Advertisement

ಸೂರತ್‌ ಕಟ್ಟಡದಲ್ಲಿ ಬೆಂಕಿ: ಕೋಚಿಂಗ್‌ ಕ್ಲಾಸ್‌ನ 13 ವಿದ್ಯಾರ್ಥಿಗಳ ದಾರುಣ ಸಾವು

08:52 AM May 25, 2019 | Sathish malya |

ಸೂರತ್‌ : ಇಲ್ಲಿನ ವಾಣಿಜ್ಯ ಸಂಕೀರ್ಣದ ಮೂರನೇ ಮತ್ತು ನಾಲ್ಕನೇ ಮಹಡಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕೋಚಿಂಗ್‌ ಕ್ಲಾಸ್‌ ನ ಕನಿಷ್ಠ 15 ವಿದ್ಯಾರ್ಥಿಗಳು ಮೃತಪಟ್ಟರು.

Advertisement

ಈ ದಾರಣ ಘಟನೆ ಇಂದು ಶುಕ್ರವಾರ ಮಧ್ಯಾಹ್ನ ಸಂಭವಿಸಿತು. ತಕ್ಷಶಿಲಾ ವಾಣಿಜ್ಯ ಸಂಕೀರ್ಣದ 3 ಮತ್ತು 4ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೋಚಿಂಗ್‌ ಕ್ಲಾಸ್‌ ನ ವಿದ್ಯಾರ್ಥಿಗಳು ಕಟ್ಟಡದಿಂದ ಕೆಳಗೆ ಹಾರಿ ಜೀವ ಉಳಿಸಿಕೊಳ್ಳಲು ಯತ್ನಿಸಿದರು ಎಂದು ಗುಜರಾತ್‌ ಡಿಸಿಎಂ ನಿತಿನ್‌ ಪಟೇಲ್‌ ತಿಳಿಸಿದರು.

ಬೆಂಕಿ ದುರಂತ ಸಂಭವಿಸಿದೊಡನೆಯೇ 19 ಅಗ್ನಿಶಾಮಕಗಳು ಸ್ಥಳಕ್ಕೆ ಧಾವಿಸಿ ಬಂದವು. ಬೆಂಕಿಯನ್ನು ನಂದಿಸಲು ಎರಡು ಹೈಡ್ರೋಲಿಕ್‌ ವೇದಿಕೆಗಳನ್ನು ಬಳಸಲಾಯಿತು.

ಕಟ್ಟಡದಲ್ಲಿ ವಾಸವಾಗಿದ್ದವರನ್ನು ಮತ್ತು ಕೋಚಿಂಗ್‌ ಕ್ಲಾಸ್‌ ವಿದ್ಯಾರ್ಥಿಗಳನ್ನು ಪಾರು ಮಾಡಲು ಸ್ಥಳೀಯರು ನೆರವಾದರು.

Advertisement

Udayavani is now on Telegram. Click here to join our channel and stay updated with the latest news.

Next