Advertisement

ಬರೋಬ್ಬರಿ 138 ದಂಪತಿಗಳ ವಿಚ್ಛೇದನ ತಪ್ಪಿಸಿದ್ದ ವಕೀಲನಿಗೇ ವಿಚ್ಛೇದನ !

07:50 AM Jun 17, 2023 | Pranav MS |

ಗಾಂಧೀನಗರ: ಬದುಕಲ್ಲಿ ಯಾವುದು ಘಟಿಸಬಾರದು ಎಂದುಕೊಳ್ಳುತ್ತೇವೋ, ಅದೇ ಘಟಿಸುತ್ತದೆ !ಇದಕ್ಕೆ ಗುಜರತ್‌ನ ವಕೀಲರೊಬ್ಬರ ಬದುಕೇ ನಿರ್ದಶನ. ಜೀವನದುದ್ದಕ್ಕೂ ಹಲವು ದಂಪತಿಗಳ ಬಂಧ ಉಳಿಸಲು ಸೆಣಸಾಡಿ, ಒಂದೂಗೂಡಿಸಿದ ವಕೀಲರ ಬದುಕೇ ಈಗ ವಿಚ್ಛೇಧನದ ಘಟಕ್ಕೆ ತಲುಪಿದ್ದು, ವಿಧಿ ವಿಪರ್ಯಾಸ ಜನರ ಮನಮಿಡಿದಿದೆ.

Advertisement

ಹೌದು, ಅಹ್ಮದಾಬಾದ್‌ನ ಹೈಕೋರ್ಟ್‌ನ ವಕೀಲರೊಬ್ಬರು ಸತತ 16 ವರ್ಷಗಳಿಂದ ತಮ್ಮ ವೃತ್ತಿ ಜೀವನದಲ್ಲಿದ್ದು, ಹಲವಾರು ಪ್ರಕರಣಗಳನ್ನು ನೋಡಿದ್ದಾರೆ. ಅದರಲ್ಲೂ ವಿಚ್ಚೇಧನ ಪ್ರಕರಣಗಳಲ್ಲಿ ನೂರಾರು ದಂಪತಿಗಳಿಗೆ ತಿಳಿಹೇಳಿ, ಕೌಟುಂಬಿಕ ಕಲಹಗಳನ್ನು ಬಗೆಹರಿಸಿ ವಿಚ್ಚೇಧನ ಹಿಂಪಡೆವಂತೆ ಮಾಡಿದ್ದಾರೆ. ಅವರ ಕಳಕಳಿಗೆ ಬದಲಾಗಿ ಮತ್ತೆ ಕುಟುಂಬವನ್ನು ಕಟ್ಟಿಕೊಂಡಿದ್ದು ಬರೋಬ್ಬರಿ 138 ಜೊಡಿ !

ಹೀಗೆ ಹಲವು ಜೋಡಿಗಳನ್ನು ಒಂದು ಮಾಡಿದ್ದೇ ವಕೀಲರ ಪಾಲಿಗೆ ಕಂಟಕವಾಗಿದೆ. ಇವರ ಕಾಳಜಿಯಿಂದ ಜೋಡಿ ಒಂದಾಗಿ ಪ್ರಕರಣ ಕೈತಪ್ಪುವುದು ಒಂದೆಡೆಯಾದರೆ,  ಕೌನ್ಸೆಲಿಂಗ್‌ ನೀಡಿಯೂ ಶುಲ್ಕ ಪಡೆಯದ ಅವರ ಔದಾರ್ಯ ಮತ್ತೂಂದಡೆ .ಇದರ ಪರಿಣಾಮ, ವಕೀಲರ ಕುಟುಂಬದಲ್ಲೇ ಆರ್ಥಿಕ ಸಂಕಷ್ಟ ಎದುರಾಗಿ, ವಕೀಲರ ಪತ್ನಿ ವಿಚ್ಛೇಧನ ನೀಡಿದ್ದಾರೆ. ಬೇರೆ ಜೋಡಿಗಳ ಮನವೊಲಿಸಲು ಯಶಸ್ವಿಯಾದ ವಕೀಲ, ತನ್ನ ಅರ್ಧಾಂಗಿಯ ಮನವೊಲಿಸುವಲ್ಲಿ ವಿಫ‌ಲರಾಗಿದ್ದರ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next