Advertisement

ಪ್ರೊ ಕಬಡ್ಡಿ: ಗುಜರಾತ್‌ಗೆ ಅರ್ಹ ಗೆಲುವು

06:30 AM Nov 17, 2018 | Team Udayavani |

ಅಹ್ಮದಾಬಾದ್‌: ಪ್ರೊ ಕಬಡ್ಡಿ 6ನೇ ಆವೃತ್ತಿ ಅಹ್ಮದಾಬಾದ್‌ ಚರಣದ ಮೊದಲ ಪಂದ್ಯದಲ್ಲಿ ಆತಿಥೇಯ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ಜಯದ ಆರಂಭ ಪಡೆದಿದೆ. ಗುಜರಾತ್‌ ತನ್ನ ತವರಿನ ಚರಣದ ಮೊದಲ ಪಂದ್ಯದಲ್ಲಿ 35-23 ಅಂಕಗಳ ಅಂತರದಿಂದ ಬೆಂಗಾಲ್‌ ವಾರಿಯರ್ ಅನ್ನು ಮಣಿಸಿತು.

Advertisement

ಶುಕ್ರವಾರ ಟ್ರಾನ್ಸ್‌ಸ್ಟೇಡಿಯಾದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಅತ್ಯುತ್ತಮ ಆಟ ಪ್ರದರ್ಶಿಸಿತು. ತಂಡದ ತಾರಾ ಆಟಗಾರರಾದ ಕೆ.ಪ್ರಪಂಚನ್‌ (9 ಅಂಕ) ರೈಡಿಂಗ್‌ನಿಂದ ಅದ್ಭುತ ಆಟ ಪ್ರದರ್ಶಿಸಿದರು. ಇವರಿಗೆ ಅಜಯ್‌ ಕುಮಾರ್‌ (6 ಅಂಕ) ಸಾಥ್‌ ನೀಡಿದರು. ಉಳಿದಂತೆ ಪರ್ವೇಶ್‌ (4 ಅಂಕ) ಉತ್ತಮ ಟ್ಯಾಕಲ್‌ ನಡೆಸುವ ಮೂಲಕ ತಂಡಕ್ಕೆ ಸಂಕಷ್ಟದಲ್ಲಿ ನೆರವಾದರು.

ಬೆಂಗಾಲ್‌ ತಂಡದ ತಾರಾ ಆಟಗಾರರು ಭಾರೀ ವೈಫ‌ಲ್ಯ ಅನುಭವಿಸಿದರು. ಮಣೀಂದರ್‌ ಸಿಂಗ್‌ (6 ಅಂಕ) ಹಾಗೂ ಜಾಂಗ್‌ ಕುನ್‌ ಲೀ (5 ಅಂಕ) ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಲು ವಿಫ‌ಲವಾದರು. ಹೀಗಾಗಿ ಬೆಂಗಾಲ್‌ ಗೆಲುವಿನ ಹತ್ತಿರ ಸುಳಿಯಲೂ ಸಾಧ್ಯವಾಗದೆ ಸೋಲು ಅನುಭವಿಸುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next