Advertisement

ಗುಡಿಬಂಡೆ: ಮುಖ್ಯ ರಸ್ತೆ ಅಭಿವೃದ್ಧಿಪಡಿಸಿ ಮೋರಿ ಕಾಮಗಾರಿ ಕೈಬಿಟ್ಟರು

03:43 PM Aug 19, 2021 | Team Udayavani |

ಗುಡಿಬಂಡೆ: ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಯಾಗಿ 6 ವರ್ಷ ಕಳೆದಿದೆ. ರಸ್ತೆ ಅಭಿವೃದ್ಧಿಯಾದರೂ ಮದ್ಧೆ ಇರುವ ಕಾಲುವೆ ಮಾತ್ರ ಹಾಗೆಯೇ ಉಳಿದಿದೆ.

Advertisement

ಸಂಶಯವಿಲ್ಲ: ಪಟ್ಟಣದ ಮುಖ್ಯ ರಸ್ತೆ ಕಾಮಗಾರಿ ಮುಗಿದಿದ್ದು, ಹೃದಯ ಭಾಗದ ಮಸೀದಿ ಹತ್ತಿರ ಇರುವ ರಾಜಕಾಲುವೆಯ ಮೋರಿ ಕಾಮಗಾರಿ ಮಾತ್ರ ಇನ್ನೂ ಅರಂಭವಾಗಿಲ್ಲ. ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಹಾಗೂ ಹೆದ್ದಾರಿ 7 ರಸ್ತೆ ಕಡೆಯಿಂದ ಗೌರಿಬಿದನೂರು ಕಡೆ ಹೋಗುವ ವಾಹನಗಳಿಗೆ ಪಟ್ಟಣದ ಮುಖ್ಯ ರಸ್ತೆ ಒಂದೇ ಮಾರ್ಗವಾಗಿದೆ. ಈ ರಸ್ತೆಯಲ್ಲಿ ಸಾರಿಗೆ ವಾಹನಗಳ ಜತೆಗೆ ಟ್ರಕ್‌ಗಳ ದಟ್ಟಣೆ ಹೆಚ್ಚಾಗುತ್ತಿದ್ದು ಮೋರಿ ಏನಾದರೂ ಮುರಿದು ಬಿದ್ದರೆ ಗೌರಿಬಿದನೂರು ಕಡೆ ಸಂಪರ್ಕ ಕಡಿತಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಅಭಿವೃದ್ಧಿ ಇಲ್ಲ: ಜಿಲ್ಲಾ ಮುಖ್ಯ ರಸ್ತೆಯಿಂದ ರಾಜ್ಯ ಹೆದ್ದಾರಿಯಾಗಿ ಮಾರ್ಪಟ್ಟು 120 ಅಡಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದೆ. ಪಟ್ಟಣದ ಮುಖ್ಯ ರಸ್ತೆ ಮೂಲಕಈರಸ್ತೆ ಹಾದು ಹೋಗಿದ್ದು, ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯತೆಯಿಂದ ರಸ್ತೆ ಅಭಿವೃದ್ಧಿಯಾಗಿ ಮೋರಿ ಮಾತ್ರ
ಅಭಿವೃದ್ಧಿ ಕಾಣದಿರುವುದು ದುರಂತ.

ಇದನ್ನೂ ಓದಿ:126 ನೇ ಚಿತ್ರದ ಸಿದ್ಧತೆ ಜೋರು : ಬೆಳ್ಳಂಬೆಳಗ್ಗೆ ಶಿವಣ್ಣನನ್ನು ಭೇಟಿಯಾದ ರಿಷಬ್  

ಅಭಿವೃದ್ಧಿ ಕಂಡಿಲ್ಲ: ಲೋಕೋಪಲೋಗಿ ಇಲಾಖೆ ನಿರ್ಲಕ್ಷ Âದಿಂದ ಪಟ್ಟಣದ ರಾಜ ಕಾಲುವೆ ಮೋರಿ ಮಾತ್ರ ದುರಸ್ತಿಯಾಗದೇ ಉಳಿದುಬಿಟ್ಟಿದೆ. ಇದು ಪಟ್ಟಣಕ್ಕೆ ಕಪ್ಪು ಚುಕ್ಕೆಯಂತಿದೆ. ರಸ್ತೆ ಕಾಮಗಾರಿ ಮುಗಿದರೂ ಮೋರಿ ಕಾಮಗಾರಿ ಮಾತ್ರ ಏಕೆ ಮಾಡಿಲ್ಲ? ಎಂಬುದು ಸಾರ್ವಜನಿಕರ
ಹಾಗೂ ಸಾವಿರಾರು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ. ಇನ್ನಾದರೂ ಪಪಂ ಅಧಿಕಾರಿಗಳು ಅಥವಾ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಎಚ್ಚೆತ್ತುಕೊಂಡು ಮೋರಿಯನ್ನು ದುರಸ್ತಿ ಪಡಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Advertisement

ನಿತ್ಯ ವಾಹನಗಳ ಸಂಚಾರವೂ ಹೆಚ್ಚಳ
ಈ ರಸ್ತೆಯಲ್ಲಿ ಇತ್ತೀಚೆಗೆ ವಾಹನಗಳ ಸಂಚಾರವೂ ಹೆಚ್ಚಾಗಿದ್ದು, ಮೋರಿಗೆ ತಡೆಗೋಡೆಯೂ ಇಲ್ಲ, ಸ್ವಲ್ಪ ಎಚ್ಚರ ತಪ್ಪಿದರೂ ಮೋರಿಗೆ ಬಿದ್ದು ವಾಹನ ಸವಾರರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಮೋರಿ ಮೇಲ್ಭಾಗದಲ್ಲಿ ಇತ್ತೀಚೆಗೆ ಬಾರಿ ಗುಂಡಿಗಳು ಬಿದ್ದಿದ್ದು, ಇದಕ್ಕೆ ಡಾಂಬರು ಹಾಕದೆ ಮಣ್ಣನ್ನು ಹಾಕಿ ಮುಚ್ಚಿದ್ದಾರೆ. ಈಗಾಗಲೇ ಮಳೆ ಬೀಳುತ್ತಿದ್ದು, ವಾಹನಗಳ ಸಂಚಾರದಿಂದ, ಅಲ್ಲಿ ನೀರು ನಿಂತು ಕೆಸರು ಗದ್ದೆಯಾದರೆ ಸವಾರರು ಇನ್ನಷ್ಟು ಸಂಕಷ್ಟ ಎದುರಿಸುವ ಸಾಧ್ಯತೆಯಿದೆ.

ರಸ್ತೆ ಕಾಮಗಾರಿ ಮುಕ್ತಾಯವಾಗಿ ಸುಮಾರು ವರ್ಷಗಳೇ ಕಳೆಯುತ್ತಿದೆ. ರಸ್ತೆಕಾಮಗಾರಿ ವೇಳೆ ಮೋರಿ ಕಾಮಗಾರಿಯನ್ನೂ ಮುಗಿಸ ಬೇಕಾಗಿತ್ತು.ಆದರೆ,ಆಗಿಲ್ಲ.ಈ ಮೋರಿ ಜನರ ಮೃತ್ಯುಕೂಪವಾಗಿದ್ದು ಕೂಡಲೇ ಸರಿಪಡಿಸಬೇಕು.
-ಜಗನ್ನಾಥ್‌, ಬಿಜೆಪಿ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next