದ ಮಾಹಿತಿ ಇಲ್ಲ. ಹೀಗೆ ನಾನಾ ತರದ ನಮಗೆ ಮಾಹಿತಿಯಿಲ್ಲ ಎಂದು ಉತ್ತರ ನೀಡಿದರು,

ಕನ್ನಡಪರ ಸಂಘಟನೆಗಳ ಬಹಿಷ್ಕಾರ: ತಕ್ಷಣ ಕನ್ನಡಪರ ಸಂಘಟನೆಗಳು ಸಭೆಯನ್ನು ಬಹಿಷ್ಕರಿಸಿ ಸಭೆ ಮುಂದೂಡಲು ತಹಶೀಲ್ದಾರ್‌ ಅವರಲ್ಲಿ ವಿನಂತಿಸಿಕೊಂಡವು. ತಾಲೂಕು ಮಟ್ಟದ ಅಧಿಕಾರಿಗಳೇ ಇಂತಹ ಮಹತ್ವದ ಸಭೆ ಬರದಿದ್ದರೆ ಹೇಗೆ? ಸರ್ಕಾರದ ಆದೇಶಕ್ಕೂ ಅವರಿಗೆ ಭಯವಿಲ್ಲವೇ ? ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಭೆ ಮುಂದೂಡಲು ಒತ್ತಾಯಿಸಿದಾಗ ತಹಶೀಲ್ದಾರರು ಸಭೆಯನ್ನು 26ಕ್ಕೆ ಮುಂದೂಡಿದರು. ಅಂದಿನ ಸಭೆಗೆ ಇಲಾಖಾ ಅಧಿಕಾರಿಗಳು ಹಾಜರಾಗದಿದ್ದರೆ, ತಾಲೂಕು ಆಡಳಿತವನ್ನು ಹೊರಗಿಟ್ಟು ಕನ್ನಡಪರ ಸಂಘಟನೆಗಳೇ ನ.1ರಂದು 50 ವರ್ಷದ ಕರ್ನಾಟಕ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಕನ್ನಡಪರ ಸಂಘಟನೆಗಳು ನಿರ್ಣಯ ಕೈಗೊಂಡವು. ತಹಶೀಲ್ದಾರ್‌ ಎಸ್‌. ಎಫ್‌.ಬೊಮ್ಮಣ್ಣವರ್‌ ಅಧ್ಯಕ್ಷತೆ ವಹಿಸಿದ್ದರು.

ಪು‌ಸಭೆ ಮುಖ್ಯಾಧಿಕಾರಿ ಎ.ಎಫ್‌.ಮುಜಾವರ್‌, ಪಿಎಸ್‌ಐ ಲಕ್ಷ್ಮಣ ಆರಿ ವೇದಿಕೆ ಮೇಲಿದ್ದರು. ಕರವೇ ಅಧ್ಯಕ್ಷ ರವಿ ಅಂಗಡಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಾ.ಸಿ.ಎಂ.ಜೋಶಿ, ಕಸಾಪ ಅಧ್ಯಕ್ಷ ಡಾ.ಎಚ್‌.ಎಸ್‌.ಘಂಟಿ, ಡಾ| ಚಂದ್ರಶೇಖರ ಕಾಳನ್ನವರ್‌, ಖಜಾನೆ ಅಧಿ ಕಾರಿ ಪಾಟೀಲ, ನೋಂದಣಿ ಅಧಿಕಾರಿ ಗಾಣಿಗೇರ, ಶಾಲಾ ಮುಖ್ಯಗುರುಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next