Advertisement

Crown: ಅಯೋಧ್ಯೆಯ ರಾಮಲಲ್ಲಾಗೆ 11 ಕೋಟಿ ಮೌಲ್ಯದ ವಜ್ರದ ಕಿರೀಟ ದಾನ ಮಾಡಿದ ವ್ಯಾಪಾರಿ

12:37 PM Jan 23, 2024 | Team Udayavani |

ಅಯೋಧ್ಯೆ: ನೂರಾರು ವರುಷಗಳ ಕನಸು ನನಸಾಗಿದೆ ಅದರ ಪರಿಣಾಮ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಂಡಿದೆ, ಸೋಮವಾರ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ.

Advertisement

ರಾಮ ಮಂದಿರದ ಉದ್ಘಾಟನಾ ದಿನ ಸಮೀಪ ಬರುತ್ತಿದ್ದಂತೆ ಭಕ್ತರು ತಮ್ಮ ಶಕ್ತಿಗೆ ಅನುಗುಣವಾಗಿ ಮಂದಿರಕ್ಕೆ ಸಹಾಯವನ್ನು ಮಾಡಿದ್ದಾರೆ ಅಲ್ಲದೆ ವಸ್ತುಗಳ ರೂಪದಲ್ಲಿಯೂ ದಾನಗಳನ್ನು ಮಾಡಿದ್ದಾರೆ ಅದರಂತೆ ಗುಜರಾತ್ ನ ವಜ್ರ ವ್ಯಾಪಾರಿಯೊಬ್ಬರು ರಾಮ ಮಂದಿರದಲ್ಲಿರುವ ಬಾಲ ರಾಮನ ವಿಗ್ರಹಕ್ಕೆ 11 ಕೋಟಿ ಮೌಲ್ಯದ ವಜ್ರದ ಕಿರೀಟವನ್ನು ದೇವರಿಗೆ ಸಮರ್ಪಿಸಿದ್ದಾರೆ.

ಸೂರತ್‌ನ ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿಯ ಮಾಲೀಕ ಮುಖೇಶ್ ಪಟೇಲ್ ಅವರು 6 ಕಿಲೋ ಗ್ರಾಂ. ತೂಕದ ಕಿರೀಟವನ್ನು ಭಗವಾನ್ ರಾಮನಿಗೆ ಅರ್ಪಿಸಿದರು, ಈ ಕಿರೀಟವನ್ನು ಚಿನ್ನ, ವಜ್ರಗಳು ಸೇರಿದಂತೆ ಅಮೂಲ್ಯವಾದ ರತ್ನದ ಕಲ್ಲುಗಳಿಂದ ಅಲಂಕರಿಸಲಾಗಿದೆ.

ರಾಮಮಂದಿರದ ಪ್ರಧಾನ ಅರ್ಚಕರು ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳ ಉಪಸ್ಥಿತಿಯಲ್ಲಿ, ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಮುಖೇಶ್ ಪಟೇಲ್ ಅವರು ಕಿರೀಟವನ್ನು ಹಸ್ತಾಂತರಿಸಿದರು.

ಇದನ್ನೂ ಓದಿ: UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಸಿಗಬೇಕು: ಎಲಾನ್ ಮಸ್ಕ್

Advertisement
Advertisement

Udayavani is now on Telegram. Click here to join our channel and stay updated with the latest news.

Next