Advertisement

ರಾಷ್ಟ್ರಪತಿಯಿಂದ ಸಮ್ಮಾನ ಪಡೆದವ ನಕಲಿ ಡಾಕ್ಟರ್‌!

01:37 AM Jun 13, 2017 | Karthik A |

ಕೋಲ್ಕತಾ: ಆತ ಹೌರಾದ ರಾಮರಾಜತಲ್ಲಾ ಕೇದಾರ್‌ನಾಥ್‌ ಭಟ್ಟಾಚಾರ್ಯ ಬೀದಿಯ ಪ್ರಸಿದ್ಧ ಡಾಕ್ಟರ್‌. ಡಾಕ್ಟರ್‌ ಬಾಬು ಎಂದೇ ಪ್ರಸಿದ್ಧ. ಹೆಸರು ಡಾ ಸುರೇಂದ್ರ ಬಾಬು ಭಟ್ಟಾಚಾರ್ಯ. ಕಡಿಮೆ ಶುಲ್ಕ ಪಡೆದು ರೋಗಿಗಳ ಆಪದ್ಭಾಂಧವ ಎಂದೇ ಪ್ರಸಿದ್ಧ. ಇದಕ್ಕಾಗಿ ರಾಷ್ಟ್ರಪತಿಗಳಿಂದಲೂ ಸಮ್ಮಾನ ಗಿಟ್ಟಿಸಿಕೊಂಡಿದ್ದ. ಇಂಗ್ಲೆಂಡ್‌ನ‌ ಪ್ರಸಿದ್ಧ ರಾಯಲ್‌ ಕಾಲೇಜ್‌ ಆಫ್ ಫಿಸೀಶಿಯನ್ಸ್‌ನಲ್ಲಿ ಕಲಿತಿದ್ದಾಗಿ, ಸಣ್ಣ ಪ್ರಾಯದಲ್ಲಿ ಈ ಸಾಧನೆ ಮಾಡಿ ಗಿನ್ನೆಸ್‌ ದಾಖಲೆ ಪುಸ್ತಕಕ್ಕೆ ಸೇರಿದ್ದಾಗಿಯೂ ಹೇಳಿದ್ದ. ಆದರೆ ಇದೆಲ್ಲ ನಕಲಿ ಅಂತ ಈಗ ಗೊತ್ತಾಗಿದೆ. ಕೆಲ ದಿನಗಳಿಂದ ಪಶ್ಚಿಮ ಬಂಗಾಲದಲ್ಲಿ ನಕಲಿ ಡಾಕ್ಟರ್‌ಗಳ ವಿರುದ್ಧ ದಾಳಿ ನಡೆಸಲಾಗುತ್ತಿದ್ದು ಈ ವೇಳೆ ಸಿಕ್ಕಿಬಿದ್ದಿದ್ದಾನೆ.

Advertisement

ಹೌರಾದ  ವೈದ್ಯ ಆಯನ್‌ ಭಟ್ಟಾಚಾರ್ಯ ಎಂಬವರು ತಮ್ಮ ರಿಜಿಸ್ಟ್ರೇಷನ್‌ ನಂಬರ್‌ ಬಳಸಿ ಸುರೇಂದ್ರ ಆಸ್ಪತ್ರೆ ನಡೆಸುತ್ತಿರುವುದಾಗಿ ಆರೋಪಿಸಿದ್ದರು. ತನಿಖೆ ವೇಳೆ ಆತ ನಕಲಿ ಡಾಕ್ಟರ್‌ ಎಂದು ತಿಳಿದುಬಂದಿದೆ. ಜನರನ್ನು ವಂಚಿಸಲು ಆತ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕಲಿತು, ಪ್ರಮಾಣ ಪತ್ರ ಪಡೆದಿದ್ದಾಗಿ ಹೇಳಿಕೊಳ್ಳು ತ್ತಿದ್ದ. ಇದೆಲ್ಲ ನಕಲಿ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next