Advertisement

ಒಂದೂವರೆ ವರ್ಷದ ಮಗಳನ್ನು ಕೊಂದ ಪಾಪಿ ತಂದೆಗೆ ಮರಣದಂಡನೆ ಶಿಕ್ಷೆ

03:40 PM Feb 19, 2021 | Team Udayavani |

ಗದಗ: ಒಂದೂವರೆ ವರ್ಷದ ಮಗಳನ್ನು ಕೊಂದಿದ್ದ ಅಪರಾಧಿ ತಂದೆಗೆ ಇಲ್ಲಿನ  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ.

Advertisement

ರೋಣ ತಾಲೂಕಿನ ಹುಲ್ಲೂರ ಗ್ರಾಮದ ಪ್ರಶಾಂತಗೌಡ ಪಾಟೀಲ್ ಎಂಬ ಅಪರಾಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

ಈತ 2013 ರಲ್ಲಿ ಅನ್ಯ ಧರ್ಮದ ಯುವತಿಯನ್ನು ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ತಿಂಗಳ ನಂತರ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ. ಪತಿಯ ಕಿರುಕುಳದಿಂದ ನೊಂದಿದ್ದ ಮಹಿಳೆ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಳು. ಈ ನಡುವೆ ಹೆಣ್ಣು ಮಗು ಜನಿಸಿತ್ತು. ಹೀಗಾಗಿ ದಂಪತಿಯನ್ನು ಕೂಡಿಸಿ ಸಂಧಾನ ಮಾಡಲಾಗಿತ್ತು. ಹಿರಿಯರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಪತ್ನಿ ಮತ್ತು ಮಗುವನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಪ್ರಶಾಂತ ಗೌಡ ತನ್ನ ಪತ್ನಿ ಮತ್ತು ಮಗುವನ್ನು ತಮ್ಮೊಂದಿಗೆ ಕರೆದೊಯ್ದಿದ್ದರು.

ಇದನ್ನೂ ಓದಿ:‘ಸಮೋಸ ಬಿಸಿಯಿಲ್ಲ’ ಎಂದು ಹೋಟೆಲ್ ಸಿಬ್ಬಂದಿಯ ಕೊಲೆಯತ್ನ ಪ್ರಕರಣ: ಇಬ್ಬರ ಬಂಧನ

ಬಳಿಕ ರೋಣ ಸಿದ್ದಾರೂಢ ಮಠದ ಬಳಿ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಆಗ ಸಾಂತ್ವನ ಕೇಂದ್ರ ಕೇಸ್ ಹಿಂಪಡೆಯುವಂತೆ ಆಗಾಗ ಕಿರುಕುಳ ನೀಡುತ್ತಿದ್ದ. ಆಗ ನೊಂದ ಪತ್ನಿ ಮಗುವಿನ ಜೀವನಾಂಶಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಳು. ಇದರಿಂದ ಕುಪಿತಗೊಂಡಿದ್ದ ಪ್ರಶಾಂತ್‌ ಗೌಡ 2015ರ ಏಪ್ರಿಲ್ 6 ರಂದು ತನ್ನ ಒಂದೂವರೆ ವರ್ಷದ ಮಗುವನ್ನುಅಪಹರಿಸಿ, ಗಜೇಂದ್ರಗಡದ ಕಾಲಕಾಲೇಶ್ವರ ಬೆಟ್ಟದಲ್ಲಿ ಕತ್ತುಹಿಸುಕಿ ಕೊಲೆ ಮಾಡಿದ್ದ. ಅಲ್ಲದೇ, ಮಗುವಿನ ಮೃತದೇಹವನ್ನೂ ಸುಟ್ಟು, ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದ.

Advertisement

ಇದನ್ನೂ ಓದಿ:ವೇಣೂರು: ಮನೆಯ ಪಕ್ಕಾಸಿಗೆ ಚೂಡಿದಾರ ಶಾಲು ಬಿಗಿದು ಯುವತಿ ಆತ್ಮಹತ್ಯೆ

ಈ ಕುರಿತು ರೋಣ ಪೊಲೀಸರು ಪ್ರಕರಣ ಭೇದಿಸಿದಾಗ ಹೆತ್ತ ತಂದೆಯೇ ಕೊಲೆ ಮಾಡಿರುವುದು ಸಾಬೀತಾಗಿದೆ. ಈ ಕುರಿತು ಪರ- ವಿರೋಧ ವಾದ ಆಲಿಸಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜಶೇಖರ ವಿ ಪಾಟೀಲ್, ಅಪರಾಧಿಕಾರಿಗೆ ಮರಣ ದಂಡನೆ ವಿಧಿಸಿ ಆದೇಶಿಸಿದ್ದಾರೆ ಎಂದು ಸಾರ್ವಜನಿಕ ಅಭಿಯೋಜಕ ಬಿ.ವಿ.ಪಾಟೀಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next