Advertisement

ಗೋಶಾಲೆಯೊಳಗೊಂದು ಕೋವಿಡ್‌ ಕೇರ್‌ ಸೆಂಟರ್‌: ಗುಜರಾತ್‌ನಲ್ಲಿದೆ ವಿಶೇಷ ಆರೈಕೆ ಕೇಂದ್ರ

06:40 PM May 09, 2021 | Team Udayavani |

ಅಹಮದಾಬಾದ್‌: ಈ ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ ಸೋಂಕಿತರಿಗೆ ಹಸುವಿನ ಹಾಲು ಮತ್ತು ಗೋಮೂತ್ರದಿಂದ ತಯಾರಿಸಿದ ಆಯುರ್ವೇದಿಕ್‌ ಔಷಧವನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲ, ಇಲ್ಲಿ ಚಿಕಿತ್ಸೆಯೂ ಸಂಪೂರ್ಣ ಉಚಿತ!
ಗುಜರಾತ್‌ನ ಬನಸ್ಕಾಂತಾ ಜಿಲ್ಲೆಯ ತೆಟೋಡಾ ಎಂಬ ಗ್ರಾಮದಲ್ಲಿ ಗೋಶಾಲೆಯೊಳಗೇ ಕೊರೊನಾ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇದರ ಹೆಸರು “ವೇದಲಕ್ಷಣ ಪಂಚಗವ್ಯ ಆಯುರ್ವೇದ ಕೋವಿಡ್‌ ಐಸೋಲೇಷನ್‌ ಸೆಂಟರ್‌’.

Advertisement

ಮೇ 5ರಂದು ಈ ಕೇಂದ್ರ ಆರಂಭವಾಗಿದೆ. ಅಲ್ಪಪ್ರಮಾಣದ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಗೋವಿನ ಹಾಲು, ತುಪ್ಪ ಹಾಗೂ ಗೋಮೂತ್ರ ಸೇರಿದಂತೆ 8 ಆಯುರ್ವೇದಿಕ್‌ ಔಷಧಗಳನ್ನು ಸೇರಿಸಿ ತಯಾರಿಸಲಾದ ಔಷಧವನ್ನು ನೀಡಲಾಗುತ್ತದೆ.

ಅಲೋಪಥಿ ವ್ಯವಸ್ಥೆಯೂ ಇದೆ:
“ನಾವು ಕೊರೊನಾ ಸೋಂಕಿನ ಲಕ್ಷಣಗಳಿರುವ ರೋಗಿಗಳಿಗೆ ಪಂಚಗವ್ಯ ಆಯುರ್ವೇದ ಥೆರಪಿ ಮಾಡುತ್ತಿದ್ದೇವೆ. ದೇಸಿ ತಳಿಯ ಹಸುಗಳ ಗಂಜಲ ಮತ್ತು ಇತರೆ ಗಿಡಮೂಲಿಕೆಗಳನ್ನು ಬಳಸಿ “ಗೋವು ತೀರ್ಥ’ವನ್ನು ತಯಾರಿಸಿ ನೀಡುತ್ತಿದ್ದೇವೆ. ಜತೆಗೆ, ಹಸುವಿನ ಹಾಲಿನಿಂದ ತಯಾರಿಸಿದ ಚವನ್‌ಪ್ರಶ್‌ ಅನ್ನೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಬಳಸುತ್ತಿದ್ದೇವೆ.

ಇದನ್ನೂ ಓದಿ :MEILನಿಂದ ಆಸ್ಪತ್ರೆಗಳಿಗೆ ನಿತ್ಯ 500ರಿಂದ 600 ಉಚಿತ ಆಕ್ಸಿಜನ್ ಸಿಲಿಂಡರ್ ರವಾನೆಗೆ ಸಿದ್ಧತೆ

ಸೋಂಕಿತರೇನಾದರೂ ಅಲೋಪಥಿ ಔಷಧ ಬೇಕು ಎಂದು ಹೇಳಿದರೆ ಅದಕ್ಕೂ ವ್ಯವಸ್ಥೆ ಕಲ್ಪಿಸಿದ್ದೇವೆ’ ಎಂದಿದ್ದಾರೆ ಗೋಧಾಮ ಮಹಾತೀರ್ಥ್ ಪಥಮೇದನ ಬನಸ್ಕಾಂತಾ ಘಟಕದ ಟ್ರಸ್ಟಿ ಮೋಹನ್‌ ಜಾಧವ್‌.

Advertisement

ಈ ಕೇಂದ್ರದಲ್ಲಿ ಪಥಮೇದ ಗೋಶಾಲೆಯ ಇಬ್ಬರು ಆಯುರ್ವೇದಿಕ್‌ ವೈದ್ಯರು ಹಾಗೂ ಇಬ್ಬರು ಎಂಬಿಬಿಎಸ್‌ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ಉಚಿತವಾಗಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next