Advertisement
ಇದನ್ನೂ ಓದಿ:Yatnal..,ನಿಮ್ಮನ್ನಂತೂ ವಿಪಕ್ಷ ನಾಯಕ ಮಾಡುವುದಿಲ್ಲ: ಮಾಹಿತಿ ಇದೆ ಎಂದ ಸಿದ್ದರಾಮಯ್ಯ!
Related Articles
Advertisement
2001ರಲ್ಲಿ ಪ್ರೇಮ್ ಚಂದ್ ಮಾಲಿ ಮತ್ತು ಸೋನು ವಿವಾಹವಾಗಿದ್ದರು. 2014ರ ವೇಳೆ ಇಬ್ಬರ ಸಂಬಂಧದಲ್ಲಿ ವಿರಸ ಮೂಡಲು ಆರಂಭವಾಗಿತ್ತು. ಕೌಟುಂಬಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಸೋನು 2015ರಲ್ಲಿ ಮೊದಲ ಬಾರಿಗೆ ಪತಿ ವಿರುದ್ಧ ದೂರು ದಾಖಲಿಸಿದ್ದಳು. ಇದರ ಪರಿಣಾಮ ಪತ್ನಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಜೀವನಾಂಶ ನೀಡಬೇಕೆಂದು ಕೋರ್ಟ್ ಆದೇಶ ನೀಡಿತ್ತು.
ಆದರೆ ಪ್ರೇಮ್ ಚಂದ್ ದಿನಗೂಲಿಯಾಗಿದ್ದರಿಂದ ಪತ್ನಿಗೆ ಜೀವನಾಂಶ ಕೊಡಲು ವಿಫಲನಾಗಿದ್ದರಿಂದ ಬಂಧನಕ್ಕೊಳಗಾಗಿದ್ದ. ಪ್ರೇಮ್ ಚಂದ್ ಸುಮಾರು ಐದು ತಿಂಗಳ ಕಾಲ ಜೈಲಿನಲ್ಲಿ ಕಾಲಕಳೆದಿದ್ದ. ಆಗ ಅಚ್ಚರಿ ಎಂಬಂತೆ ಪತ್ನಿ ಸೋನು ಪತಿಗೆ ಜಾಮೀನು ಕೊಡಿಸಿದ್ದಳು. ಬಳಿಕ ಇಬ್ಬರು ಪ್ರತ್ಯೇಕವಾಗಿ ವಾಸಿಸತೊಡಗಿದ್ದರು. ಸ್ವಲ್ಪ ಸಮಯದ ನಂತರ ಪತಿ ಪ್ರತ್ಯೇಕವಾಗಿ ವಾಸವಾಗಿದ್ದಿದ್ದಕ್ಕೆ ರಂಪಾಟ ನಡೆಸಿ ಪತ್ನಿ ಮೇಲೆ ಹಲ್ಲೆ ನಡೆಸಿಬಿಟ್ಟಿದ್ದ. ಕೊನೆಗೆ ಇಬ್ಬರ ಹೊಡೆದಾಟ ತೀವ್ರ ಸ್ವರೂಪಕ್ಕೆ ತೆರಳಿದಾಗ ಪತ್ನಿ ಮತ್ತೆ ದೂರು ನೀಡಿದ್ದಳು.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಪತ್ನಿ ಸೋನು ದೂರಿನ ಆಧಾರದ ಮೇಲೆ 2016ರಿಂದ 2018ರವರೆಗೆ ಪ್ರೇಮ್ ಚಂದ್ ಪ್ರತಿ ವರ್ಷ ಬಂಧನಕ್ಕೊಳಗಾಗಿದ್ದ. ಅದೇ ರೀತಿ ಪ್ರತಿ ಬಾರಿ ಪತ್ನಿಯೇ ಪತಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುತ್ತಿದ್ದಳು!
2019 ಮತ್ತು 2020ರಲ್ಲಿಯೂ ಪ್ರೇಮ್ ಚಂದ್ ಪತ್ನಿಗೆ ಜೀವನಾಂಶ ಕೊಡಲು ವಿಫಲನಾಗಿದ್ದರಿಂದ ಬಂಧನಕ್ಕೊಳಗಾಗಿದ್ದು, ಆ ಸಂದರ್ಭದಲ್ಲಿಯೂ ಆತನ ರಕ್ಷಣೆಗ ಬಂದಿದ್ದು ಪತ್ನಿ ಸೋನು. 2023ರಲ್ಲಿಯೂ ಜೀವನಾಂಶ ಕೊಡಲು ಸಾಧ್ಯವಾಗದೇ ಪ್ರೇಮ್ ಚಂದ್ ಬಂಧನಕ್ಕೊಳಗಾಗಿದ್ದು, ಜುಲೈ 4ರಂದು ಪತ್ನಿ ಸೋನು ಪತಿಗೆ ಜಾಮೀನು ಕೊಡಿಸಿದ್ದಳು ಎಂದು ವರದಿ ತಿಳಿಸಿದೆ.
ಈ ಬಾರಿ ಮನೆಯಲ್ಲಿ ತನ್ನ ಪರ್ಸ್ ಮತ್ತು ಸೆಲ್ ಫೋನ್ ನಾಪತ್ತೆಯಾಗಿರುವುದು ಪ್ರೇಮ್ ಚಂದ್ ಗಮನಕ್ಕೆ ಬಂದಿತ್ತು. ಪತ್ನಿ ಬಳಿ ವಿಚಾರಿಸಿದಾಗ ಆಕೆ ಅದರ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಹೇಳಿದಾಗ ಇಬ್ಬರ ನಡುವೆ ವಾಗ್ವಾದ ನಡೆದು ಮಾರಾಮಾರಿ ನಡೆದಿತ್ತು. ಕೊನೆಗೂ ಈ ರಂಪಾಟದಿಂದ ರೋಸಿಹೋದ ಪ್ರೇಮ್ ಚಂದ್ ಮನೆ ಬಿಟ್ಟು, ಪಠಾಣ್ ನಲ್ಲಿರುವ ತಾಯಿ ಜತೆ ವಾಸವಾಗಿದ್ದು, ಪತ್ನಿ ಮತ್ತು ಮಗನ ವಿರುದ್ಧ ಪ್ರೇಮ್ ಚಂದ್ ದೂರು ನೀಡಿರುವುದಾಗಿ ವರದಿ ವಿವರಿಸಿದೆ.