ಅಹಮದಾಬಾದ್: ರಾಷ್ಟ್ರ ರಾಜಕೀಯದ ಕುತೂಹಲಕ್ಕೆ ಕಾರಣವಾಗಿರುವ ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಇಂದು ನಡೆಯುತ್ತಿದೆ. ಗುಜರಾತ್ ನ 14 ಕೇಂದ್ರ ಮತ್ತು ಉತ್ತರ ಜಿಲ್ಲೆಗಳ 93 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನ ರಾನಿಪ್ ನ ನಿಶಾನ್ ಪಬ್ಲಿಕ್ ಸ್ಕೂಲ್ ನಲ್ಲಿ ಮತ ಚಲಾಯಿಸಿದರು. ರವಿವಾರ ಗುಜರಾತ್ ಗೆ ಆಗಮಿಸಿದ್ದ ಪಿಎಂ ಮೋದಿ ಅವರು ನೇರವಾಗಿ ಗಾಂಧಿನಗರಕ್ಕೆ ತೆರಳಿ ತಮ್ಮ ತಾಯಿ ಹೀರಾಬಾ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಇದನ್ನೂ ಓದಿ:ಹೃದಯ ಸ್ತಂಭನ: ಮದುವೆ ಮಂಟಪದಲ್ಲೇ ಕುಸಿದು ಬಿದ್ದು 20 ವರ್ಷದ ವಧು ಮೃತ್ಯು
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಹಮದಾಬಾದ್ ನ ಶಿಲಾಜ್ ಅನುಪಮ್ ಶಾಲೆಯಲ್ಲಿ ಮತ ಚಲಾಯಿಸಿದರು.
Related Articles
ಎರಡನೇ ಹಂತದ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಘಟ್ಲೋಡಿಯಾ (ಅಹಮದಾಬಾದ್), ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅವರು ಬಿಜೆಪಿಯ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ವಿರಾಮಗಾಮ್ (ಅಹಮದಾಬಾದ್) ಮತ್ತು ಅಲ್ಪೇಶ್ ಠಾಕೂರ್ ಸ್ಪರ್ಧಿಸುತ್ತಿರುವ ಗಾಂಧಿನಗರ ದಕ್ಷಿಣ ಸೇರಿದೆ. ಅಲ್ಲದೆ, ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರು ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಬಂಡಾಯವೆದ್ದ ಮಧು ಶ್ರೀವಾಸ್ತವ್ ವಡೋದರಾ ಜಿಲ್ಲೆಯ ವಘೋಡಿಯಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.