ನವದೆಹಲಿ: ವಾರವಿಡೀ ಕೆಲಸ ಮಾಡಿ, ಶನಿವಾರ, ಭಾನುವಾರ ಬಂದರೆ ಸಾಕು ಹಾಯಾಗಿ ಕುಳಿತು ಕಾಲ ಕಳೆಯುತ್ತೇವೆ. ವಾರಾಂತ್ಯದ ದಿನಗಳನ್ನು ನಾವು ಸಂತಸದಿಂದ ಕಳೆಯುತ್ತೇವೆ. ಈ ಸಮಯದಲ್ಲಿ ಸುತ್ತಾಡುವುದು, ಸಿನಿಮಾ ನೋಡುವುದು ಹೀಗೆ.. ನಮಗೆ ಖುಷಿ ಕೊಡುವ ಜಾಗಕ್ಕೆ ಹೋಗುತ್ತೇವೆ.
ವೀಕೆಂಡ್ ದಿನಗಳನ್ನು ಕಳೆದ ಮೇಲೆ ಬರುವ, ಸೋಮವಾರ ನಿಜಕ್ಕೂ ನಮಗೆ ʼಮಂಡೇʼ ಬಿಸಿಯ ದಿನವೇ ಆಗಿರುತ್ತದೆ. ಕಾರಣ ವಾರಾಂತ್ಯದ ದಿನವನ್ನು ಮೋಜಿನಿಂದ ಕಳೆದ ಮೇಲೆ ನಮಗೆ ಸೋಮವಾರದ ದಿನ ಆಲಸ್ಯದ ದಿನವಾಗಿರುತ್ತದೆ. ಎಷ್ಟೋ ಬಾರಿ ಕೆಲಸಕ್ಕೆ ಹೋಗೋದೇ ಬೇಡ. ರಜೆ ಮಾಡುವ, ಹೆಚ್ಚು ಹೊತ್ತು ಮಲಗಿ ಬಿಡುವವೆಂದು ಅನ್ನಿಸುತ್ತದೆ. ಈ ನಮ್ಮ ಆಲಸ್ಯದ ದಿನಕ್ಕೆ ಈಗ ಅಧಿಕೃತ ಮುದ್ರೆಯೊಂದು ಸಿಕ್ಕಂತೆ ಆಗಿದೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಅಧಿಕೃತ ಟ್ವಟರ್ ಖಾತೆಯನ್ನು ಸೋಮವಾರದ ದಿನವನ್ನು ವಾರದ ಕೆಟ್ಟ ದಿನ ( ಆಲಸ್ಯದ ದಿನ) ವನ್ನಾಗಿ ಘೋಷಿಸಿದೆ.ಟ್ವಿಟರ್ ನಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ಟ್ವೀಟ್ ವೈರಲ್ ಆಗಿದೆ. ನಾಲ್ಕೂವರೆ ಲಕ್ಷಕ್ಕೂ ಅಧಿಕ ಮಂದಿ ಇದನ್ನು ಲೈಕ್ ಮಾಡಿ ನಾನಾ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಟ್ವಿಟರ್ ಬಳಕೆದಾರರೊಬ್ಬರು “ಇದನ್ನು ಘೋಷಿಸಲು ನಿಮಗೆ ಸಾಕಷ್ಟು ಸಮಯ ಹಿಡಿಯಿತು” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರ ಈ ಕಾರಣಕ್ಕಾಗಿ ನಾನು ಸೋಮವಾರ ರಜೆ ತೆಗೆದುಕೊಳ್ಳುತ್ತೇನೆ ಎಂದು ಬರೆದಿದ್ದಾರೆ.