Advertisement

ಕರೆಯದೇ ಬಂದ ನೆಂಟ…

06:58 PM Nov 18, 2019 | mahesh |

ನಮ್ಮ ವಿಶ್ವವಿದ್ಯಾಲಯದಲ್ಲಿ ಶಕ್ತಿ ಸಂಭ್ರಮ ಕಾರ್ಯಕ್ರಮವಿತ್ತು. ಹೀಗಾಗಿ, ಕಾರ್ಯಕ್ರಮದ ಪೋಟೋಗ್ರಫಿ ಮತ್ತು ವರದಿಯನ್ನು ಮಾಡಬೇಕಿತ್ತು. ಸಂಜೆ ಕಾಲೇಜಿನಲ್ಲಿಯೇ ಏಳು ಘಂಟೆ ಆಗಿ ಹೋಯ್ತು. ಆ ಸಮಯದಲ್ಲಿ ನಮ್ಮ ವಿಶ್ವವಿದ್ಯಾಲಯದಲ್ಲಿ ಯಾವುದೆ ಆಟೋ ಆಗಲಿ, ಬಸ್‌ ಆಗಲಿ ಬರುವುದಿಲ್ಲ. ಇದನ್ನು ನಾನೂ ಕೂಡ ಮರೆತು ಹೋದೆ. ಪುಣ್ಯಕ್ಕೆ, ಜೊತೆಗೆ ನನ್ನ ಇಬ್ಬರು ಗೆಳತಿಯರು ಕೂಡ ಇದ್ದರು.

Advertisement

ನಮ್ಮ ಮೂರು ಜನರ ಹಾಸ್ಟೆಲ್‌ ಸಿಟಿಯಲ್ಲಿ ಇತ್ತು. ಸುಮಾರು ಮೂರು, ನಾಲ್ಕು ಕಿ.ಮೀ ದೂರ. ಹೀಗಾಗಿ, ತೊರವಿಯವರೆಗೂ ನಡೆದುಕೊಂಡು ಹೋಗಿ, ಅಲ್ಲಿಂದ ಬಸ್‌ ಹಿಡಿಯುವುದು ಅನಿವಾರ್ಯ. ಹಾಗಾಗಿ, ಹೊರಟೆವು. ಒಂದಷ್ಟು ದೂರ ಹೋದ ನಂತರ ಒಂದು ರಿಕ್ಷಾ ಬಂದು ನಮ್ಮ ಮುಂದೆ ನಿಂತಿತು. ಚಾಲಕ, “ನಾನು, ತೊರವಿವರೆಗೂ ಹೊರಟ್ಟಿದ್ದಿನಿ. ಬನ್ನಿ’ ಎಂದು ಕರೆದ. ಅಪರಿಚಿತ ಮುಖ, ನಾವು ಆಟೋ ಬೇಕು ಅಂತಲೂ ಕೇಳಿರಲಿಲ್ಲ. ತಾನಾಗೇ ಏಕೆ ಕೇಳುತ್ತಿದ್ದಾನೆ? ಇದರ ಹಿಂದೆ ಏನೋ ಮರ್ಮ ಇರಬೇಕು… ಅನ್ನೋ ಅನುಮಾನ ಮೂವರಲ್ಲಿ ಮೂಡಿತು. “ಬೇಡ, ಇನ್ನೇನು ಸ್ವಲ್ಪ ದೂರ ಇದೆ. ನಡೆದುಕೊಂಡೇ ಹೋಗೀ¤ವಿ’ ಎಂದು ಹೇಳಿದೆವು. ಆದರೂ ಕೂಡಾ ಅವರು-” ಯಾಕೆ ನಡೆದುಕೊಂಡು ಹೋಗ್ತಿàರಾ? ಕತ್ತಲೆ ಬೇರೆ ಆಗಿದೆ, ಬನ್ನಿ’ ಎಂದು ಆಟೋ ಹತ್ತಲು ಒಪ್ಪುವವರೆಗೂ ಆತ ಹೋಗಲೇ ಇಲ್ಲ. ಕೊನೆಗೆ ಒಲ್ಲದ ಮನಸ್ಸಿನಿಂದ ಆಟೋದಲ್ಲಿ ಕುಳಿತುಕೊಂಡೆವು. ತೊರವಿಗೆ ಬರುತ್ತಿದಂತೆಯೇ ಇಳಿದು, ದುಡ್ಡು ಕೊಡಲು ಹೋದರೆ, ರಿಕ್ಷಾ ಡ್ರೈವರ್‌ ತೆಗೆದುಕೊಳ್ಳಲು ನಿರಾಕರಿಸಿದರು. ಆದರೂ, ನಾವು ಬಿಡದೆ ತುಂಬಾ ಒತ್ತಾಯ ಮಾಡಿ ದುಡ್ಡು ಕೊಟ್ಟೆವು. ಆಗ ಅವರು ಹೇಳಿದ್ದು ; “ನಾನು ನಿಮ್ಮನ್ನು ದುಡ್ಡಿಗೋಸ್ಕರ ಕರೆದುಕೊಂಡು ಬಂದಿಲ್ಲ. ನಾನು ಕೂಡಾ ಈ ಕಡೆ ಹೊರಟ್ಟಿದ್ದೆ. ನೀವು ಕತ್ತಲೆಯಲ್ಲಿ ನಡೆದುಕೊಂಡು ಬರುತ್ತಿರುವುದರನ್ನು ನೋಡಿ ಬನ್ನಿ ಅಂದಿದ್ದು ‘ ಎಂದು ಹೇಳಿ ಹೊರಟುಹೋದರು. ಅವರ ಮಾತು ಕೇಳಿ, ನಮ್ಮ ಊಹೆಗಳೆಲ್ಲವೂ ತಲೆಕೆಳಗು ಆಯಿತು. ಜೊತೆಗೆ, ನಮಗೆ ಒಂದು ಥರ ಮುಜುಗರ ಅನಿಸಿತು. ಈ ಘಟನೆ ನಮಗೆ ಕಲಿಸಿದ ಪಾಠ ಏನೆಂದರೆ, ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಎಲ್ಲರನ್ನೂ ಅನುಮಾನದಿಂದ ನೋಡುವುದು ತರವಲ್ಲ ಅನ್ನುವುದು.

ಏನೇ ಆದರೂ, ಕರೆಯದೇ ಬಂದ ನೆಂಟನಂತೆ ಬಂದು, ನಮಗೆ ನೆರವಾದ ಆಟೋ ಚಾಲಕನಿಗೆ ನಮೋನಮಃ.

ದೀಪಾ ಮಂಜರಗಿ

Advertisement

Udayavani is now on Telegram. Click here to join our channel and stay updated with the latest news.

Next