ಗುಬ್ಬಿ : ಮನೆಯನ್ನು ಮಾರಾಟ ಮಾಡಲು ಒಪ್ಪತ್ತಿಲ್ಲಾ ಎಂದು ಗಂಡ ಸೇರಿದಂತೆ ಇತರರು ಸೇರಿಕೊಂಡು ಮಹಿಳೆ ಎನ್ನದೆ ರಾಕ್ಷಸರಂತೆ ಮನ ಬಂದಂತೆ ಹಲ್ಲೆ ನಡೆಸಿದ ಘಟನೆ ಸಿ.ಎಸ್. ಪುರ ಪೋಲಿಸ್ ಠಾಣೆ ವ್ಯಾಪ್ತಿಯ ಜನ್ನೇನಹಳ್ಳಿಯಲ್ಲಿ ನೆಡೆದಿದೆ.
ಸಿ ಎಸ್ ಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಜನ್ನೇನಹಳ್ಳಿ ನಿವಾಸಿಗಳಾದ ದಂಪತಿಗಳು ಇದ್ದು ಇವರ ನಡುವೆ ಬೆಂಗಳೂರಿನಲ್ಲಿ ಇರುವ ಮನೆ ಹಾಗೂ ಜನ್ನೇನಹಳ್ಳಿಯ ಊರಿನಲ್ಲಿ ಇರುವ ಜಮೀನನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು.ಅದಕ್ಕೆ ಮಹಿಳೆ ಒಪ್ಪದೆ ಇದ್ದಾಗ ಗಂಡ ಸೇರಿದಂತೆ ಇತರರು ಸೇರಿಕೊಂಡು ಮಹಿಳೆಯ ಮೇಲೆ ರಾಕ್ಷಸರಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಏನಾದರೂ ಮಾಡಿ ಕೊಲೆಮಾಡಿಯಾದರು ಸರಿಯೇ ನಾವು ಮಾರಟ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅದರೆ ಮಹಿಳೆ ನಮಗೆ ಇಬ್ಬರು ಮಕ್ಕಳು ಇದ್ದಾರೆ, ನಾಳೆ ಅವರಿಗೆ ಏನು ಮಾಡಬೇಕು, ನಮಗೆ ನಮ್ಮ ಮಕ್ಕಳ ಭವಿಷ್ಯ ಮುಖ್ಯವಾಗಿದೆ ಅದ್ದರಿಂದ ಯಾವುದೇ ಕಾರಣಕ್ಕೂ ಮಾರಾಟ ಮಾಡಲು ನಾನು ಒಪ್ಪುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಗಂಡನಾದ ವೈರಮುಡಿ, ಹಾಗೂ ಇದೇ ಗ್ರಾಮದವರಾದ, ಜೆ ಪಿ. ಬಸವರಾಜು, ಮಹಾಲಿಂಗ, ನಾರಯಣ್ ಮೂರ್ತಿ, ಕೃಷ್ಣ ಮೂರ್ತಿ, ಎಂಬುವರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.
ಇದರ ಸಂಬಂಧ ಸಿ ಎಸ್ ಪುರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸೋಮಶೇಖರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ
ಸ್ಥಳಕ್ಕೆ ಗುಬ್ಬಿಯ ವೃತ್ತ ನಿರೀಕ್ಷಕರಾದ ನದಾಫ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.