Advertisement

ಪಾಕ್‌ಗೆ ರಹಸ್ಯ ಮಾಹಿತಿ ರವಾನೆ: ಐಎಸ್‌ಐ ಏಜೆಂಟ್‌ ಬಂಧನ

09:35 AM Sep 01, 2020 | Nagendra Trasi |

ಅಹಮದಾಬಾದ್‌: ಗುಜರಾತ್‌ನ ಪಶ್ಚಿಮ ಕಛ್ ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಸೋಮವಾರ ಪಾಕ್‌ ಐಎಸ್‌ಐ ಏಜೆಂಟ್‌ವೊಬ್ಬನನ್ನು ಬಂಧಿಸಿದೆ. ಮುಂದ್ರಾ ಡಾಕ್‌ಯಾರ್ಡ್‌ ನಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ರಜಾಕ್‌ಭಾಯಿ ಕಂಭಾರ್‌ ಎಂಬಾತನೇ ಬಂಧಿತ ಐಎಸ್‌ಐ ಏಜೆಂಟ್‌ ಎಂದು ಹೇಳಲಾಗಿದೆ.

Advertisement

ಉತ್ತರಪ್ರದೇಶದಲ್ಲಿ ಜ.19ರಂದು ದಾಖಲಾದ ಪ್ರಕರಣ ಸಂಬಂಧ ಈತನನ್ನು ಬಂಧಿಸಲಾಗಿದೆ. ಈ ಹಿಂದೆಯೇ ಬಂಧಿತ ನಾಗಿದ್ದ ಮೊಹಮ್ಮದ್‌ ರಶೀದ್‌ ಎಂಬಾತ ಐಎಸ್‌ಐ ಹ್ಯಾಂಡ್ಲರ್‌ಗಳೊಂದಿಗೆ ನಂಟು ಹೊಂದಿದ್ದ ಮತ್ತು 2 ಬಾರಿ ಪಾಕ್‌ಗೆ ಭೇಟಿ ನೀಡಿದ್ದ. ಭಾರತದಲ್ಲಿರುವ ಸೂಕ್ಷ¾ವಾಗಿರುವ ಪ್ರದೇಶಗಳ ಫೋಟೋಗಳನ್ನು ಮತ್ತು ಸಶಸ್ತ್ರ ಪಡೆಗಳ ಚಲನವಲನಗಳ ಮಾಹಿತಿಯನ್ನು ಐಎಸ್‌ಐ ಹ್ಯಾಂಡ್ಲರ್‌ಗಳಿಗೆ ರವಾನಿಸಿದ್ದ.

ಈ ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಿದಾಗ ರಶೀದ್‌ಗೂ ಸೋಮವಾರ ಬಂಧಿತನಾದ ಕಂಭಾರ್‌ಗೂ ನಂಟಿರು ವುದು ತಿಳಿದುಬಂದಿತ್ತು. ಐಎಸ್‌ಐ ಏಜೆಂಟ್‌ ಆಗಿ ಕೆಲ ಸ ಮಾಡುತ್ತಿದ್ದ ಕಂಭಾರ್‌ ಪೇಟಿಎಂ ಮೂಲಕ 5 ಸಾವಿರ ರೂ.ಗಳನ್ನು ರಿಜ್ವಾನ್‌ ಎಂಬಾತನಿಗೆ ವರ್ಗಾಯಿಸಿದ್ದ.

ರಿಜ್ವಾನ್‌ ಅದನ್ನು ಪ್ರಮುಖ ಆರೋಪಿ ರಶೀದ್‌ ಖಾತೆಗೆ ಹಾಕಿದ್ದ. ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಗಳನ್ನು ನೀಡಿದ್ದಕ್ಕೆ ಪ್ರತಿಯಾಗಿ ಈ ಮೊತ್ತವನ್ನು ಪಾವತಿಸಲಾಗಿತ್ತು ಎಂದು ಎನ್‌ಐಎ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next