ಅಹ್ಮದಾಬಾದ್: ಗುಜರಾತ್‌ನಲ್ಲಿ ನೂತನ ವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರದ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ನೂತನ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿ ದ್ದಾರೆ. ಕಳೆದ ಸರಕಾರ ದಲ್ಲಿ ಅವರು ಹೊಂದಿದ್ದ ಹಣಕಾಸು, ಗ್ರಾಮೀಣಾಭಿವೃದ್ಧಿಯಂಥ ಮಹತ್ವದ ಖಾತೆ ಗಳನ್ನು ಈ ಬಾರಿ ಅವರಿಂದ ಕಿತ್ತುಕೊಂಡಿರುವುದು ಅವರ ಬೇಸರಕ್ಕೆ ಕಾರಣ.
ಗುರುವಾರ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ಪಟೇಲ್ ಅವರಿಗೆ ಸಾರಿಗೆ ಹಾಗೂ ನಿರ್ಮಾಣ, ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆಗಳನ್ನು ವಹಿಸಲಾಗಿದ್ದು, ಇವಕ್ಕೆ ಹೆಚ್ಚುವರಿಯಾಗಿ ನರ್ಮದಾ, ಕಲ್ಪಸರ್ ಹಾಗೂ ಇನ್ನಿತರ ಮಹತ್ವದ ಯೋಜನೆಗಳ ಉಸ್ತುವಾರಿಯನ್ನೂ ನೀಡಲಾಗಿದೆ.
ಕಳೆದ ಬಾರಿ ಇವರು ಹೊಂದಿದ್ದ ಹಣಕಾಸು ಖಾತೆ ಈ ಬಾರಿ, ಸೌರಭ್ ಪಟೇಲ್ ಪಾಲಾಗಿದ್ದರೆ, ಗ್ರಾಮೀಣಾಭಿವೃದ್ಧಿ ಖಾತೆಯನ್ನು ಸಿಎಂ ರುಪಾಣಿ ಅವರಿಗೆ ನೀಡ ಲಾಗಿದೆ. ಈ ಬೆಳವಣಿಗೆಯಿಂದ ಮುನಿಸಿ ಕೊಂಡಿ ರುವ ನಿತಿನ್, ಖಾತೆ ಹಂಚಿಕೆಯಾಗಿ ಎರಡು ದಿನಗಳೇ ಕಳೆದಿದ್ದರೂ ಅಧಿಕಾರ ವಹಿಸಿಕೊಂಡಿಲ್ಲ. ಏತನ್ಮಧ್ಯೆ, ತಮ್ಮ ಅಸಮಾಧಾನವನ್ನು ಪಕ್ಷದ ವರಿಷ್ಠರಿಗೆ ತಲುಪಿಸಿರುವ ಅವರು, ಮೂರು ದಿನಗಳಲ್ಲಿ ಖಾತೆಗಳ ಮರು ಹಂಚಿಕೆಯಾಗಬೇಕೆಂದು ಗಡುವು ನೀಡಿದ್ದಾರೆನ್ನಲಾಗಿದೆ.
ಮುಷ್ಕರ, ಬಂದ್ ಬೆದರಿಕೆ: ಖಾತೆ ಹಂಚಿಕೆ ಯ ಲ್ಲಿ ನಿತಿನ್ ಅವರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಪಟೇಲ್ ಸಮು ದಾ ಯದ ನಾಯಕ ಲಾಲ್‌ಜೀ ಪಟೇಲ್, ಒಂದು ದಿನದ ಸಾಂಕೇತಿಕ ಮುಷ್ಕರಕ್ಕೆ ಕರೆ ನೀಡಿದ್ದಾರೆ. ನಿತಿನ್ ಅವರಿಗೆ ಉಪಮುಖ್ಯ ಮಂತ್ರಿ ಹುದ್ದೆ ನೀಡಲೇಬೇಕೆಂದೂ ಪಟ್ಟು ಹಿಡಿದಿರುವ ಅವರು, ತಮ್ಮ ಬೇಡಿಕೆ ಈಡೇರದಿದ್ದರೆ ರಾಜ್ಯ ಬಂದ್‌ಗೆ ಕರೆ ನೀಡುವ ಎಚ್ಚರಿಕೆ ನೀಡಿದ್ದಾರೆ.
ಹಣಕಾಸು ಖಾತೆ ಕೈತಪ್ಪಿರುವ ಕಾರಣಕ್ಕೆ ನಿತಿನ್ ಅವರು ಕ್ಯಾಬಿನೆಟ್‌ನಲ್ಲಿ 2ನೇ ಮಹತ್ವದ ಸ್ಥಾನ ಕಳೆದುಕೊಂಡಿದ್ದಾ ರೆಂದು ಭಾವಿಸಬೇಕಿಲ್ಲ. ಅವರು ನಮ್ಮ ಪಕ್ಷದ ಹಿರಿಯರು. ಅವರೆಂದಿಗೂ ಕ್ಯಾಬಿನೆಟ್‌ನಲ್ಲಿ 2ನೇ ಮಹತ್ವದ ಸಚಿವರೇ ಆಗಿರುತ್ತಾರೆ.
ವಿಜಯ್ ರುಪಾಣಿ, ಗುಜರಾತ್ ಸಿಎಂ
ನಿತಿನ್ ಪಟೇಲ್‌ಗೆ ಹಾರ್ದಿಕ್ ಆಹ್ವಾನ
ನಿತಿನ್ ಅಸಮಾಧಾನ ಕುರಿತ ವರದಿಗಳಿಗೆ ಪ್ರತಿಕ್ರಿಯಿಸಿರುವ ಪಟೇಲ್ ಮೀಸಲು ಹೋರಾಟಗಾರ ಹಾರ್ದಿಕ್ ಪಟೇಲ್, “”ಬಿಜೆಪಿಗೆ ನಿತಿನ್ ತೋರಿರುವ 27 ವರ್ಷದ ಸೇವೆಗೆ ಆ ಪಕ್ಷ ಅಗೌರವ ತೋರಿದೆ. ಇದಕ್ಕೆ ಪ್ರತೀಕಾರವಾಗಿ, ಬಿಜೆಪಿ ಬಿಡಲು ನಿತಿನ್ ಭಾಯ್ ಮನಸ್ಸು ಮಾಡಿದರೆ, ಕನಿಷ್ಠ 10 ಬಿಜೆಪಿ ಶಾಸಕರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಲಿ. ಆಗ ಅವರಿಗೆ ಸೂಕ್ತ ಹುದ್ದೆ ದೊರಕಿಸಿಕೊಡಲು ಯತ್ನಿಸುತ್ತೇನೆ” ಎಂದಿದ್ದಾರೆ.