Advertisement

ಉಡುಪಿಯಲ್ಲೂ  ಗುಜರಾತ್‌ ಭೂಕಂಪ ಸಂಭವಿಸೀತೆ?

11:35 AM Aug 01, 2017 | |

ಉಡುಪಿ: ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರಕಾರವಿರುವಾಗ ಬಿಜೆಪಿ ಶಾಸಕರು ಗೋವಾಕ್ಕೆ ಹೋಗಿ ರೆಸಾರ್ಟ್‌ ರಾಜಕೀಯ ನಡೆಸಿದ್ದರು. ಈಗ ಗುಜರಾತ್‌ ಸರದಿ. ಅಲ್ಲಿನ ಸರಕಾರವನ್ನು ಅಸ್ಥಿರ ಗೊಳಿಸಲು ಅಲ್ಲ. ಅಲ್ಲಿನ ವಿಪಕ್ಷ ಕಾಂಗ್ರೆಸ್‌ನ ಶಾಸಕರು ಬಿಜೆಪಿಗೆ ಗುಳೆ ಹೋಗುವುದನ್ನು ತಡೆಯಲು ಕರ್ನಾಟಕಕ್ಕೆ ಕರೆಸಿ ಕೂಡಿಸಿಕೊಂಡಿದ್ದಾರೆ. 

Advertisement

ಎರಡು ವರ್ಷಗಳ ಹಿಂದೆ ಮೋದಿಗೆ ಪರ್ಯಾಯ ನಾಯಕ ಎಂದು ಬಿಂಬಿಸಿಕೊಂಡು ವಿಪಕ್ಷಗಳಿಗೆ ಆಶಾಕಿರಣವಾಗಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಬಿಜೆಪಿ ಗುಂಪಿಗೆ ಯೂ ಟರ್ನ್ ಹೊಡೆದ ಬಳಿಕ ಉತ್ತರ ಪ್ರದೇಶದಲ್ಲಿಯೂ ಇಂತಹ ನಡೆಗಳು ನಡೆಯುತ್ತಿವೆ. ಹೀಗಾದರೆ ಎಲ್ಲಿಯೂ ಏನೂ ಆದೀ ತಲ್ಲವೆ? ಕರ್ನಾಟಕದಲ್ಲಿಯೂ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಸಕಲ ಸಿದ್ಧತೆ ನಡೆಸಿದ್ದರೆ, ಕಾಂಗ್ರೆಸ್‌ಗೆ ಗಟ್ಟಿ ನೆಲೆಯಂತಿರುವ ಕರ್ನಾಟಕಕ್ಕೂ ಬಿಜೆಪಿ ಲಗ್ಗೆ ಹಾಕುತ್ತಿದೆಯೆ? ಇದನ್ನು ಅಲ್ಲಗಳೆಯುವಂತಿಲ್ಲ. ಉಡುಪಿಯ ಕಾಂಗ್ರೆಸ್‌ ಪಕ್ಷದ ಮುಂಚೂಣಿ ನಾಯಕರೊಬ್ಬರು “ಎಲ್ಲ ಕಡೆ ಆಗುತ್ತಿರುವ ಸನ್ನಿವೇಶ ನೋಡಿದರೆ ಇಲ್ಲಿಯೂ ಪ್ರಭಾವ ಬೀರಬಹುದು’ ಎಂದು ಆಪ್ತರೊಂದಿಗೆ ಹೇಳುತ್ತಿದ್ದರಂತೆ.

ಒಂದೇ ಕಲ್ಲಿಗೆ ಎರಡು ಹಣ್ಣು !
ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯುತ್ತದೋ ಇಲ್ಲವೋ ಎಂಬುದನ್ನು ಶೇ. 100 ಧೈರ್ಯದಲ್ಲಿ ಹೇಳುವಂತಿಲ್ಲ. ಹೀಗಾದರೆ ಸಾಮಾನ್ಯ ವ್ಯಕ್ತಿಯಾಗಿ ಹೇಗಪ್ಪ ಇರೋದು? ಇದನ್ನು ತಿಳಿದೇ ಬಿಜೆಪಿಯ ಒಂದು ಗುಂಪು ಆಂತರಿಕ ಭಿನ್ನಾಭಿಪ್ರಾಯಕ್ಕೆ ಔಷಧವಾಗಿ ಇವರನ್ನು ಕರೆತಂದರೆ ಹೇಗೆ ಎಂದು ಗಾಳ ಹಾಕುತ್ತಿರುವುದು ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿದೆ. ಹೀಗಾದರೆ ಸುಲಭದಲ್ಲಿ ಗೆಲುವು ಸಾಧಿಸುವ ವ್ಯಕ್ತಿ ಸಿಕ್ಕಿದಂತಾಗುತ್ತದೆ, ಸ್ಥಳೀಯ ನಾಯಕರಿಗೆ “ಮದ್ದು’ ಕುಡಿಸಿ ದಂತಾಗುತ್ತದೆ ಎಂಬುದು ಬಿಜೆಪಿಯ ಕೆಲವು ನಾಯಕರ ಲೆಕ್ಕಾಚಾರ. ಪಕ್ಷಾಂತರ ಮಾಡು ವಾಗ ಬ್ಲಾಕ್ ಆ್ಯಂಡ್‌ ವೈಟ್‌ ಆಗಿ ಯಾರೂ ತೋರಿಸಿಕೊಳ್ಳುವುದಿಲ್ಲ. ಮಾಧ್ಯಮಗಳಲ್ಲಿ “?’ ಚಿಹ್ನೆ ಸುದ್ದಿ ಸ್ವಲ್ಪ ಸ್ವಲ್ಪವೇ ಬಂದ ಬಳಿಕ ಸುದ್ದಿ ಗಾರರ ಪ್ರಶ್ನೆಗಳಿಗೂ “ಹೌದು’ ಯಾ “ಇಲ್ಲ’ ಎಂದು ಉತ್ತರಿಸದೆ ತೇಲಿಸಿ ಉತ್ತರ ಬಿಡುವ ಇವರು ಒಮ್ಮೆಲೇ ಅಧಿಕೃತವಾಗಿ ತೆರೆಗೆ ಬಂದು ಕಾಣಿಸಿ ಕೊಳ್ಳುವುದು ಇತ್ತೀಚಿನ ವಿದ್ಯಮಾನ. ಇದನ್ನು ಜೀರ್ಣಿಸಿಕೊಳ್ಳಲು “ಅರ್ಥಗಾರಿಕೆ/ಮಾತು ಗಾರಿಕೆ’ ಇದ್ದರೆ ಸಾಕು. ಚುನಾವಣೆಗೆ ಇನ್ನು ಒಂದು ವರ್ಷ ಇರುವುದರಿಂದ ಇನ್ನೇನೋ ವಿದ್ಯಮಾನಗಳು ನಡೆಯುವುದನ್ನೂ ಅಲ್ಲಗಳೆಯುವಂತಿಲ್ಲ.

ಭೂಕಂಪವಾದರೆ ಪರಿಣಾಮ
ದೊಡ್ಡ ಮಟ್ಟದಲ್ಲಿ ಇಂತಹ ಬೆಳವಣಿಗೆ ಕಂಡಾಗ ಜಿಲ್ಲೆಯ ಇತರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮೇಲೆ ಪರಿಣಾಮ ಬೀರುತ್ತದೆ. ಆಗ ಮೇಲ್ನೋಟಕ್ಕೆ ಕಂಡು ಬಂದ ಅಭ್ಯರ್ಥಿಗಳು ಅದಲು ಬದಲಾಗುತ್ತವೆ. ಪ್ರತಿಯೊಂದು ಕ್ಷೇತ್ರ ದಲ್ಲಿಯೂ ಇಂತಹ ಕಾರಣಗಳಿಗಾಗಿ ಒಂದ ಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಪಕ್ಷ ಬತ್ತಳಿಕೆಯಲ್ಲಿರಿಸಿಕೊಂಡಿರುತ್ತದೆ. ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ರಘುಪತಿ ಭಟ್‌ ಅವರ ಜತೆ ಕೆ. ಉದಯಕುಮಾರ ಶೆಟ್ಟಿ, ಬೈಕಾಡಿ ಸುಪ್ರಸಾದ ಶೆಟ್ಟಿ, ಬೈಂದೂರಿನಲ್ಲಿ ಕಿರಣ್‌ ಕೊಡ್ಗಿ ಹೆಸರುಗಳೂ ಇವೆ. ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆಯವರೂ ಕಾಪು ಅಥವಾ ಉಡುಪಿ ಕ್ಷೇತ್ರದ ಮೇಲೆ ಕಣ್ಣಿರಿಸಿದ್ದಾರೆ. ಅಲ್ಪಸಂಖ್ಯಾಕರಿಗೆ ಒಂದು ಸ್ಥಾನ ಕೊಡ ಬೇಕಾದರೆ ಕಾಪುವಿನಲ್ಲಿ ಕಾಂಗ್ರೆಸ್‌ನಿಂದ ಎಂ.ಎ. ಗಫ‌ೂರ್‌ ಟಿಕೆಟ್‌ ಆಕಾಂಕ್ಷಿ. ಪಕ್ಷದ ಹುದ್ದೆಗೂ ಪೈಪೋಟಿ ಕಡಿಮೆ ಇಲ್ಲ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷತೆಗೆ ಪ್ರಖ್ಯಾತ್‌ ಶೆಟ್ಟಿಯವರೂ ಓರ್ವ ಆಕಾಂಕ್ಷಿ. 

ಪುತ್ತೂರ ಮೇಲೆ ಕಣ್ಣು?
ಏತನ್ಮಧ್ಯೆ ರಾಜ್ಯ ಬಿಜೆಪಿ ಸಂಸದರಾಗಿರುವವರಿಗೆ ಲೋಕಸಭಾ ಕ್ಷೇತ್ರದ ನಿರಾಸಕ್ತಿ ಇದ್ದು ಅವರಲ್ಲಿ ಬಹುತೇಕರು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿರಿಸಿರುವುದು ಗುಟ್ಟಿನ ವಿಷಯವಲ್ಲ. ಇದಕ್ಕೆ ಕಾರಣವೆಂದರೆ ಇಲ್ಲಿ ಸಾಮಾನ್ಯ ಸಂಸದರಾಗಿರುವುದಕ್ಕಿಂತ ರಾಜ್ಯದಲ್ಲಿ ಸಚಿವರಾಗುವುದು ಚೆನ್ನ ಅಲ್ಲವೆ? “ಆನೆಯಾಗಿ ಸೊಪ್ಪು ತಿನ್ನುವುದಕ್ಕಿಂತ ಇರುವೆಯಾಗಿ ಸಕ್ಕರೆ ತಿನ್ನುವುದು ಉತ್ತಮ’ ಎಂಬ ಗಾದೆ ಮಾತಿ ನಂತೆ ಇದು. ಇದನ್ನು ತಿಳಿದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರಿಗೆ ಮಾತ್ರ ಹಸಿರು ನಿಶಾನೆ ತೋರಿದೆ ಎಂದು ಪಕ್ಷದವರು ಹೇಳುತ್ತಿದ್ದಾರೆ. ಆದರೂ ಕೆಲವರು ತಮ್ಮ ಆಕಾಂಕ್ಷೆಯನ್ನು ಹತ್ತಿಕ್ಕಿಕೊಳ್ಳಲಾಗದೆ ಬೇರೆ ಬೇರೆ ಕ್ಷೇತ್ರಗಳಿಗೆ ಹೋಗಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಹಿಂದೆ ಈ ಹಿತಾಸಕ್ತಿ ಇದೆ ಎನ್ನಲಾಗುತ್ತಿದೆ. ಈ ಲೆಕ್ಕಾಚಾರದಲ್ಲಿ ಪುತ್ತೂರು ಕ್ಷೇತ್ರದ ಮೇಲೆ ಉಡುಪಿಯ ಮುಂಚೂಣಿ ಜನಪ್ರತಿ ನಿಧಿಯೊಬ್ಬರು ಕಣ್ಣಿಟ್ಟಿದ್ದಾರೆಂದು ಪಕ್ಷದ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next