Advertisement
ಶಕ್ತಿಕೃಪ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶಿನೋರ್ ತಾಲೂಕಿನ ನಾಗರಿಕರ ಅನುಕೂಲಕ್ಕಾಗಿ ಈ ವಿಶೇಷ ಹವಾನಿಯಂತ್ರಿತ ಶವ ವಾಹನವನ್ನು ವ್ಯವಸ್ಥೆ ಮಾಡಲಾಗಿದೆ.
ಮಡಿದವರ ಅಂತಿಮ ವಿಧಿ-ವಿಧಾನವನ್ನು ಘನತೆಯಿಂದ ನಡೆಸುವಂತಾಗಲು ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದಿದ್ದಾರೆ ಶಕ್ತಿಕೃಪ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಜಿತುಭಾಯ್ ಪಟೇಲ್. “ಈ ಸೇವೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಯಾರು ಬೇಕಾದರೂ ವಾಹನವನ್ನು ಈ ಕಾರ್ಯಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ನಮ್ಮ ಟ್ರಸ್ಟ್‌ನಿಂದ ಈ ಪ್ರದೇಶದ ನಿವಾಸಿಗಳಿಗೆ ವೈದ್ಯಕೀಯ ಸೇವೆ ಕಲ್ಪಿಸಲಾಗಿದೆ. ಈ ಮೊದಲು ಶ್ಮಶಾನಕ್ಕೆ ಶವವನ್ನು ಸಾಗಿಸಲು ಗ್ರಾಮಸ್ಥರು ಟ್ರ್ಯಾಕ್ಟರ್‌ಗಳನ್ನು ಬಳಸುತ್ತಿದ್ದರು. ತಮ್ಮ ಪ್ರೀತಿ ಪಾತ್ರರ ಅಂತಿಮ ವಿಧಿ-ವಿಧಾನವನ್ನು ಗೌರವದಿಂದ ನಡೆಸುವಂತಾಗಲು ಈ ರೀತಿ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ,’ ಎಂದು ಟೇಲ್ ತಿಳಿಸಿದರು.