Advertisement

ಜೋಡಿ ಕೊಲೆ: ಹತ್ಯೆಗೀಡಾದವರ ಮನೆಗಳಿಗೆ ಪರಿಷತ್ ಸದಸ್ಯ ಆರ್. ರಾಜೇಂದ್ರ ಭೇಟಿ

07:29 PM Apr 29, 2022 | Team Udayavani |

ಗುಬ್ಬಿ: ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಜೋಡಿ ಕೊಲೆಯಾದ ಯುವಕ ಗಿರೀಶ್ ಮನೆಗೆ ವಿಧಾನಪರಿಷತ್ ಸದಸ್ಯ ಆರ್. ರಾಜೇಂದ್ರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

Advertisement

ತಾಲೂಕಿನ ಕಡಬ ಹೋಬಳಿಯ ಪೆದ್ದನಹಳ್ಳಿ ಗ್ರಾಮದ ಮೃತ ಗಿರೀಶ್ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಇದುವರೆಗೆ ಮಂಚಲದೊರೆ ಮೃತ ಗಿರೀಶ್ ಹಾಗೂ ಪೆದ್ದನಹಳ್ಳಿ ಗ್ರಾಮದ ಮೃತ ಗಿರೀಶ್ ಅವರ ಮನೆಗೆ ಯಾವುದೇ ರಾಜಕೀಯ ವ್ಯಕ್ತಿಗಳು ಸಹ ಇದುವರೆಗೂ ಭೇಟಿ ನೀಡಿಲ್ಲ ಚುನಾವಣೆ ಸಮಯದಲ್ಲಿ ಗೆದ್ದಂತಹ ಸಂದರ್ಭದಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿ ಮಾತನಾಡುವಾಗ ಸಮಾನತೆಯನ್ನು ಸಾರುವ ದಲಿತ ಕುಟುಂಬದಲ್ಲಿ ಇಂತಹ ಘಟನೆ ನಡೆದಿರುವುದು, ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳದೇ ಇರುವುದು ಅತ್ಯಂತ ದುರಂತದ ವಿಚಾರ, ಸರ್ಕಾರದಲ್ಲಿ ಗುರುತಿಸಿಕೊಂಡಿದ್ದಾರೆ ಇಡೀ ರಾಜ್ಯದ ಸಚಿವರು ಅವರ ಮನೆ ಬಾಗಿಲಿಗೆ ಹೋಗಿ ಸಾಂತ್ವನ ಹೇಳಿ ಪರಿಹಾರವನ್ನು ಘೋಷಣೆ ಮಾಡುತ್ತಿದ್ದರು ಆದರೆ ದಲಿತ ಎಂಬ ಕಾರಣಕ್ಕೆ ಒಬ್ಬ ಸಚಿವರು ಸಹ ಬಂದಿಲ್ಲ, ರಾಜ್ಯದ ಕಾನೂನು ಗೃಹ ಆಡಳಿತವನ್ನು ನೋಡುವ ಇಬ್ಬರು ಪ್ರಮುಖ ಸಚಿವರಿದ್ದರೂ ಇಲ್ಲಿಗೆ ಬಂದು ಸಮಸ್ಯೆಯನ್ನು ಕೇಳದೆ ಇರುವುದು ಇವರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದ ಅವರು, ಗ್ರಾಮದಲ್ಲಿರುವ ದಲಿತ ಕುಟುಂಬಗಳು ಸಹ ಈ ಮನೆಯವರನ್ನು ಮಾತನಾಡಿಸಲು ಹೆದರುತ್ತಿದ್ದಾರೆ. ಸಾಕಷ್ಟು ಬೆದರಿಕೆಯ ದೂರವಾಣಿ ಸಹ ಬಂದಿರುವುದು ನೋಡಿದಾಗ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಪೊಲೀಸ್ ಇಲಾಖೆ ಇವರಿಗೆ ಹೆಚ್ಚಿನ ಭದ್ರತೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಾಥಮಿಕ ಸಹಕಾರ ಸಂಘದ ಜಿಲ್ಲಾ ನಿರ್ದೇಶಕ ಹಾರನಹಳ್ಳಿ ಪ್ರಭಾಕರ್, ದಲಿತ ಮುಖಂಡರಾದ ಚೇಳೂರು ಶಿವನಂಜಪ್ಪ, ನರಸಿಂಹಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ಯತೀಶ್, ದೇವರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.

ಏಪ್ರಿಲ್ 2 ರಂದು ರಾತ್ರಿ ಜಮೀನಿನಲ್ಲಿ ಪಂಪ್‌ ಸೆಟ್‌ ಕದಿಯಲು ಬಂದಿದ್ದರು ಎಂಬ ಕಾರಣಕ್ಕೆ ಇಬ್ಬರನ್ನು ಥಳಿಸಿ ಹತ್ಯೆ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next