ತುಮಕೂರು: ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಸ್ನಾತ ಕೋತ್ತರ, ಪದವಿ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಮೊದಲ ಬಾರಿಗೆ ಸರ್ಟಿಫಿಕೇಟ್ ಇನ್ ಜಿಎಸ್‌ಟಿ, ಸರ್ಟಿ ಫಿಕೇಟ್ ಇನ್ ಯೋಗ ಪ್ರಾರಂಭ ಮಾಡಲಾಗುತ್ತಿದೆ ಎಂದು ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾ ನಿಲಯದ ಪ್ರಾದೇಶಿಕ ನಿರ್ದೇಶಕ ಜಿ.ಎಚ್.ಇಮ್ರಾಪ್ಮರ್ ತಿಳಿಸಿದರು.
ನಗರದ ಎಸ್‌ಎಸ್‌ಐಟಿ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಕೋರ್ಸ್ ಆರಂಭಿಸಲಾಗಿದೆ. ಮೊದಲ ಬಾರಿಗೆ ಯೋಗ ಮತ್ತು ಜಿಎಸ್‌ಟಿ ಸೇರಿ ಸಲಾಗಿದೆ. ಜೊತೆಗೆ ಸರ್ಟಿಫಿಕೇಟ್ ಇನ್ ಪರ್ಷಿಯನ್ ಲ್ಯಾಂಗ್ವೇಜ್ ಕೊರ್ಸ್ ಪ್ರಾರಂಭಿಸಲಾಗುವುದು ಎಂದರು.
ಪ್ರವೇಶ ಆರಂಭ: ಬಿಎ, ಬಿಕಾಂ, ಎಂ.ಎ, ಎಂ.ಕಾಂ ಸೇರಿ ದಂತೆ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶ ಆರಂಭವಾಗಿದೆ. ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ ಡಿಪ್ಲೊಮಾ ಕೋರ್ಸ್, ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್, ಆಪರೇಷನ್ ಮ್ಯಾನೇಜ್‌ಮೆಂಟ್, ಮಾರುಕಟ್ಟೆ ನಿರ್ವಹಣೆ ಮತ್ತು ಫೈನಾನ್ಶಿಯಲ್ ಮಾರುಕಟ್ಟೆ ಪ್ರ್ಯಾಕ್ಟೀಸ್ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ಇಲ್ಲದೆ ಆಫ್ಲೈನ್ ಮೂಲಕ ಪ್ರವೇಶ ಪಡೆದು ಕೊಳ್ಳಬಹುದು. ವಿವಿಧ ಕೊರ್ಸ್‌ಗಳಿಗೆ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದು. ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಬೇಕು. ಹಣ ಪಾವತಿ ನಂತರ ಪ್ರವೇಶ ಅರ್ಜಿ ಸಲ್ಲಿಸಬೇಕು. ಎಸ್‌ಸಿ, ಎಸ್‌ಟಿ, ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡ ಲಾಗುವುದು. ಜೊತೆಗೆ ಸರ್ಟಿ ಫಿಕೇಟ್, ಡಿಪ್ಲೊಮಾ, ಪದವಿ ಕೋರ್ಸ್ ಗಳಿಗೆ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಯಾವುದೇ ಶುಲ್ಕ ವಿರುವುದಿಲ್ಲ, ಪರೀಕ್ಷಾ ಶುಲ್ಕ ಮಾತ್ರ ವಿದ್ಯಾರ್ಥಿಗಳು ಭರಿಸಬೇಕು. ಹೆಚ್ಚಿನ ವಿವರಗಳಿಗೆ ಇಂದಿರಾ ಗಾಂಧಿ ಮುಕ್ತ ವಿವಿ ಪ್ರಾದೇಶಿಕ ಕಚೇರಿ ಬೆಂಗಳೂರು 293,39 ನೇ ಕ್ರಾಸ್, ಎಂಟನೇ ಬ್ಲಾಕ್, ಜಯನಗರ ಬೆಂಗಳೂರು-70, 080-2665747 /26657376 ಸಂಪರ್ಕಿಸಬಹುದು ಎಂದರು.
ವಿವಿ ಉಪನಿರ್ದೇಶಕಿ ಡಾ.ಎಸ್.ರಾಧಾ, ಎಸ್‌ಎಸ್‌ಐಟಿ ಪ್ರಾಂಶುಪಾಲ ಡಾ.ಎಂ.ಕೆ.ವೀರಯ್ಯ, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ವೀರ ಭದ್ರಯ್ಯ, ಇಗ್ನೋ ಸಮನ್ವಯ ಅಧಿಕಾರಿ ಪರಮೇಶ್ವರ ಮೂರ್ತಿ, ಪ್ರಸಾದ್, ಚಲುವರಾಜ್ ಇತರರು ಇದ್ದರು.