Advertisement

ದಾಖಲೆ ಪ್ರಮಾಣದ ಕೇಸ್: ಗುಜರಾತ್ ನಲ್ಲಿ 4395 ಕೋವಿಡ್ 19 ಪ್ರಕರಣ ಪತ್ತೆ, 214 ಸಾವು

08:05 AM May 01, 2020 | Nagendra Trasi |

ಅಹಮದಾಬಾದ್: ಗುಜರಾತ್ ನಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್ 19 ವೈರಸ್ ಹರಡುತ್ತಿದ್ದು, ರಾಜ್ಯದಲ್ಲಿ 4395 ಮಂದಿಗೆ ಸೋಂಕುತಗುಲಿದ್ದು, ಸಾವಿನ ಸಂಖ್ಯೆ 214ಕ್ಕೆ ತಲುಪಿರುವುದಾಗಿ ವರದಿ ತಿಳಿಸಿದೆ.

Advertisement

ಭಾರತದಲ್ಲಿ ಗುರುವಾರದವರೆಗೆ 33,610 ಮಂದಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ 8,325 ಜನರುಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 1074ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ 1,718 ಹೊಸ ಕೋವಿಡ್ 19 ಪ್ರಕರಣಗಳುವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೋವಿಡ್ 19 ಹಾಟ್ ಸ್ಪಾಟ್ ಜಿಲ್ಲೆಗಳ ಸಂಖ್ಯೆ 170ರಿಂದ 129ಕ್ಕೆ ಇಳಿದಿರುವುದಾಗಿ ಕೇಂದ್ರ ಸಚಿವಾಲಯ ಬುಧವಾರ ತಿಳಿಸಿತ್ತು. ಕೋವಿಡ್ 19 ಮುಕ್ತ ಅಥವಾ ಹಸಿರು ವಲಯ ಕೂಡಾ 325ರಿಂದ 307ಕ್ಕೆ ಇಳಿಕೆಯಾಗಿತ್ತು.

ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಹೊಸ ನಿಯಮಾವಳಿ ಮೇ 4ರಿಂದ ಜಾರಿಯಾಗಲಿದೆ. ಈಗಾಗಲೇ ಘೋಷಣೆಯಾಗಿರುವ ಲಾಕ್ ಡೌನ್ ಮೇ 3ರಂದು ಕೊನೆಗೊಳ್ಳಲಿದೆ. ಮೇ 3ರ ನಂತರ ಲಾಕ್ ಡೌನ್ ಮುಂದುವರಿಯಲಿದೆಯಾ ಅಥವಾ ನಿರ್ಬಂಧ ಮಾತ್ರಮುಂದುವರಿಕೆಯಾಗಲಿದೆಯಾ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನಷ್ಟೇ ಸ್ಪಷ್ಟಪಡಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next