Advertisement

ಶಾಸಕ ಎಸ್.ಆರ್.ಶೀನಿವಾಸ್ ಗೆದ್ದಿರುವುದು ಕುಮಾರಸ್ವಾಮಿ ಹೆಸರಿಂದಲ್ಲ, ಕಾರ್ಯಕರ್ತರ ಬೆಂಬಲದಿಂದ

06:06 PM Jun 14, 2022 | Team Udayavani |

ಚೇಳೂರು : ಗುಬ್ಬಿ ಕ್ಷೇತ್ರದ ಶಾಸಕರಾದ ಎಸ್.ಆರ್.ಶೀನಿವಾಸ್ ಅವರು ದೇವೆಗೌಡ್ರು, ಕುಮಾರಸ್ವಾಮಿ ಹೆಸರು ಹೇಳಿಕೊಂಡು ಜೆಡಿಎಸ್ ಪಕ್ಷದಿಂದ ಗೆದ್ದವರಲ್ಲ, ಅವರ ಕಾರ್ಯಕರ್ತ ಬೆಂಬಲದಿಂದ ನಾಲ್ಕು ಬಾರಿ ಶಾಸಕರಾದವರು ಎಂದು ಮಾಜಿ.ಗ್ರಾಪಂ ಅಧ್ಯಕ್ಷ ಸಿ.ಎನ್.ನಾಗರಾಜು ಹೇಳಿದರು.

Advertisement

ಗ್ರಾಮದಲ್ಲಿ ಶಾಸಕ ಎಸ್.ಆರ್.ಶೀನಿವಾಸ್ ರವರ ಬಗ್ಗೆ ಅವಹೇಳನಕಾರಿ ಮಾತನಾಡಿ ನಿಂದಿಸಿರುವ ಹಾಗೂ ಎರಡು ನಾಲಿಗೆ ಇರುವ ಕುಮಾರಸ್ವಾಮಿಗೆ ಧಿಕ್ಕಾರದ ಬ್ಯಾನರ್ ಹಾಕಿಕೊಂಡು ಪ್ರತಿಭಟನೆಯಲ್ಲಿ ಮಾತನಾಡಿ ನಮ್ಮ ಶಾಸಕರಿಗೆ ಜನರ ಬೆಂಬಲವಿದೆ. ಮುಂದಿನ ಚುನಾವಣೆಯಲ್ಲಿ ಜಯಭೇರಿ ಆಗುತ್ತಾರೆ ಅಂತಹವರ ಬಗ್ಗೆ ಅವಹೇಳನಕಾರಿ ಮಾತನಾಡಿರುವುದು ಸರಿಯಾಗಿಲ್ಲ ಎಂದರು.

ಯತೀಶ್ ಮಾತನಾಡಿ ಪ್ರಾಮಾಣಿಕವಾಗಿ ಇರುವ ಶಾಸಕ ಎಸ್.ಆರ್..ಶೀನಿವಾಸ್ ರವರ ಬಗ್ಗೆ ರಾಜ್ಯಸಭೆ ಚುನಾವಣೆಯಲ್ಲಿ ಒಂದು ಬಾರಿ ಖಾಲಿ ಪೇಪರ್ ಹಾಕಿದ್ದಾರೆ. ಮತ್ತೋಮೆ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳುವುದು ಕುಮಾರಸ್ವಾಮಿಗೆ ಸರಿಯಲ್ಲ. ಹಿಂದೆ ನಮ್ಮ ಶಾಸಕರಿಗೆ ಸಚಿವರನ್ನಾಗಿ ಮಾಡುತ್ತಾನೆ ಬಾ ಎಂದು ಕೋಟ್ಯಂತರ ರೂಪಾಯಿಗಳ ಆಮಿಷ ಇಟ್ಟರು.ಹೋಗದೆ ಪ್ರಾಮಾಣಿಕವಾರುವ ಬಗ್ಗೆ ಅವಹೇಳನಕಾರಿ ಮಾತನಾಡ ಬೇಡಿ.ಮೊನ್ನೆ ಜೆಡಿಎಸ್ ಮುಖಂಡ ಒಬ್ಬರು ಸಿದ್ದರಾಮಯ್ಯ ರವರ ಬಗ್ಗೆ ಮಾತನಾಡಿದರಿಂದ ನಮ್ಮ ಕುರುಬ ಸಮಾಜವರು ಜೆಡಿಎಸ್ ಗೆ ಮತವೇ ಹಾಕಬಾರದು ಎಂದರು.

ಇದನ್ನೂ ಓದಿ : 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ: ಕೈದಿಗಳ ಬಿಡುಗಡೆಗೆ ಕೇಂದ್ರ ಸರ್ಕಾರ ಚಿಂತನೆ

ಈ ಪ್ರತಿಭಟನೆಯಲ್ಲಿ ವಾಸಣ್ಣನವರ ಅಭಿಮಾನಿಗಳು.ಕಾರ್ಯಕರ್ತರು ಮಾತನಾಡಿದರು.
ಈ ಪ್ರತಿಭಟನೆಯಲ್ಲಿ.ನೆಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ಧರಾಜು, ಇರಕಸಂದ್ರದ ಗುಂಡಣ್ಣ, ರಂಗಾಧಮಯ್ಯ, ಕಾತಿಕೇಯನ್, ಮೋಹನಕುಮಾರಾ,  ರಾಮಕೃಷ್ಣಯ್ಯ, ಶಿವಶಂಕರ್, ಲಿಂಗರಾಜು, ವಜ್ರಯ್ಯ, ಮಲೇಶಯ್ಯ, ಕೆಂಪಣ್ಣ, ಸತೀಶ್, ಮೈಲಾರಯ್ಯ, ರಾಜು, ಸತೀಶ್ ಹಾಗು ಇತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next