ಕೋಲ್ಕತ್ತಾ: ಮುಂದಿನ ಸೀಸನ್ ನ ಐಪಿಎಲ್ ಗೆ ಈಗಾಗಲೇ ತಯಾರಿ ಆರಂಭವಾಗಿದೆ. ಮಿನಿ ಹರಾಜಿಗೂ ಮೊದಲು ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಬಿಸಿಸಿಗೆ ನೀಡುತ್ತಿದೆ. ಇದರ ನಡುವೆಯೇ ಆಟಗಾರರ ಟ್ರೇಡಿಂಗ್ ಕೂಡಾ ನಡೆಯುತ್ತಿದೆ.
ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಕಿವೀಸ್ ವೇಗಿ ಲಾಕಿ ಫರ್ಗ್ಯುಸನ್ ಮತ್ತು ಅಫ್ಘಾನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಯಶಸ್ವಿಯಾಗಿ ಟ್ರೇಡ್ ಮಾಡಿದೆ.
ಇದನ್ನೂ ಓದಿ:ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಈಗ ಇಲ್ಲ, ರಾಜಕೀಯ ವಿಷಮಯವಾಗಿದೆ: ಸಂಜಯ್ ರಾವತ್
ಇಂಡಿಯನ್ ಪ್ರೀಮಿಯರ್ ಲೀಗ್‌ನ 2022 ಆವೃತ್ತಿಯಲ್ಲಿ ಫರ್ಗ್ಯುಸನ್ ಅವರು ಗುಜರಾತ್ ಟೈಟಾನ್ಸ್ ಗಾಗಿ 13 ಪಂದ್ಯಗಳನ್ನು ಆಡಿದ್ದರು. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಾಲ್ಕು ವಿಕೆಟ್ ಗಳ ಸ್ಪೆಲ್ ಸೇರಿದಂತೆ 12 ವಿಕೆಟ್‌ಗಳನ್ನು ಪಡೆದಿದ್ದರು.
Related Articles
ಗುಜರಾತ್ ಟೈಟಾನ್ಸ್ ತಂಡವು ಫರ್ಗ್ಯುಸನ್ ಅವರನ್ನು ಬರೋಬ್ಬರಿ 10 ಕೋಟಿ ರೂ ನೀಡಿ ಖರೀದಿ ಮಾಡಿತ್ತು.