Advertisement
ಕೊರೊನಾ ಕಾರಣದಿಂದ ತರಗತಿಗಳು ಆನ್‌ಲೈನ್‌ಗೆ ಶಿಫ್ಟ್ ಆಗಿವೆ. ಇದರಿಂದ ಮಕ್ಕಳು ಹೆಚ್ಚು ಹೊತ್ತು ಕಂಪ್ಯೂಟರ್, ಫೋನ್ ಸ್ಕ್ರೀನ್ ನೋಡುವಂತಾಗಿದೆ. ಹಾಗೇ ಮನೆಯಲ್ಲಿ ಇಬ್ಬರು ಅಥವಾ ಮೂವರು ಮಕ್ಕಳಿದ್ದಾರೆ. ಆದರೆ, ಆನ್‌ಲೆ„ನ್ ಪಾಠಕ್ಕೆ ಬೆಂಬಲಿಸುವ ಸಾಧನ ಇರುವುದು ಒಂದೇ. ಹೀಗಿರುವಾಗ ಏನು ಮಾಡಬೇಕು ಎಂದು ಹಲವು ಪೋಷಕರು ದೂರುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳ ಬಗ್ಗೆ ಎಚ್‌ಆರ್‌ಡಿ ತಲೆ ಕೆಡಿಸಿಕೊಂಡಿದೆ. ವಿದ್ಯಾರ್ಥಿಗಳು ಹೆಚ್ಚು ಹೊತ್ತು ಸ್ಕ್ರೀನ್ ಮುಂದೆ ಕುಳಿತುಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಆನ್‌ಲೆ„ನ್ ತರಗತಿಗಳ ಅವಧಿ ನಿಗದಿ ಪಡಿಸಲಾಗುವುದು. ಇಲೆಕ್ಟ್ರಾನಿಕ್ ಉಪಕರಣಗಳ ಸೌಲಭ್ಯ ಹೊಂದಿರುವವರು ಹಾಗೂ ಈಗಷ್ಟೇ ರೇಡಿಯೋ ಸಂಪರ್ಕಕ್ಕೆ ಬಂದವರು ಮತ್ತು ಅದೂ ಇಲ್ಲದವರಿಗೆ ಅನುಕೂಲವಾಗುವ ರೀತಿಯಲ್ಲಿ ವಿವಿಧ ಮಾದರಿಗಳನ್ನು ಮಾರ್ಗಸೂಚಿ ಮೂಲಕ ಪರಿಚಯಿಸಲಾಗುತ್ತಿದೆ. ಇದರೊಂದಿಗೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಸೆ„ಬರ್ ಸುರಕ್ಷತೆ ಒದಗಿಸುವತ್ತಲೂ ಗಮನಹರಿಸುವುದಾಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೌಲಭ್ಯ ವಂಚಿತರಿಗೂ ಅನುಕೂಲ ಕಲ್ಪಿಸಲು ಚಿಂತನೆ
ಹೆಚ್ಚು ಹೊತ್ತು ಸ್ಕ್ರೀನ್ ನೋಡದಂತೆ ಆನ್‌ಲೈನ್ ತರಗತಿಗಳ ಅವಧಿ ನಿಗದಿ
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಸೈಬರ್ ಸುರಕ್ಷತೆಗೂ ಗಮನ