Advertisement

ಗುಜರಾತ್‌ನಲ್ಲಿ ನೋಟಾ ಒತ್ತಿದ ಮತದಾರರ ಸಂಖ್ಯೆ 5.50 ಲಕ್ಷ

07:15 PM Dec 18, 2017 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾಗಿರುವ ಗುಜರಾತ್‌ನಲ್ಲಿ 5.5 ಲಕ್ಷ ಜನರು ಮತಯಂತ್ರದಲ್ಲಿನ ನೋಟಾ ಬಟನ್‌ ಒತ್ತುವ ಮೂಲಕ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ. ಈ ವಿಷಯದಲ್ಲಿ ಗುಜರಾತ್‌ ಜನರು ಹಿಮಾಚಲ ಪ್ರದೇಶದ ಮತದಾರರನ್ನು ಹಿಂದಿಕ್ಕಿರುವುದು ಗಮನಾರ್ಹವಾಗಿದೆ. 

Advertisement

ಗುಜರಾತ್‌ನಲ್ಲಿ ನೋಟಾ ಪಾಲು, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ಹೊರತು ಪಡಿಸಿ ಇತರ ಯಾವುದೇ ಪಕ್ಷಕ್ಕಿಂತ ಅಧಿಕವಿದೆ. ಒಟ್ಟು ಚಲಾಯಿತ ಮತದಲ್ಲಿ ಬಿಜೆಪಿ ಪಾಲು ಶೇ.49; ಕಾಂಗ್ರೆಸ್‌ನದ್ದು ಶೇ.41.4; ಪಕ್ಷೇತರರದ್ದು ಶೇ.4.3. ನೋಟಾ ಒತ್ತಿದವರ ಪ್ರಮಾಣ ಶೇ.1.8. 

ಹಿಮಾಚಲ ಪ್ರದೇಶದಲ್ಲಿ ಚಲಾಯಿತವಾದ ಮತಗಳ ಪೈಕಿ ಬಿಜೆಪಿಯ ಪಾಲು ಶೇ.48.7; ಕಾಂಗ್ರೆಸ್‌ನದ್ದು ಶೇ.41.8; ಪಕ್ಷೇತರರದ್ದು ಶೇ.6.3. ನೋಟಾ ಪಾಲು ಶೇ.1.5.

Advertisement

Udayavani is now on Telegram. Click here to join our channel and stay updated with the latest news.

Next