Advertisement

ಅಪರಾಧದಲ್ಲಿ ಗುಜರಾತ್‌ ನಂ.1

09:03 AM Dec 05, 2017 | Team Udayavani |

ಬೆಂಗಳೂರು: 2008 ರಿಂದ 16ರ ವರೆಗೆ ದೇಶದಲ್ಲಿ ನಡೆದ ಅಪರಾಧ ಪ್ರಕರಣಗಳ ದಾಖಲಾತಿಯಲ್ಲಿ ಗುಜರಾತ್‌ ನಂ.1 ಸ್ಥಾನದಲ್ಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತೀಯ ದಂಡ ಸಂಹಿತೆ, ಸ್ಥಳೀಯ ಕಾನೂನುಗಳು, ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಗುಜರಾತ್‌ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ 9ನೇ ಸ್ಥಾನದಲ್ಲಿದೆ ಎಂದು ಹೇಳಿದರು. ಅಪರಾಧ ಪ್ರಕರಣ ಕ್ಷೀಣ: 2008 ರಿಂದ 16ರ ವರೆಗೆ ರಾಜ್ಯದ ಅಪರಾಧ ಪ್ರಕರಣಗಳು ಕಡಿಮೆಯಾಗಿದ್ದು, 2008 ರಲ್ಲಿ 6.1 ರಷ್ಟಿದ್ದ ಪ್ರಕರಣಗಳು 2016 ಕ್ಕೆ ಶೇ. 5 ಕ್ಕೆ ಇಳಿದಿದೆ. ಅತ್ಯಾಚಾರ ಪ್ರಕರಣದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ 10 ನೇ ಸ್ಥಾನದಲ್ಲಿದೆ.

2008ರಲ್ಲಿ ರಾಜ್ಯದಲ್ಲಿ 446 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, 2016 ರಲ್ಲಿ 1655 ಪ್ರಕರಣಗಳು ದಾಖಲಾಗಿವೆ. ಕೊಲೆ ಪ್ರಕರಣಗಳನ್ನು 2008ಕ್ಕೆ ಹೋಲಿಸಿ ದರೆ ಕಡಿಮೆಯಾಗಿದೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next