Advertisement

ಅತಿಥಿ ಉಪನ್ಯಾಸಕರಿಗೆ 8 ತಿಂಗಳಿಂದ ವೇತನವಿಲ್ಲ

03:45 AM Jan 13, 2017 | Team Udayavani |

ಬೆಂಗಳೂರು: ಒಂದು ತಿಂಗಳು ವೇತನ ತಡವಾದರೂ ಜೀವನ ನಡೆಸುವುದು ಎಷ್ಟು ಕಷ್ಟ ಎಂಬ ಅನುಭವ ಎಲ್ಲರಿಗೂ ಇರುತ್ತದೆ.
ಆದರೆ, ಎಂಟು ತಿಂಗಳಿಂದ ಸಂಬಳವೇ ಬರದಿದ್ದರೆ….? ಹೌದು, ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ರಾಜ್ಯದ ಸರ್ಕಾರಿ
ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು. ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಕಳೆದ 8 ತಿಂಗಳಿಂದ ವೇತನ ನೀಡದೆ ರಾಜ್ಯ ಸರ್ಕಾರ ದುಡಿಸಿಕೊಳ್ಳುತ್ತಿದೆ. ಆದರೂ, ವೇತನದ ಬಗ್ಗೆ ಪ್ರಶ್ನಿಸಿದರೆ ಕೆಲಸಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂದು ಅತಿಥಿ ಉಪನ್ಯಾಸಕರು ಮೂಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. 

Advertisement

ಯುಜಿಸಿ ನಿಯಮ ಪ್ರಕಾರ, ಇತರೆ ಕಾಯಂ ಉಪನ್ಯಾಸಕರಂತೆ ಅತಿಥಿ ಉಪನ್ಯಾಸಕರಿಗೂ ಪ್ರತೀ ತಿಂಗಳು ವೇತನ ನೀಡಬೇಕು. ಆದರೆ, ಈ ನಿಯಮ ಉಪನ್ಯಾಸಕರ ನೇಮಕಾತಿ ಪರಿಪಾಠ ಆರಂಭವಾದಾಗಿನಿಂದಲೂ ಪಾಲನೆಯಾಗಿಲ್ಲ. ಕೆಲ ವರ್ಷಗಳ ಹಿಂದೆ
ವರ್ಷಕ್ಕೊಮ್ಮೆ ಅತಿಥಿ ಉಪನ್ಯಾಸಕರ ವೇತನ ಬಿಡುಗಡೆ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅದನ್ನು ಬದಲಿಸಿದ್ದ ರಾಜ್ಯ ಸರ್ಕಾರ, ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ವೇತನ ಬಿಡುಗಡೆಗೆ ಕ್ರಮ ವಹಿಸಿತ್ತು. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ವೇತನ ಬಾಕಿ ಉಳಿಸಿಕೊಳ್ಳುವ ಅವ್ಯವಸ್ಥೆ ಮುಂದುವರೆದೇ ಇದೆ ಎಂಬುದು ಅತಿಥಿ ಉಪನ್ಯಾಸಕರ ಅಳಲು.

ಸಚಿವರಾದ ಆರ್‌.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ ಅವರು ಉನ್ನತ ಶಿಕ್ಷಣ ಇಲಾಖೆ ಜವಾಬ್ದಾರಿ ಹೊತ್ತಿದ್ದಾಗ ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ಅತಿಥಿ ಉಪನ್ಯಾಸಕರಿಗೆ ವೇತನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅವರ ಬಳಿಕ ಇಲಾಖೆಯ ಜವಬ್ದಾರಿ ವಹಿಸಿಕೊಂಡಿರುವ ಸಚಿವ ಬಸವರಾಜ ರಾಯರೆಡ್ಡಿ ಅವರು ಅತಿಥಿ ಉಪನ್ಯಾಸಕರ ಸಮಸ್ಯೆ ಕೇಳಲು ಸಿದದ್ದರಿಲ್ಲ. ತಮಗೆ 8 ತಿಂಗಳಿಂದ ವೇತನ ಬಂದಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ನಮ್ಮ ಅತಿಥಿ ಉಪನ್ಯಾಸಕರೊಬ್ಬರು ಸಚಿವರ ಗಮನ ಸೆಳೆದರೆ “ಅದಕ್ಕೆ ನಾನೇನು ಮಾಡಲಿ?’ ಎಂಬ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ ಎಂದು ರಾಜ್ಯ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಬಿ.ರಾಜಶೇಖರ ಮೂರ್ತಿ ಆರೋಪಿಸುತ್ತಾರೆ.

ಒಂದೆರಡು ತಿಂಗಳ ವೇತನ ಬಿಡುಗಡೆ?:
ಕಾಲೇಜು ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ, ರಾಜ್ಯದ ದಕ್ಷಿಣದ ಜಿಲ್ಲೆಗಳ ಕಾಲೇಜುಗಳಿಗೆ 2 ತಿಂಗಳ ವೇತನ ಹಾಗೂ ಉತ್ತರದ ಜಿಲ್ಲೆಗಳ ಕಾಲೇಜಿಗಳಿಗೆ 1 ತಿಂಗಳ ವೇತನ ಆಯಾ ಕಾಲೇಜು ಪ್ರಾಂಶುಪಾಲರ ಅಕೌಂಟುಗಳಿಗೆ ಇತ್ತೀಚೆಗೆ ಬಿಡುಗಡೆಯಾಗಿದೆ. ಆದರೆ, ಈ ಬಾರಿಯಿಂದ ವೇತನ ನೀಡಿಕೆಗೆ ಸರ್ಕಾರ ಅತಿಥಿ ಉಪನ್ಯಾಸಕರಿಂದ ಪ್ಯಾನ್‌ಕಾರ್ಡ್‌, ಆಧಾರ್‌ ಕಾರ್ಡ್‌ ಮತ್ತಿತರರ ದಾಖಲೆಗಳನ್ನು ಪಡೆಯುವಂತೆ ಸೂಚಿಸಿರುವುದರಿಂದ ಈ ವೇತನ ಬಿಡುಗಡೆಯೂ ವಿಳಂಬವಾಗಿದೆ ಎನ್ನುತ್ತಾರೆ ನಗರದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರೊಬ್ಬರು. ಪದವಿ ಕಾಲೇಜಿಗೆ ಅತಿಥಿ ಉಪನ್ಯಾಸಕರೇ ಜೀವಾಳ ರಾಜ್ಯದ ಬಹುತೇಕ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರೇ ಜೀವಾಳ. ಏಕೆಂದರೆ 412 ಕಾಲೇಜುಗಳಲ್ಲಿರುವ ಕಾಯಂ ಬೋಧಕರಿಗಿಂತ ಮೂರು ಪಟ್ಟು ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಯಂ ಬೋಧಕರ ಸಂಖ್ಯೆ ಕೇವಲ 4,800 ಇದ್ದರೆ, ಅತಿಥಿ ಉಪನ್ಯಾಸಕರ ಸಂಖ್ಯೆ 14,531. ಈ ಅತಿಥಿ ಉಪನ್ಯಾಸಕರ ಬೋಧ ನಾಅನುಭವಕಾಯಂ ಬೋಧಕರಿಗೇನೂಕಡಿಮೆಇಲ್ಲ. ಕಳೆದಹತ್ತಾರುವರ್ಷಗಳಿಂದಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಇವರಿಗೆ ಸರ್ಕಾರ ನೀಡುತ್ತಿರುವ ವೇತನ ಮಾತ್ರ 9,500 ರಿಂದ 
11,500 ರೂ. ಮಾತ್ರ. ಸೇವೆ ಕಾಯಂ ಆಗಿರುವ ಉಪನ್ಯಾಸಕರು, ಪ್ರಾಧ್ಯಾಪಕರಿಗೆ ತಿಂಗಳಿಗೆ 1 ಲಕ್ಷ ರೂ.ನಿಂದ 1.5 ಲಕ್ಷ ರೂ. ವರೆಗೆ ಯುಜಿಸಿ ವೇತನ ಶ್ರೇಣಿ ಇದೆ. ಆದರೆ, ಅವರಷ್ಟೇ ವಿದ್ಯಾರ್ಹತೆ, ಅನುಭವ ಇದ್ದರೂ ಅತಿಥಿ ಉಪನ್ಯಾಸಕರಿಗೆ ಸರ್ಕಾರ ನೀಡುತ್ತಿರುವುದು ಸ್ನಾತಕೋತ್ತರ ಪದವಿ ಪೂರೈಸಿರುವವರಿಗೆ 9,500 ರೂ., ನೆಟ್‌, ಸ್ಲೆಟ್‌, ಪಿಎಚ್‌ಡಿ ಹೊಂದಿರುವವರಿಗೆ 11,500 ರೂ. ಮಾತ್ರ ಎನ್ನುತ್ತಾರೆ ಅತಿಥಿ ಉಪನ್ಯಾಸಕರು.

Advertisement

Udayavani is now on Telegram. Click here to join our channel and stay updated with the latest news.

Next