Advertisement

ಮೂರ್ತಿ ತಯಾರಕರಲ್ಲಿ ಸಮಾಧಾನ ತಂದ ಆದೇಶ

12:27 PM Aug 19, 2020 | Suhan S |

ದೊಡ್ಡಬಳ್ಳಾಪುರ: ಸಾರ್ವಜನಿಕ ಗಣೇಶೋತ್ಸವ ನಿಷೇಧದ ಬಗ್ಗೆ ಈ ಹಿಂದೆ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ಮಾರ್ಪಾಟು ಮಾಡಿ, ಪರಿಷ್ಕೃತ ಮಾರ್ಗಸೂಚಿ ಹೊರಡಿಸಿರುವುದು ಗಣೇಶ ಮಾರಾಟಗಾರರಲ್ಲಿ ಕೊಂಚ ಸಮಾಧಾನ ತಂದಿದೆ.

Advertisement

ಹಿಂದಿನ ಆದೇಶ: ಈ ಬಾರಿ ಚೌತಿ ಹಬ್ಬವನ್ನು ಸರಳವಾಗಿ ಹಾಗೂ ಭಕ್ತಿಪೂರ್ವಕವಾಗಿ ದೇವಸ್ಥಾನಗಳ ಒಳಗೆ ಮತ್ತು ಮನೆಗಳಲ್ಲಿ ಮಾತ್ರವೇ ಆಚರಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಿಸುವಂತಿಲ್ಲ. ದೇವಾಲಯಗಳಲ್ಲಿ ಆಚರಿಸಲು ಅನುಮತಿ ಇದ್ದು, ಪ್ರತಿ ನಿತ್ಯ ಸ್ಯಾನಿಟೈಸೇಷನ್‌ ಕಡ್ಡಾಯ ಹಾಗೂ ಕಡ್ಡಾಯವಾಗಿ ಕೊವಿಡ್‌-19 ಮಾರ್ಗಸೂಚಿ ಪಾಲಿಸಲು ಸೂಚನೆ. ಗಣಪತಿ ವಿಗ್ರಹವನ್ನು ಮನೆಯಲ್ಲಿಯೇ ವಿಸರ್ಜಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ ನದಿ, ಕೊಳ, ಕೆರೆ, ಬಾವಿ ಮತ್ತು ಕಲ್ಯಾಣಿಗಳಲ್ಲಿ ವಿಸರ್ಜಿಸುವಂತಿಲ್ಲ. ಮೆರವಣಿಗೆ ನಿರ್ಬಂಧ ಹಾಗೂ ಸ್ಥಳೀಯ ಸಂಸ್ಥೆ, ಪೊಲೀಸ್‌ ಇಲಾಖೆಗಳ ನಿರ್ದೇಶನ ಪಾಲಿಸಬೇಕು.

ಹೊಸ ಆದೇಶ: ಸಾರ್ವಜನಿಕ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಮಾತ್ರ ಮಾರ್ಗಸೂಚಿ ಬದಲಾಗಿದ್ದು, ಉಳಿದ ಎಲ್ಲಾ ನಿಯಮಗಳು ಅನ್ವಯಿಸುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಕಡ್ಡಾಯ. ಒಂದು ವಾರ್ಡ್‌ ಅಥವಾ ಗ್ರಾಮಕ್ಕೆ ಒಂದೇ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಮನವಿ ಮಾಡಲಾಗಿದೆ.

ಈ ಬಾರಿ ಸಾರ್ವಜನಿಕ ಗಣೇಶೋತ್ಸವ ನಿಷೇಧ ಮಾಡಲಾಗುವುದು ಎನ್ನುವ ಕಾರಣದಿಂದ ಮನೆಗಳಲ್ಲಿ ಪ್ರತಿಷ್ಠಾಪಿಸುವ 2 ಅಡಿಗೂ ಸಣ್ಣ ಮೂರ್ತಿ ತಯಾರು ಮಾಡಿದ್ದೇವೆ. ಸರ್ಕಾರದ ಆದೇಶದಂತೆ ಗಣೇಶ ಮೂರ್ತಿ ಮಾರಾಟ ಮಾಡಲು ಸಿದ್ಧರಿದ್ದು, ನಮಗೆ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು. ಶಿವಾನಂದ್‌, ಗಣಪತಿ ಮೂರ್ತಿ ತಯಾರಕರು

ಸರ್ಕಾರದ ಮಾರ್ಗಸೂಚಿಯಿಂತೆ ನಗರಸಭೆ ಹಾಗೂ ಸಂಬಂಧಿಸಿದ ಇಲಾಖೆಗಳ ಅನುಮತಿ ಕಡ್ಡಾಯ. ಕೊವಿಡ್‌ -19 ಮಾರ್ಗಸೂಚಿ ಪಾಲಿಸಿ,ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಬೇಕು. ಸರ್ಕಾರದ ಆದೇಶ ಉಲ್ಲಂಘನೆಯಾಗದಂತೆ ಷರತ್ತುಬದ್ಧ ಅನುಮತಿ\ ನೀಡಲಾಗುವುದು. ರಮೇಶ್‌.ಎಸ್‌.ಸುಣಗಾರ್‌, ನಗರಸಭೆ ಪೌರಾಯುಕ್ತರು

Advertisement

 

 

ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next