Advertisement

ಗುಜರಾತ್ ಶಾಸಕರೊಬ್ಬರಿಗೆ ಸೋಂಕು ದೃಢ: ಸಿಎಂ ವಿಜಯ್ ರೂಪಾನಿ ಅವರೊಂದಿಗಿನ ಸಭೆಯಲ್ಲಿ ಭಾಗಿ

09:16 AM Apr 16, 2020 | Mithun PG |

ಅಹಮದಬಾದ್: ಗುಜರಾತ್  ನ ಕಾಂಗ್ರೆಸ್ ಶಾಸಕರೊಬ್ಬರಿಗೆ  ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರು  ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಇತರ ಇಬ್ಬರು ಮಂತ್ರಿಗಳೊಂದಿಗಿನ ಸಭೆಯೊಂದರಲ್ಲಿ ಭಾಗವಹಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

Advertisement

ಕಾಂಗ್ರೆಸ್​ ಶಾಸಕ ಇಮ್ರಾನ್​ ಖೇದವಾಲ ಅವರಿಗೆ ಮಂಗಳವಾರ ಸಂಜೆ ಸೋಂಕು ತಗುಲಿರುವುದು ಖಚಿತವಾಗಿತ್ತು.  ಮಂಗಳವಾರ ಗಾಂಧಿನಗರದ ಸಿಎಂ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಸುದ್ದಿಗೋಷ್ಠಿ ಕರೆದಿದ್ದರು. ಈ ಸುದ್ದಿಗೋಷ್ಠಿಯಲ್ಲಿ ಇಮ್ರಾನ್​ ಸೇರಿ ಇತರ ಕಾಂಗ್ರೆಸ್​ ಶಾಸಕರು ಭಾಗಿಯಾಗಿದ್ದರು. ಗಮನಾರ್ಹ ಸಂಗತಿಯೆಂದರೇ ಮುಖ್ಯಮಂತ್ರಿಯವರೊಂದಿಗಿನ ಸಭೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು. ಪ್ರತಿಯೊಬ್ಬರು ಕನಿಷ್ಠ ಒಂದು ಮೀಟರ್ ಅಂತರದಲ್ಲಿ ಕುಳಿತುಕೊಂಡಿದ್ದರು. ಮುಖ್ಯಮಂತ್ರಿಯಲ್ಲದೆ, ಸಭೆಯಲ್ಲಿ ಆರೋಗ್ಯ ಮತ್ತು ಗೃಹ ಸಚಿವರು ಭಾಗವಹಿಸಿದ್ದರು

ಈ ಶಾಸಕ ಪತ್ರಿಕಾಗೋಷ್ಠಿಯೊಂದರಲ್ಲೂ  ಭಾಗವಹಿಸಿದ್ದು ಇದರಲ್ಲಿ ರಾಜ್ಯದ ಇತರ ಶಾಸಕರು ಮತ್ತು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.  ಹಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಇದ್ದುದರಿಂದ  ಕೋವಿಡ್ -19 ಪರೀಕ್ಷೆಗೆ ಒಳಗಾಗಿದ್ದರು. ಆದರೇ ರಿಪೋರ್ಟ್ ಬರುವ ಮೊದಲು ಹಲವು ಸಭೆಗಳಲ್ಲಿ  ಭಾಗವಹಿಸಿದ್ದಾರೆಂದು ವರದಿ ತಿಳಿಸಿದೆ.

ಪ್ರಸ್ತುತ ಅವರನ್ನು ಗಾಂಧಿನಗರದ ಎಸ್‌ವಿಪಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಸಕರೊಂದಿಗೆ ಎಷ್ಟು ಜನ ಸಂಪರ್ಕಿತರಾಗಿದ್ದಾರೆ ಎಂಬ ಸಮರ್ಪಕ ಮಾಹಿತಿ ಲಭ್ಯವಾಗಿಲ್ಲ. ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಗುಜರಾತ್‌ನಲ್ಲಿ ಇದುವರೆಗೆ 617 ಕೋವಿಡ್-19  ಪ್ರಕರಣಗಳು ವರದಿಯಾಗಿದ್ದು, 26 ಮಂದಿ ಸಾವನ್ನಪ್ಪಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next