Advertisement

Gudinabali: ಮಾದಕ ವಸ್ತು ಸಾಗಾಟ: ಪ್ರಕರಣ ದಾಖಲು

10:13 PM Aug 12, 2023 | Team Udayavani |

ಬಂಟ್ವಾಳ: ವ್ಯಕ್ತಿಯೋರ್ವ ಮಾದಕ ವಸ್ತು ಸೇವಿಸಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಪೊಲೀಸರು ತಡೆದು ವಾಹನ ತಪಾಸಣೆ ನಡೆಸಿದಾಗ ಕಾರಿನಲ್ಲಿ 4.20 ಗ್ರಾಂ ಮಾದಕ ವಸ್ತು ಪತ್ತೆಯಾದ ಘಟನೆ ಆ. 11ರಂದು ಬಿ.ಸಿ.ರೋಡು ಸಮೀಪದ ಗೂಡಿನಬಳಿಯಲ್ಲಿ ನಡೆದಿದೆ.

Advertisement

ಬೋಳಂತೂರು ನಿವಾಸಿ ಮಹಮ್ಮದ್‌ ಆಸೀರ್‌ (26) ಆರೋಪಿ. ಶುಕ್ರವಾರ ಮಧ್ಯಾಹ್ನದ ವೇಳೆ ಬಂಟ್ವಾಳ ನಗರ ಠಾಣೆ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಬಂದ ಮಾರುತಿ ಆಲ್ಟೋ ಕಾರನ್ನು ಪರಿಶೀಲಿಸಿದಾಗ, ಚಾಲಕ ಎಂಡಿಎಂಎ ಎಂಬ ಮಾದಕ ವಸ್ತುವನ್ನು ಸೇವಿಸಿರುವುದು ಬೆಳಕಿಗೆ ಬಂದಿದೆ. ಬಳಿಕ ಕಾರನ್ನು ಪರಿಶೀಲಿಸಿದಾಗ ಸುಮಾರು 8 ಸಾವಿರ ರೂ. ಮೌಲ್ಯದ ಎಂಡಿಎಂಎ ಪತ್ತೆಯಾಗಿದೆ. ಪೊಲೀಸರು ಮಾದಕ ವಸ್ತು ಹಾಗೂ 1.50 ಲಕ್ಷ ರೂ. ಮೌಲ್ಯದ ಕಾರನ್ನೂ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next