Advertisement

Gujarat: 6 ವರ್ಷದ ವಿದ್ಯಾರ್ಥಿನಿ ಮೇಲೆ ರೇ*ಪ್‌ ಗೆ ಪ್ರತಿರೋಧ-ಹತ್ಯೆ: ಪ್ರಾಂಶುಪಾಲನ ಬಂಧನ

04:39 PM Sep 24, 2024 | Team Udayavani |

ಅಹ್ಮದಾಬಾದ್(ಗುಜರಾತ್):‌ ದೈಹಿಕ ದೌರ್ಜನ್ಯಕ್ಕೆ ಯತ್ನಿಸಿದ್ದ ವೇಳೆ ಪ್ರತಿರೋಧ ವ್ಯಕ್ತಪಡಿಸಿದ 6 ವರ್ಷದ ವಿದ್ಯಾರ್ಥಿನಿಯನ್ನು ಉಸಿರುಗಟ್ಟಿಸಿ ಕೊ*ಲೆಗೈದಿರುವ ಘಟನೆ ಗುಜರಾತ್‌ ನ ದಾಹೋದ್‌ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ಘಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲನನ್ನು ಬಂಧಿಸಲಾಗಿದೆ. ದೈಹಿಕ ದೌರ್ಜನ್ಯಕ್ಕೆ ಪ್ರಯತ್ನಿಸಿ, ಬಾಲಕಿಯನ್ನು ಉಸಿರುಗಟ್ಟಿಸಿ ಕೊಂದ ನಂತರ ಶವವನ್ನು ಶಾಲಾ ಆವರಣದೊಳಗೆ ಎಸೆದಿದ್ದ.

ಬಾಲಕಿಯ ಬ್ಯಾಗ್‌, ಶೂಗಳು ಕ್ಲಾಸ್‌ ರೂಂ ಸಮೀಪ ಪತ್ತೆಯಾಗಿದೆ. ಆರೋಪಿ ಗೋವಿಂದ್‌ ನಾಥ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಪೊಲೀಸ್‌ ಅಧಿಕಾರಿ ರಾಜ್‌ ದೀಪ್‌ ಸಿಂಗ್‌ ಝಾಲಾ ಮಾತನಾಡಿ, ಆರು ವರ್ಷದ ವಿದ್ಯಾರ್ಥಿನಿಯ ಶವ ಶಾಲಾ ಆವರಣದೊಳಗೆ ಮಂಗಳವಾರ (23)ಸಂಜೆ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.

Advertisement

ಘಟನೆ ನಂತರ ಪ್ರದೇಶದಲ್ಲಿ ಜನರು ಭಯಭೀತಿಗೊಳಗಾಗಿದ್ದರು.. ಬಾಲಕಿಯನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂಬ ಅಂಶ ಪೋಸ್ಟ್‌ ಮಾರ್ಟ್‌ ಮ್‌ ವರದಿಯಲ್ಲಿ ಬಹಿರಂಗವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗಾಗಿ ಹತ್ತು ತಂಡವನ್ನು ರಚಿಸಿದ್ದರು. ಮಗು ಪ್ರತಿದಿನ ಪ್ರಾಂಶುಪಾಲ ಗೋವಿಂದ್‌ ನಾಥ್‌ ಜೊತೆ ಶಾಲೆಗೆ ಹೋಗುತ್ತಿತ್ತು ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಳು.

ಆರಂಭದಲ್ಲಿ ಪ್ರಾಂಶುಪಾಲನ ಬಳಿ ವಿಚಾರಿಸಿದಾಗ ತಾನು ಶಾಲೆಗೆ ಬಿಟ್ಟು, ಬೇರೆಡೆಗೆ ಕೆಲಸದ ನಿಮಿತ್ತ ತೆರಳಿರುವುದಾಗಿ ಹೇಳಿದ್ದ. ಆದರೆ ಘಟನೆ ನಡೆದ ದಿನದಂದು ಗೋವಿಂದ್‌ ಫೋನ್‌ ಲೊಕೇಶನ್‌ ವಿವರ ಪರಿಶೀಲಿಸಿದಾಗ ಆತನ ಅಸಲಿ ಮುಖ ಬಯಲಾಗಿತ್ತು. ಬಳಿಕ ಪ್ರಾಂಶುಪಾಲನನ್ನು ಬಂಧಿಸಿ ವಿಚಾರಿಸಿದಾಗ ಕೊಲೆಗೈದ ವಿಚಾರ ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next