Advertisement

ಮಂಕಿಪಾಕ್ಸ್‌ ನಿರ್ವಹಣೆಗೆ ಮಾರ್ಗಸೂಚಿ ಪ್ರಕಟ

10:26 PM Jul 21, 2022 | Team Udayavani |

ಬೆಂಗಳೂರು: ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಬಂದರುಗಳಲ್ಲಿ ಮಂಕಿಪಾಕ್ಸ್‌ ಸೋಂಕಿನ ಲಕ್ಷಣ ಹೊಂದಿರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಪ್ರ

Advertisement

ಮುಖವಾಗಿ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಮಂಕಿಪಾಕ್ಸ್‌ ತಪಾಸಣೆಗೆ ಅಗತ್ಯ ಕ್ರಮ ವಹಿಸಬೇಕು. ಪ್ರಯಾಣಿಕರಲ್ಲಿ ಜ್ವರ, ಚಳಿ ಮತ್ತು ಬೆವರುವಿಕೆ, ತಲೆನೋವು, ಮೈಕೈನೋವು, ಸುಸ್ತು, ಗಂಟಲು ಉರಿ, ಕೆಮ್ಮು, ಚರ್ಮದ ಮೇಲೆ ದದ್ದಗಳು ಕಂಡುಬಂದರೆ ಅವರನ್ನು ಕೂಡಲೇ ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿ, ಪ್ರತ್ಯೇಕವಾಗಿರಿಸಿ ಅವರ ಸೋಂಕು ಪರೀಕ್ಷೆಗೆ ಕ್ರಮ ಕೈಗೊಳ್ಳಬೇಕು. ಶಂಕಿತರು/ಸೋಂಕಿತರನ್ನು ಬೆಂಗಳೂರಿನಲ್ಲಿ ಇಂದಿರಾನಗರದಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ, ಮಂಗಳೂರಿನಲ್ಲಿ ವೆನ್‌ಲಾಕ್‌ ಜಿಲ್ಲಾ ಆಸ್ಪತ್ರೆಗಳಲ್ಲಿ ದಾಖಲಿಸಬೇಕು. ಸೋಂಕು ದೃಢಪಟ್ಟರೆ ಅಲ್ಲಿಯೇ 21 ದಿನ ಚಿಕಿತ್ಸೆ ನೀಡಬೇಕು.

ಮಾದರಿ ಸಂಗ್ರಹ ಹೇಗೆ? :

ಸೋಂಕು ಲಕ್ಷಣ ಇದ್ದವರಲ್ಲಿ ದದ್ದುಗಳಿಲ್ಲದಿದ್ದರೆ ರಕ್ತ, ಸೀರಂ, ಗಂಟಲು/ಮೂಗಿನ ದ್ರವ, ಮೂತ್ರದ ಮಾದರಿ ಸಂಗ್ರಹಿಸಬೇಕು. ದದ್ದುಗಳಿದ್ದರೆ ಅಂತವರಿಂದ ಹೆಚ್ಚುವರಿಯಾಗಿ ದ್ರವ, ಗಾಯಗಳ ದ್ರವ ಮಾದರಿಯನ್ನು ಸಂಗ್ರಹಿಸಬೇಕು. ಪರೀಕ್ಷೆಗೆಂದು ಬೆಂಗಳೂರಿನ ರಾಷ್ಟ್ರೀಯ ವೈರಾಣು ಸಂಸ್ಥೆ ಅಥವಾ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಬೇಕು.

ಗಡಿಯಲ್ಲೂ ತಪಾಸಣೆ :

Advertisement

ಗಡಿಯಲ್ಲಿರುವ ರಾಜ್ಯ ಪ್ರವೇಶ ಸ್ಥಳಗಳಲ್ಲಿ ಶಂಕಿತರ ಪತ್ತೆಗೆ ಆರೋಗ್ಯ ತಪಾಸಣ ತಂಡಗಳನ್ನು ನೇಮಿಸಬೇಕು. ಜತೆಗೆ ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬಂದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಕಾರ್ಯಕರ್ತರು ಶಂಕಿತ ಪ್ರಕರಣಗಳನ್ನು ಗುರುತಿಸಲು ಸೂಚಿಸಬೇಕು. ಶಂಕಿತರ ಪ್ರಕರಣಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಅವರೆಲ್ಲರಿಗೂ ಅಗತ್ಯ ತರಬೇತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next