Advertisement

Guarantee Schemes: ಸಿರಿವಂತರು ಉಚಿತ ಯೋಜನೆ ಬಳಸುವುದು ಸೂಕ್ತವಲ್ಲ-ಆರ್‌.ವಿ.ದೇಶಪಾಂಡೆ

10:07 PM Jul 01, 2024 | Team Udayavani |

ದಾಂಡೇಲಿ (ಉತ್ತರಕನ್ನಡ) : ರಾಜ್ಯ ಸರ್ಕಾರ ಬಡವರು ಮತ್ತು ಜನಸಾಮಾನ್ಯರ ಹಿತದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳ  ಅನುಷ್ಠಾನ ತಂದಿದೆ. ಅವುಗಳಲ್ಲಿ ವಿದ್ಯುತ್ ರಿಯಾಯಿತಿ (ಗೃಹಜ್ಯೋತಿ) ಯೋಜನೆಯು ಪ್ರಮುಖವಾಗಿದೆ. ಆರ್ಥಿಕ ಸಂಪನ್ನರು ಉಚಿತ ವಿದ್ಯುತ್ ಬಳಕೆ ಮಾಡುವುದು ಸೂಕ್ತವಲ್ಲ. ಹಾಗಾಗಿ ಆರ್ಥಿಕ ಸಂಪನ್ನರು ವಿದ್ಯುತ್ ರಿಯಾಯಿತಿ ಯೋಜನೆಯ ಬಿಟ್ಟು ಕೊಡುವುದು ಒಳಿತು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ, ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

Advertisement

ದಾಂಡೇಲಿ ನಗರಸಭೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಹಳಿಯಾಳ -ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 56,500 ವಿದ್ಯುತ್ ಗ್ರಾಹಕ ಕುಟುಂಬಗಳಿದ್ದು, ಅವುಗಳ ಪೈಕಿ ಒಟ್ಟು 525 ಕುಟುಂಬಗಳು ಮಾತ್ರ ವಿದ್ಯುತ್ ಬಿಲ್ಲು ಪಾವತಿಸುತ್ತಿವೆ. ಸರಕಾರದ ಯೋಜನೆಗಳ ಬಡವರು ಮತ್ತು ಜನಸಾಮಾನ್ಯರು ಬಳಸಬೇಕೆ ವಿನಾ ಆರ್ಥಿಕವಾಗಿ  ಸ್ಥಿತಿವಂತರಾಗಿರುವವರು ಈ ಯೋಜನೆಯ ಫಲಾನುಭವಿಗಳಾಗಬಾರದೆಂದು ಶಾಸಕ  ವಿನಂತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next