Advertisement

ಅತಿಥಿ ಉಪನ್ಯಾಸಕರಿಂದ ತರಗತಿ ಬಹಿಷ್ಕಾರ

11:56 AM Dec 11, 2021 | Team Udayavani |

ಗುರುಮಠಕಲ್‌: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುವ ಹಿನ್ನೆಲೆಯಲ್ಲಿ ಕಾಯಂ ಮತ್ತು ಸೇವಾ ಭದ್ರತೆ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರಾಚಾರ್ಯ ಮೋನಪ್ಪ ಗಚ್ಚಿಮನಿಗೆ ಮನವಿ ಸಲ್ಲಿಸಿದ ನಂತರ ಸಂಘದ ಅಧ್ಯಕ್ಷ ಮಾಣಿಕ್ಯಪ್ಪ ಮಾತನಾಡಿ, ಕನಿಷ್ಟ ಮಾಸಿಕ ಗೌರವ ಭತ್ಯೆ ಪಡೆದು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ನಮಗೆ ಸೇವಾ ಭದ್ರತೆ ಕಲ್ಪಿಸಬೇಕು. ಗುತ್ತಿಗೆ ಆಧಾರಿತ ಅರೆಕಾಲಿಕ ಉಪನ್ಯಾಸಕರನ್ನು ಸರ್ಕಾರ ಮಾನವೀಯತೆ ಆಧಾರದ ಮೇಲೆ ಸೂಕ್ತ ಕಾಯ್ದೆ ತಿದ್ದುಪಡಿ ಮಾಡಿ ಪದನಾಮ ಹೊಂದಿರುವವರನ್ನು 1982, 1992, 2003ರಲ್ಲಿ ಕಾಯಂ ಮಾಡಿರುವ ನಿದರ್ಶಗಳಿವೆ ಎಂದು ಮಾಹಿತಿ ನೀಡಿದರು.

ಅತಿಥಿ ಉಪನ್ಯಾಸಕರಿಗೂ ಅವರವರ ವಿದ್ಯಾರ್ಹತೆಗೆ ಅನುಸಾರ ಹುದ್ದೆಗಳನ್ನು ನೀಡಿ, ಸೇವಾ ಭದ್ರತೆ ನೀಡಿ ಕಾಯಂಗೊಳಿಸಬೇಕು. ಕಡಿಮೆ ಪ್ರೋತ್ಸಾಹ ಧನದಲ್ಲಿ ದುಡಿಯುತ್ತಿರುವ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಅತಿಥಿ ಉಪನ್ಯಾಸಕರಾದ ಬಿಚ್ಚಪ್ಪ, ಶ್ರೀಶೈಲ ಪೂಜಾರಿ, ಡಾ| ಮಲ್ಲಪ್ಪ, ಹುಸೇನಪ್ಪ, ಡಾ| ರಾಮುಲು, ಡಾ| ಕೃಷ್ಣ, ಡಾ| ವೆಂಕಟೇಶ, ಡಾ| ವೀಣಾ, ಡಾ| ಸಂಗೀತಾ, ಡಾ| ಬಾಲಪ್ಪ, ಭೀಮರಾಯ, ಮನಸ್ಸೂರ್‌ ಅಹ್ಮದ್‌, ವೀರೇಶ, ಜ್ಞಾನೇಶ್ವರ ರೆಡ್ಡಿ, ಶಿವಪ್ಪ ಹಾಗೂ ಇತತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next