Advertisement

ಗುಜರಾತ್ ಜನರಿಗೆ 22 ವರ್ಷಗಳ ಅಭಿವೃದ್ಧಿಯ CD ತೋರಿಸಿ; ಹಾರ್ದಿಕ್

12:49 PM Nov 15, 2017 | Sharanya Alva |

ನವದೆಹಲಿ: 22 ವರ್ಷಗಳಲ್ಲಿ ಗುಜರಾತ್ ಎಷ್ಟು ಅಭಿವೃದ್ಧಿಯಾಗಿದೆ ಎಂಬ ವಿಡಿಯೋ ಪುರಾವೆ ಜನರಿಗೆ ಬೇಕಾಗಿದೆ ವಿನಃ, 22 ವರ್ಷದ ಯುವಕನ ವಿಡಿಯೋ ಅಲ್ಲ ಎಂದು ಹಾರ್ದಿಕ್ ಪಟೇಲ್ ತಿರುಗೇಟು ನೀಡಿದ್ದಾರೆ.

Advertisement

ಸೋಮವಾರ ಹಾರ್ದಿಕ್ ಪಟೇಲ್ ಇದ್ದಾರೆ ಎಂದು ಹೇಳಲಾದ ಸೆಕ್ಸ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಟೇಲ್, ಗುಜರಾತ್ ಜನರಿಗೆ 22 ವರ್ಷಗಳ ಅಭಿವೃದ್ಧಿಯ ಸೀಡಿ ಬೇಕಾಗಿದೆ ಹೊರತು, 22 ವರ್ಷದ ಹುಡುಗನ ಸೀಡಿ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ನನ್ನ ವಿರುದ್ಧ ಏನು ಬೇಕಾದರು ಮಾಡಲಿ, ಆದರೆ ನಾನು ನನ್ನ ಬೇಡಿಕೆಯಿಂದ ಹಿಂದೆ ಸರಿಯೋದಿಲ್ಲ. ನಾನು ಬಲವಾದ ಹೋರಾಟವನ್ನು ನೀಡಲಿದ್ದೇನೆ. ಹೀಗಾಗಿ ನನ್ನ ಹೆಸರನ್ನು ಹಾಳು ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು 24ರ ಹರೆಯದ ಹಾರ್ದಿಕ್ ಆರೋಪಿಸಿದ್ದಾರೆ. 

ಭಾರತೀಯ ಜನತಾ ಪಕ್ಷ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದ್ದು, ಬಿಜೆಪಿ ಅಪೇಕ್ಷೆ ಮೇರೆಗೆ ಸೀಡಿಯನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next