Advertisement

Guarantees ಎಲ್ಲವನ್ನು ಮುಚ್ಚಿವೆ; ಅಭಿವೃದ್ಧಿಗೆ ಹಣವೇ ಇಲ್ಲ!: ರಾಯರೆಡ್ಡಿ

11:46 PM Jul 11, 2024 | Team Udayavani |

ಕೊಪ್ಪಳ: ನಮ್ಮ ಸರ್ಕಾರದಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಹಣವೇ ಇಲ್ಲದಂತಾಗಿದೆ. ಗ್ಯಾರಂಟಿಗಳೇ ನಿಮ್ಮನ್ನು ಮುಚ್ಚಿ ಬಿಟ್ಟಿವೆ. ಸಿಎಂ ಜೊತೆಯೇ ನಾನು ನಿತ್ಯ ಇರುವುದರಿಂದ ಸರ್ಕಾರದ ಹಣಕಾಸಿನ ಆಂತರಿಕ ವಿಚಾರ ನನಗೆ ಗೊತ್ತಿದೆ ಎಂದೆನ್ನುವ ಮೂಲಕ ಸಿಎಂ ಆರ್ಥಿಕ ಸಲಹೆಗಾರ, ಯಲಬುರ್ಗಾ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರು ತಮ್ಮದೇ ಸರ್ಕಾರದಲ್ಲಿನ ಆಂತರಿಕ ಆರ್ಥಿಕ ವ್ಯವಸ್ಥೆ ಬಗ್ಗೆ ನೇರವಾಗಿ ನುಡಿದರು.

Advertisement

ಯಲಬುರ್ಗಾ ಕ್ಷೇತ್ರದ ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ, ಗ್ಯಾರಂಟಿ ಯೋಜನೆಗಳಿಗೆ 60-65 ಸಾವಿರ ಕೋಟಿ ಅನುದಾನ ಬೇಕಾಗುತ್ತದೆ. ಇದರಿಂದ ಬೇರೆ ಯೋಜನೆಗಳಿಗೆ ಅನುದಾನವೇ ಇಲ್ಲ. ನಾನು ಸಿಎಂ ಬಳಿ ಇರುವುದರಿಂದ ಒಳಗಿನ ಸಮಸ್ಯೆ ನನಗೆ ಮಾತ್ರ ಗೊತ್ತು. ಹಣಕಾಸಿನ ಕೊರತೆಯಿಂದಾಗಿ ರಾಜ್ಯದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ನಾನು ಕೆರೆ ತುಂಬಿಸುವ ಯೋಜನೆಗೆ 970ಕೋಟಿ ರೂ. ತಂದಿದ್ದೇನೆ. ಆದರೆ ಕಾಮಗಾರಿಗೆ ಅಗತ್ಯ ಭೂಮಿ ನೀಡಲು ಯಾರೂ ಮುಂದೆ ಬರುತ್ತಿಲ್ಲ. ರಾಜ್ಯದ ಯಾವುದೇ ಕ್ಷೇತ್ರಗಳಿಗೂ ಅಭಿವೃದ್ಧಿ ಕಾರ್ಯ ನಡೆದಿಲ್ಲ. ತುಂಬ ಶಾಸಕರು ಅನುದಾನ ಕೇಳುತ್ತಿದ್ದಾರೆ. ಹಣಕಾಸಿನ ಕೊರತೆಯಿದೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ತುಂಬ ಕಷ್ಟವಾಗುತ್ತಿದೆ. ಸಿಎಂ ತಮ್ಮನ್ನು ಆರ್ಥಿಕ ಸಲಹೆಗಾರ ಮಾಡಿಕೊಂಡಿದ್ದಾರೆ. ದಿನನಿತ್ಯ ಅವರ ಜೊತೆ ಇರುವುದರಿಂದ ನನಗೆ ಆರ್ಥಿಕ ವಿಷಯ ಗೊತ್ತಿದೆ. ಹಣಕಾಸಿನ ವಿಚಾರ ನನಗೆ ಮಾತ್ರ ಗುತ್ತು. ರಾಜ್ಯದಲ್ಲಿ ನನ್ನ ಕ್ಷೇತ್ರದಲ್ಲಿ ಮಾತ್ರ ಹಣ ಬಂದಿರುವುದು. ಜನರು ಇದೆಲ್ಲವನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next