Advertisement

Gujarath Rain: ಶ್ರೀ ಸೋಮನಾಥ ದೇವಾಲಯದ ದರ್ಶನಕ್ಕೆ ತೆರಳಿದ್ದ ಕರಾವಳಿಗರು ಸುರಕ್ಷಿತ

07:14 PM Jul 19, 2023 | Team Udayavani |

ಬಂಟ್ವಾಳ: ಕೇರಳ, ತಮಿಳುನಾಡಿನ ಒಂದಿಬ್ಬರು ಸೇರಿದಂತೆ ದ.ಕ.ಜಿಲ್ಲೆಯ ಸುಮಾರು 92 ಮಂದಿ ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದು, ಅವರು ಜುಲೈ 19 ರಂದು ಗುಜರಾತಿನ ವೆರಾವಲ್‌ನಲ್ಲಿರುವ ಶ್ರೀ ಸೋಮನಾಥ ದೇವಾಲಯದ ದರ್ಶನಕ್ಕೆ ತೆರಳಿದ್ದ ವೇಳೆ ಕೆಲಹೊತ್ತು ಪ್ರವಾಹದಲ್ಲಿ ಸಿಲುಕಿ ಹಾಕಿಕೊಳ್ಳಬೇಕಾಯಿತು.

Advertisement

ಗುಜರಾತ್‌ನಲ್ಲಿ ಕಳೆದ 15 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಹೀಗಾಗಿ ವೆರಾವಲ್ ಪ್ರದೇಶದಲ್ಲಿ ಏಕಾಏಕಿ ಪ್ರವಾಹದ ಸ್ಥಿತಿ ನಿರ್ಮಾಣಗೊಂಡು ರಸ್ತೆಗಳಲ್ಲಿ ನೀರು ಸುತ್ತುವರಿದಿತ್ತು. ಸೋಮನಾಥನ ದರ್ಶನ ಮಾಡಿ ಹಿಂದಿರುವ ವೇಳೆ ಇವರೆಲ್ಲರೂ ಪ್ರವಾಹದ ನೀರಿನಲ್ಲಿ ಸಿಲುಕಿದರು.

ಬಳಿಕ ಸ್ಥಳೀಯ ಜಿಲ್ಲಾಡಳಿತ ಇವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದೆ. ಇವರು ಅಲ್ಲಿನ ದರ್ಶನ ಮುಗಿಸಿ ವೆರಾವಲ್ ರೈಲ್ವೇ ನಿಲ್ದಾಣದಿಂದ ಬೆಳಗ್ಗೆ 10 ರ ರೈಲಿಗೆ ಮತ್ತೊಂದು ಕ್ಷೇತ್ರಕ್ಕೆ ತೆರಳಬೇಕಿತ್ತು. ಆದರೆ ರೈಲ್ವೇ ಹಳಿಗಳಲ್ಲೂ ನೀರು ತುಂಬಿದ್ದ ಪರಿಣಾಮ ರೈಲು ರಾತ್ರಿ 7.30 ರ ಬಳಿಕ ಹೊರಡಲಿದೆ. ಹೀಗಾಗಿ ದ.ಕ.ಜಿಲ್ಲೆಯವರೆಲ್ಲರೂ ಸುರಕ್ಷಿತವಾಗಿ ರೈಲು ನಿಲ್ದಾಣದಲ್ಲಿ ಉಳಿದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next