Advertisement

Karnataka guarantees ಇತರ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಮಾದರಿಯಾಗಬಹುದು:ಡಿ.ಕೆ.ಶಿವಕುಮಾರ್

03:23 PM Jun 11, 2023 | Team Udayavani |

ಬೆಂಗಳೂರು: ಕರ್ನಾಟಕದ ಐದು ಗ್ಯಾರಂಟಿ ಗಳು ಕಾಂಗ್ರೆಸ್ ನ ಚುನಾವಣಾ ಭರವಸೆ ಬಹಳ ಕಠಿಣ ಕರೆ ಮತ್ತು ಇದು ಇತರ ರಾಜ್ಯಗಳಲ್ಲಿ ಅವರ ಆಯಾ ಆರ್ಥಿಕ ಬಲವನ್ನು ಅವಲಂಬಿಸಿ ಪಕ್ಷಕ್ಕೆ ಒಂದು ಮಾದರಿಯಾಗಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ನೀಡಿದ್ದಾರೆ.

Advertisement

“ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡುವ ಮೂಲಕ ಸರ್ಕಾರಗಳು ದೊಡ್ಡ ಉದ್ಯಮಗಳಿಗೆ ಸಹಾಯ ಮಾಡುತ್ತವೆ, ಆದರೆ ಸಾಮಾನ್ಯ ಜನರಿಗೆ ಹೇಗೆ ಸಹಾಯ ಮಾಡುವುದು? ಹಾಗಾಗಿ ನಾವು ಗ್ಯಾರಂಟಿಗಳನ್ನು ನಿರ್ಧರಿಸಿದ್ದೇವೆ” ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

”ಆರ್ಥಿಕ ಸಮಸ್ಯೆಗಳು, ನಿರುದ್ಯೋಗ ಮತ್ತು ಬಡತನವು ಮುಖ್ಯ ವಿಷಯಗಳಾಗಿವೆ, ಸೈದ್ಧಾಂತಿಕ ವಿಷಯಗಳಲ್ಲ,ಅವುಗಳು ಹೊಟ್ಟೆ ತುಂಬುವುದಿಲ್ಲ” ಎಂದರು.

ಜನರಿಗೆ ಸಬ್ಸಿಡಿ ಪ್ರಯೋಜನಗಳನ್ನು ಒದಗಿಸುವ ಭರವಸೆಯನ್ನು ಭಾರತದ ರಾಜಕೀಯ ಇತಿಹಾಸದಲ್ಲಿ ಮೊದಲ ದೊಡ್ಡ ರಾಜಕೀಯ ನಿರ್ಧಾರ ಎಂಬ ಹೇಳಿಕೆಯನ್ನು ನೆನಪಿಸಿಕೊಂಡ ಶಿವಕುಮಾರ್, “ನಾನು ಹೇಳಿದ್ದು ಸರಿ, ಇದು 50,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮುಟ್ಟುತ್ತದೆ. ಒಂದೇ ದಿನದಲ್ಲಿ, ಒಂದು ಕ್ಯಾಬಿನೆಟ್ ಸಭೆಯಲ್ಲಿ ನಾವು ಸಾಮಾನ್ಯ ಜನರಿಗೆ ಸಹಾಯ ಮಾಡಲು ಎಲ್ಲವನ್ನೂ ತೆರವುಗೊಳಿಸಿದ್ದೇವೆ … ನಾವು ಅಕ್ಷರಶಃ ಮಾತನ್ನು ನಡೆಸಿ ಕೊಟ್ಟಿದ್ದೇವೆ” ಎಂದರು.

2024 ರ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕೈಜೋಡಿಸುತ್ತಿವೆ.ಆದ್ದರಿಂದ ನಾವು ಪರ್ಯಾಯ ಯೋಜನೆಗಳನ್ನು ಮಾಡುತ್ತೇವೆ. ನಮ್ಮ ಅಭ್ಯಂತರವಿಲ್ಲ, ಅವರು ಕೈಜೋಡಿಸಲಿ, ಆದರೆ ಕಾಂಗ್ರೆಸ್ ಪಕ್ಷವು ಉತ್ತಮ ಸಂಖ್ಯೆಯನ್ನು ಹೊಂದಿರುತ್ತದೆ ಎಂದು ಶಿವಕುಮಾರ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next