Advertisement

ಕಲ್ಲು ಬಂಡೆಯೇ “ಗುಡ್ಡಟ್ಟು ಗಣಪನ”ಆವಾಸಸ್ಥಾನ

01:06 PM Jun 08, 2018 | Sharanya Alva |

ದೇವಾಲಯಗಳ ತವರೂರೆಂದೇ ಕರೆಯಬಹುದಾದ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಪುರಾತನ ದೇವಾಲಯಗಳಿವೆ ಅವುಗಳ ಪೈಕಿ ಪ್ರಾಕೃತಿಕ ಮಾತ್ರವಲ್ಲದೆ ಧಾರ್ಮಿಕವಾಗಿ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿರುವ ದೇವಾಲಯ ಗುಡ್ಡಟ್ಟು ಗಣಪತಿ.

Advertisement

ಯಾವುದೇ ಕಾರ್ಯ ನಿರ್ವಿಘ್ನವಾಗಿ ನೆರವೇರಲು ಮೊದಲು ಗಣಪತಿಯನ್ನು ಸ್ತುತಿಸಬೇಕು ಎಂಬುದು ನಂಬಿಕೆ ಇಂತಹ ಅದ್ಭುತವಾದ ಗಣಪ ಉಡುಪಿ ಜಿಲ್ಲೆಯ ಬಾರಕೂರಿನ ಗುಡ್ಡಟ್ಟುವಿನಲ್ಲಿ ನೆಲೆನಿಂತಿರುವುದು ವಿಶೇಷ.

ಕಲ್ಲು ಬಂಡೆಗಳ ಮದ್ಯೆ ಗುಹೆಗಳ ಒಳಗೆ ಮೂಡಿ ಬಂದವನೇ ವಿಘ್ನ ನಿವಾರಕ ಈ ವಿನಾಯಕ ಹಲವಾರು ಅಂತಸ್ತಿನ ಬಂಡೆಗಳ ಒಳಗೆ ವಿರಾಜಮಾನನಾಗಿ ನೆಲೆನಿಂತಿರುವಂತಹ ಗಣಪನೇ ಗುಡ್ಡಟ್ಟು ಗಣಪ..

ಬಂಡೆಯ ಗುಹೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ ದಕ್ಷಿಣಕ್ಕೆ ಮುಖಮಾಡಿ ಸೊಂಡಿಲನ್ನು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಸ್ವಯಂಭು ವಿಗ್ರಹವೇ ಇಲ್ಲಿಯ ಆರಾಧ್ಯ ದೇವ .

ಸುತ್ತಲೂ ದಟ್ಟ ಕಾಡು ಹಚ್ಚ ಹಸಿರು ಗದ್ದೆಯ ನಡುವೆ ವಿಶಾಲವಾದ ಬಂಡೆಯೊಳಗೆ ನೆಲೆನಿಂತಿರುವ ಗಣಪನಿಗೆ ಬಂಡೆಯೇ ಆವಾಸಸ್ಥಾನ..

Advertisement

ಯಾವುದೇ ಒಂದು ವಿಗ್ರಹ ಅಥವಾ ಕಲ್ಲನ್ನು ದೇವರು ಎಂದು ಪೂಜಿಸಬೇಕಾದರೆ ಅದಕ್ಕೆ ಒಂದು ವಿಶೇಷವಾದ ಶಕ್ತಿ ಇರಲೇಬೇಕು, ಇಂತಹ ಮೂರ್ತಿಗಳಿಗೆ ಭಕ್ತರು ನೀಡುವ ಸಂಸ್ಕಾರ ಮತ್ತು ನಂಬಿಕೆ ಭಕ್ತರಿಗೆ ಒಳಿತಾಗಿ ಪರಿಣಮಿಸಿರುವುದೇ ಕಾರಣ, ಹಾಗಾಗಿಯೇ ತನ್ನನ್ನ ಬೇಡಿ ಬಂದವರ ಇಷ್ಟಾರ್ಥಗಳನ್ನ ಪೂರೈಸುತ್ತಾ ಭಕ್ತರ ಸೇವೆಯನ್ನು ಸ್ವೀಕರಿಸುತ್ತಾ ಗುಹಾಂತರ ಬಾವಿಯ ನೀರಿನಲ್ಲಿ ಗಣಪ ನೆಲೆನಿಂತಿದ್ದಾನೆ.

ಪುರಾಣ ಮತ್ತು ಐತಿಹ್ಯಗಳಲ್ಲಿ ಸಾಮಾನ್ಯವಾಗಿ ಈಶ್ವರ ಮಹಾ ಕೋಪಿಷ್ಠ ವ್ಯಕ್ತಿ ಎಂಬುದು ಉಲ್ಲೇಖ ಅಂತೆಯೇ ಈಶ್ವರನ ಕೋಪವನ್ನು ಕಡಿಮೆಮಾಡುವ ಸಲುವಾಗಿ ಈಶ್ವರನನ್ನ ಸದಾಕಾಲ ನೀರು ಅಥವಾ ತಂಪಾದ ಪ್ರದೇಶಗಳಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ ಆದರೆ ಗುಡ್ಡಟ್ಟು ಪ್ರದೇಶದಲ್ಲಿ ಗಣಪತಿ ಸದಾಕಾಲ ನೀರಿನಲ್ಲಿರುವುದು ಇಲ್ಲಿನ ವೈಶಿಷ್ಟ್ಯ ತೆ. 

ಸ್ಥಳ ಪುರಾಣ: ತ್ರಿಪುರಾಸುರ ಸಂಹಾರ ಕಾಲದಲ್ಲಿ ಈಶ್ವರ ಒಂದು ದಿನ ಗಣಪತಿಯನ್ನು ಪ್ರಾರ್ಥನೆ ಮಾಡದೆ ಯುದ್ಧಕ್ಕೆ ಹೋಗಿದ್ದರಿಂದ ಆ ಯುದ್ಧದಲ್ಲಿ ಈಶ್ವರನಿಗೆ ಹಿನ್ನಡೆಯಾಗುತ್ತದೆ ಇದನ್ನು ಅರಿತ ಈಶ್ವರ ಕೋಪದಿಂದ ಗಣಪತಿಯ ಮೇಲೆ ಅಸ್ತ್ರ ಪ್ರಯೋಗ ಮಾಡುತ್ತಾನೆ ಆದರೆ ಆ ಅಸ್ತ್ರ ಗಣಪತಿಯನ್ನು ಅನಾಮತ್ತಾಗಿ ಇಟ್ಟುಕೊಂಡು ಇಲ್ಲಿರುವ ಮಧುಸಾಗರಕ್ಕೆ ಎಸೆಯುತ್ತದೆ, ಮಧುಸಾಗರಕ್ಕೆ ಬಿದ್ದಂತಹ ಗಣಪತಿ ತನಗೆ ಇಷ್ಟವಾದ ಮಧು (ಜೇನು) ತುಪ್ಪವನ್ನು ಯಥೇಚ್ಛವಾಗಿ ಸ್ವೀಕಾರ ಮಾಡಿದ್ದರಿಂದ ದೇಹದ ಉಷ್ಣತೆ ಹೆಚ್ಚಾಗಿ ಬಿಸಿ ತಾಳಲಾರದೆ ಇಲ್ಲಿಯ ತಣ್ಣೀರಿನಲ್ಲಿ ಕುಳಿತಿದ್ದಾನೆ ಎಂಬುದು ಪುರಾಣದಿಂದ ತಿಳಿದುಬರುತ್ತದೆ.

ಇತಿಹಾಸ: ಗರ್ಭ ಗುಡಿಯು ಸಾದಾರಣ 800 ವರ್ಷಗಳ ಹಳೆಯದು ಎಂದು ಇಲ್ಲಿಗೆ ಭೇಟಿ ನೀಡಿದ ಪುರಾತತ್ವ ಸಂಶೋಧಕರಾದ ಗುರುರಾಜ ಭಟ್ಟ್ ಇವರ ಅಭಿಪ್ರಾಯವಾಗಿದೆ.1997 ರಲ್ಲಿ ನೂತನ ಗರ್ಭಗುಡಿ, ತೀರ್ಥ ಮಂಟಪ, ಹೆಬ್ಬಾಗಿಲು ರಚನೆಯಾಗಿದೆ.

ನಿಸರ್ಗ ಪ್ರಿಯರಿಗಂತೂ ಈ ಕ್ಷೇತ್ರ ರಮಣೀಯ ರಾಜ್ಯಾದ್ಯಾಂತ ಪ್ರವಾಸಿಗರು ಹುಡುಕಿಕೊಂಡು ಬರುವ ಧಾರ್ಮಿಕ ಪ್ರೇಕ್ಷಣಿಯ ಸ್ಥಳವಿದು .

ಗಣಪನು ಭಕ್ತರೊಬ್ಬರ ಭಕ್ತಿಗೆ ಮೆಚ್ಚಿ ಬಂಡೆಯ ಕೆಳಭಾಗದಲ್ಲಿ ಮೂಡಿ ಬಂದಿದಾ. ಅವನಿಗೆ ಹೆಚ್ಚು ಸೆಕೆ ತಾಗಬಾರದೆಂದು ಸದಾ ನೀರು ತುಂಬಿರುತ್ತಾರೆ .ಸದಾಕಾಲ ನೀರಿನಲ್ಲಿ ಗಣಪತಿನಿರುವುದೇ ಇಲ್ಲಿಯ ವೈಶಿಷ್ಟ್ಯತೆ .

ಆಯರ್‌ ಕೊಡ

ಗುಡ್ಡಟ್ಟು ಗಣಪ ಈಶ್ವರನಿಂದ ಸ್ಥಾಪನೆಯಾದ ದೇವಾಲಯವೆಂದು ಕರೆಸಿಕೊಂಡಿದೆ ಈ ದೇವಾಲಯದಲ್ಲಿ ಹಲವಾರು ಬಗೆಯ ಸೇವೆಗಳನ್ನು ಮಾಡಲಾಗುತ್ತದೆ ಅದರಲ್ಲಿ ಆಯರ್‌ ಕೊಡ ಸೇವೆ ಬಹಳ ಶ್ರೇಷ್ಠವಾದ ಸೇವೆಯಾಗಿದೆ.

ಆಯರ್ ಕೊಡ ಸೇವೆ ಒಂದು ಶುದ್ಧ ವೈದಿಕ ಸೇವೆಯಾಗಿದೆ ಸೇವೆಯ ಪ್ರಾರಂಭದಲ್ಲಿ ಆ ಮಡುವಿನಲ್ಲಿರುವ ನೀರನ್ನು ತಾಮ್ರದ ಕೈ ಬಟ್ಟಲನ್ನು ಉಪಯೋಗಿಸಿ ಪೂರ್ತಿಯಾಗಿ ಶುಚಿಗೊಳಿಸಲುತ್ತದೆ. ನಂತರ ತೈಲಭ್ಯಂಜನ ಅರ್ಥಾತ್ ಕೊಬ್ಬರಿ ಎಣ್ಣೆಯಲ್ಲಿ ರುದ್ರಾಭಿಷೇಕ ಮಾಡಲಾಗುತ್ತದೆ. ನಂತರ ಈ ಅಭಿಷೇಕದ ನೀರನ್ನು ಹೊರ ತೆಗೆದು ದೇವರಿಗೆ ಮಹಾನೈವೇದ್ಯ ನೆರವೇರಿಸಲಾಗುತ್ತದೆ. ತದನಂತರ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ರುದ್ರಾಭಿಷೇಕ ನಡೆಯುತ್ತದೆ. ಇದಾದ ಬಳಿಕ ಇನ್ನೊಮ್ಮೆ ಅಭಿಷೇಕ ಮಾಡಿದ ನೀರನ್ನು ಒಂದು ಹನಿಯು ಬಿಡದಂತೆ ಬಟ್ಟೆಯಿಂದ ಒರೆಸಿ ಶುದ್ಧಗೊಳಿಸಲುತ್ತದೆ. ಈ ಪ್ರಕ್ರೀಯೆ ಮುಗಿದ ಬಳಿಕ ಬಂದಿರುವ ಭಕ್ತಾದಿಗಳಿಗೆ ಶ್ರೀ ದೇವರ ಮೂಲ ಬಿಂಬ ದರ್ಶನ ಮಾಡಿಸಲಾಗುತ್ತದೆ . ಬಳಿಕ ಮೂಲ ಬಿಂಬ ಪೂಜೆ, ಅಲಂಕಾರ, ನೈವೇದ್ಯ,ಮಂಗಳಾರತಿ, ಮಂತ್ರಪುಷ್ಪಗಳನ್ನು ನೆರವೇರಿಸಿ  ಅರ್ಚಕರು ಹೊರಬರುತ್ತಾರೆ. ತದನಂತರ ಪವನಮಂತ್ರ ಪಠಿಸುತ್ತಾ ಈ ಗುಹೆ ಪೂರ್ತಿಯಾಗಿ ತುಂಬಿ ಎದುರಿನ ದಂಡೆಯಿಂದ ನೀರು ಹೊರಬರುವವರೆಗೆ ಶುದ್ಧಜಲ ತುಂಬಿಸಲಾಗುತ್ತದೆ.

ಇಲ್ಲಿಗೆ ಬಂದು ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಮದುವೆ, ಸಂತಾನ, ವ್ಯವಹಾರ, ನಿರ್ವಿಘ್ನವಾಗಿ ನೆರವೇರುತ್ತದೆ ಎನ್ನುವ ನಂಬಿಕೆ ಇಲ್ಲಿಯ ಭಕ್ತರದ್ದು, ವಿದ್ಯೆ ಬುದ್ದಿ, ಉದ್ಯೋಗಗಳನ್ನು ಕರುಣಿಸುವ ಗುಡ್ಡಟ್ಟು ಗಣಪತಿ ಕೆಲವೊಂದು ವಿಶೇಷತೆಗಳನ್ನು ಹೊಂದಿದ್ದಾನೆ ಅಂತೆಯೇ ವಿನಾಯಕನ ದರುಶನಕ್ಕಾಗಿ ದೇಶದ ಮೂಲೆ ಮೂಲೆಯಿಂದಲೂ ಜನಸಾಗರ ಹರಿದು ಬರುತ್ತದೆ. ಇಲ್ಲಿಗೆ ಬಂದಂತ ಭಕ್ತರಿಗೆ ಅನ್ನಸಂತರ್ಪಣೆಯು ನಡೆಯುತ್ತದೆ.

ಪ್ರಕೃತಿಯ ಮಧ್ಯದಲ್ಲಿ ಪ್ರಾಕೃತಿಕವಾಗಿ ನಿರ್ಮಾಣಗೊಂಡಿರುವ ಗುಡ್ಡಟ್ಟು ಗಣಪತಿ ದರ್ಶನದಿಂದ ಭಕ್ತರಿಗೆ ಮುದವನ್ನು ನೀಡುತ್ತಿದ್ದಾನೆ ಸಾಧ್ಯವಾದರೆ ನೀವು ಕೂಡ ಭೇಟಿ ನೀಡಿ ಬಂಡೆಯೊಳಗೆ ವಿರಾಜಮಾನನಾಗಿರುವ ಗಣಪನ ದರ್ಶನವನ್ನು ಪಡೆದು ಧನ್ಯರಾಗಿ…

ಈ ಕ್ಷೇತ್ರಕ್ಕೆ ಬರುವುದು ಹೇಗೆ ?

ಉಡುಪಿಯಿಂದ -ಬ್ರಹ್ಮಾವರ -ಬಾರಕೂರು-ಶಿರಿಯಾರ -ಗುಡ್ಡಟ್ಟು-28 ಕೀ.ಮೀ, ಕುಂದಾಪುರದಿಂದ-ಶಿವಮೊಗ್ಗ ಮಾರ್ಗವಾಗಿ-ಕೋಟೇಶ್ವರ-ಗುಡ್ಡಟ್ಟು , ಶಿವಮೊಗ್ಗ- ಹೊಸಂಗಡಿ – ಸಿದ್ದಾಪುರ – ಶಂಕರನಾರಾಯಣ – ಗುಡ್ಡಟ್ಟು 147ಕೀ.ಮೀಟರ್‌. ಹೀಗೆ ಕ್ರಮಿಸಿದಾರೆ  ಈ ಪುಣ್ಯ ಕ್ಷೇತ್ರ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ ನಮಗೆ ಕಾಣಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next