ಗಾಂಧಿನಗರ(ಗುಜರಾತ್): ಗುಜರಾತ್ ನ ವಡೋದರಾದ ಮಂಜಲ್ ಪುರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ದೀರ್ಘಕಾಲದಿಂದ ಇದ್ದ ಗೊಂದಲಕ್ಕೆ ಕೊನೆಗೂ ಭಾರತೀಯ ಜನತಾ ಪಕ್ಷ ತೆರೆ ಎಳೆದಿದೆ. ಇದೀಗ ಮಂಜಲ್ ಪುರ ಕ್ಷೇತ್ರಕ್ಕೆ ಹಿರಿಯ ವ್ಯಕ್ತಿ ಯೋಗೇಶ್ ಪಟೇಲ್ ಅವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಬಿಕ್ಕಟ್ಟನ್ನು ಪರಿಹರಿಸಿದೆ.
ಇದನ್ನೂ ಓದಿ:”ದಯಮಾಡಿ ನನ್ನನ್ನು ಬಿಟ್ಟುಬಿಡಿ..”: ಕೈ ಮುಗಿದು ಕೇಳಿದ ಶಾಸಕ ರಾಮದಾಸ್
ಮಂಜಲ್ ಪುರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದೇನೆ. ಬಿಜೆಪಿ ಪ್ರಾದೇಶಿಕ ಅಧ್ಯಕ್ಷ ಸಿ.ಆರ್.ಪಾಟೀಲ್ ನನ್ನ ಹೆಸರನ್ನು ಘೋಷಿಸಿದ್ದಾರೆ ಎಂದು ಪಟೇಲ್ ತಿಳಿಸಿದ್ದಾರೆ.
ಕೊನೆ ದಿನ ಹೆಸರು ಘೋಷಣೆ:
Related Articles
ವರದಿಗಳ ಪ್ರಕಾರ, ಬಿಜೆಪಿ ಹಿರಿಯ ಮುಖಂಡ ಯೋಗೇಶ್ ಪಟೇಲ್ ಅವರು ಏಳನೇ ಬಾರಿ ವಿಧಾನಸಭೆ ಪ್ರವೇಶಿಸಲು ಯತ್ನಿಸುತ್ತಿದ್ದು, ಈ ಬಾರಿ ಮಂಜಲ್ ಪುರ್ ಕ್ಷೇತ್ರಕ್ಕೆ ಹಲವಾರು ಅಭ್ಯರ್ಥಿಗಳ ಹೆಸರು ಪ್ರಸ್ತಾಪವಾಗಿತ್ತು. ಮತ್ತೊಂದೆಡೆ ಮಂಜಲ್ ಪುರ ಕ್ಷೇತ್ರಕ್ಕೆ ಆನಂದಿಬೆನ್ ಪುತ್ರಿ ಅನಾರ್ ಪಟೇಲ್ ಹೆಸರಿನ ಬಗ್ಗೆಯೂ ಚರ್ಚೆ ನಡೆದಿತ್ತು ಎಂದು ತಿಳಿಸಿದೆ.
ಕೊನೆಗೂ ಬಿಜೆಪಿ ಹೈಕಮಾಂಡ್ ಯೋಗೇಶ್ ಪಟೇಲ್ ಅವರನ್ನು ಹೆಸರನ್ನು ಅಂತಿಮಗೊಳಿಸಿ ಬುಧವಾರ ತಡರಾತ್ರಿ ಮಾಹಿತಿಯನ್ನು ರವಾನಿಸಿತ್ತು. ಮಂಜಲ್ ಪುರ ಕ್ಷೇತ್ರಕ್ಕೆ ಮಾತ್ರ ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೆ ಯಾವ ಅಭ್ಯರ್ಥಿಯ ಹೆಸರನ್ನು ಬಿಜೆಪಿ ನಿರ್ಧರಿಸಿಲ್ಲವಾಗಿತ್ತು. ಮಾತುಕತೆ ನಂತರ ಬಿಕ್ಕಟ್ಟನ್ನು ಪರಿಹರಿಸಿದ ಬಿಜೆಪಿ ಹೈಕಮಾಂಡ್ ಮಂಜಲ್ ಪುರ ಕ್ಷೇತ್ರಕ್ಕೆ ಯೋಗೇಶ್ ಪಟೇಲ್ ಹೆಸರನ್ನು ಅಂತಿಮಗೊಳಿಸಿರುವುದಾಗಿ ವರದಿ ವಿವರಿಸಿದೆ.
ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ ಎಂದು ಯೋಗೇಶ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ ಪಟೇಲ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಚಿರಾಗ್ ಹನ್ಸ್ ಕುಮಾರ್ ಝವೇರಿ ಅವರನ್ನು 56,362 ಮತಗಳ ಅಂತರದಿಂದ ಸೋಲಿಸಿದ್ದರು. ಯೋಗೇಶ್ ಪಟೇಲ್ 1,05,036 ಮತ ಗಳಿಸಿದ್ದು, ಚಿರಾಗ್ ಝವೇರಿ 48,674 ಮತ ಪಡೆದಿದ್ದರು.