Advertisement

‘ಯುವ ಪೀಳಿಗೆಯ ಯಶಸ್ಸಿಗೆ ಮಾರ್ಗದರ್ಶನ ಅಗತ್ಯ’

12:12 PM Oct 16, 2017 | Team Udayavani |

ಮೂಲ್ಕಿ: ಹಿರಿಯರ ಜವಾಬ್ದಾರಿಯುತ ಮಾರ್ಗದರ್ಶನದಿಂದ ಮಾತ್ರ ಯುವ ಪೀಳಿಗೆ ಯಶಸ್ವಿಯಾಗಲು ಸಾಧ್ಯ ಎಂದು ಶಾಸಕ ಕೆ.ಅಭಯಚಂದ್ರ ಜೈನ್‌ ಹೇಳಿದರು.

Advertisement

ಅವರು ಮೂಲ್ಕಿ ಮಂಗಳೂರು ಕೆಥೊಲಿಕ್‌ ಸಭಾ ಮೂಲ್ಕಿ ಘಟಕ ಮತ್ತು ಸಂತ ಕೊಸೆಸಾಂವ್‌ ಅಮ್ಮನವರ ಚರ್ಚ್‌ ಆಶ್ರಯದಲ್ಲಿ ನಡೆದ ನಮ್ಮ ಹಿರಿಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಯುವ ಪೀಳಿಗೆ ತಮ್ಮ ಹಿರಿಯರು ಮತ್ತು ಹೆತ್ತವರ ಬಗ್ಗೆ ಕಾಳಜಿ ವಹಿಸಿ, ಅವರ ಹಿತ ಕಾಪಾಡುವಲ್ಲಿ ಶ್ರಮಿಸಿದರೆ ಯುವಕರು ಹಿರಿಯರಾಗುವ ದಿನಗಳಲ್ಲಿ ಉತ್ತಮ ಬದುಕು ಪಡೆಯಲು ಸಾಧ್ಯ ಎಂದರು.

ಈ ಸಂದರ್ಭ ಮೂಲ್ಕಿ ಚರ್ಚ್‌ನ ಧರ್ಮಗುರುಗಳಾದ ಫಾ| ಫ್ರಾನ್ಸಿಸ್‌ ಕ್ಸೇವಿಯರ್‌ ಗೋಮ್ಸ್‌ ಅವರ 67ನೇ ಹುಟ್ಟು ಹಬ್ಬವನ್ನು ಸಭೆಯ ವತಿಯಿಂದ ನಡೆಸಿ ಅವರನ್ನು ಸಮ್ಮಾನಿಸಲಾಯಿತು. 

ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಅವರು ಮುಖ್ಯ ಅತಿಥಿಯಾಗಿದ್ದರು. ಈ ಸಮಾವೇಶದಲ್ಲಿ 150ಕ್ಕೂ ಮಿಕ್ಕಿದ ಹಿರಿಯ ನಾಗರಿಕರು ಭಾಗವಹಿಸಿದ್ದರು. ಮಂಗಳೂರು ಎ.ಜೆ. ಆಸ್ಪತ್ರೆಯ ಫೋರೆನಿಕ್‌ ವಿಭಾಗದ ಮುಖ್ಯಸ್ಥ ಡಾ| ಪ್ರಕಾಶ್‌ ಮೊಂತೆರೋ ಹಿರಿಯರ ಸಮಸ್ಯೆಗಳು ಮತ್ತು ಅದಕ್ಕೆ ಬೇಕಾದ ಸೂಕ್ತ ಪರಿಹಾರ ಮಾರ್ಗದ ಬಗ್ಗೆ ಮಾತನಾಡಿದರು.

Advertisement

ಅತಿಥಿಗಳಾಗಿ ಕಪುಚಿನ್‌ ಫಾ| ಡೆರಿಕ್‌, ಫಾ| ಫ್ರಾಂಕ್ಲಿನ್‌ ಮಚಾದೋ, ಕೆಥೋಲಿಕ್‌ ಸಭಾದ ಅಧ್ಯಕ್ಷ ಅನಿಲ್‌ ಲೋಬೋ, ವಾರ್ಡ್‌ ಕಾರ್ಯದರ್ಶಿ ರಾಸೆಲ್‌, ರೆಮಾಂಡ್‌ ರೆಬೆಲ್ಲೋ, ಚರ್ಚ್‌ ಪಾಲನಾ ಸಮಿತಿಯ ಉಪಾಧ್ಯಕ್ಷೆ ಜೀನ್‌ ಮೋಲೀನ್‌ ಡಿ’ಸೋಜಾ, ಕಾರ್ಯದರ್ಶಿ ಪ್ರಕಾಶ್‌ ಮೊಂತೆರೋ, ಹಿರಿಯ ವೈದ್ಯ ಡಾ| ಸುರೇಶ್‌ ಆರಾಹ್ನ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧನಂಜಯ ಕೋಟ್ಯಾನ್‌ ಮಟ್ಟು, ಫಿಲೋಮಿನಾ ಗೋಮ್ಸ್‌ ಮುಂತಾದವರಿದ್ದರು. ಕೆಥೊಲಿಕ್‌ ಸಭಾ ಮೂಲ್ಕಿ ಘಟಕದ ಅಧ್ಯಕ್ಷ ರೋಲ್ಪಿ ಡಿ’ಕೋಸ್ತಾ ಸ್ವಾಗತಿಸಿದರು. ಸೆಲಿನ್‌ ರಾಡ್ರಿಗಸ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next