Advertisement
ರವಿವಾರ ಮಾತನಾಡಿದ ಮೋದಿ, ‘ಹಿಂಸೆಯಿಂದ ಯಾವುದೇ ಗುರಿ ಸಾಧಿಸಲಾಗದು. ಸಾಧಿಸಲಾಗದೇ ಇರುವುದನ್ನು ಸಾಧಿಸಲು ಶಾಂತಿ, ಅಹಿಂಸೆ, ತ್ಯಾಗ, ಹುತಾತ್ಮತೆ ನೆರವಾಗುತ್ತದೆ’ ಎಂದು ಹೇಳಿದ್ದಾರೆ. ಪ್ರಧಾನಿ ಯಾವುದೇ ಘಟನೆಯನ್ನು ಉಲ್ಲೇಖೀಸಿ ಮಾತನಾಡದೇ ಇದ್ದರೂ, ಹಾಪುರದಲ್ಲಿ ವ್ಯಕ್ತಿಯನ್ನು ಥಳಿಸಿ ಕೊಂದ ಘಟನೆಗೆ ಸಂಬಂಧಿಸಿ ಅವರ ಮಾತುಗಳು ಮಹತ್ವದ್ದಾಗಿದೆ. ಇದೇ ವೇಳೆ, ಜಲಿಯನ್‌ವಾಲಾಬಾಗ್ ದುರಂತವನ್ನೂ ಸ್ಮರಿಸಿರುವ ಮೋದಿ, ಅದು ಇಡೀ ಮಾನವತೆಗೆ ನಾಚಿಕೆಯಾಗುವ ವಿಚಾರ. ಅದನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಜತೆಗೆ, ಗುರು ನಾನಕ್ ಮತ್ತು ಕಬೀರ್ ದಾಸ್ ಅವರ ಬೋಧನೆಗಳು ಯಾವತ್ತಿಗೂ ಪ್ರಸ್ತುತವೇ. 2019ರಲ್ಲಿ ಗುರು ನಾನಕ್ ದೇವ್ ಅವರ 550ನೇ ಜನ್ಮ ದಿನವನ್ನು ‘ಪ್ರಕಾಶ ದಿನ’ವನ್ನಾಗಿ ಆಚರಿಸಲಾಗುತ್ತದೆ ಎಂದರು. ಜೂ.28ರಂದು ಮಘರ್ ಎಂಬಲ್ಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕಬೀರ್ ದಾಸ್‌ರನ್ನು ಅವರು ನೆನಪು ಮಾಡಿಕೊಂಡಿದ್ದಾರೆ. ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರನ್ನು ಸ್ಮರಿಸಿದ ಮೋದಿ, ದೇಶದ ಏಕೀಕರಣದಲ್ಲಿ ಅವರ ಪಾತ್ರ ಮಹತ್ವದ್ದು ಎಂದಿದ್ದಾರೆ.
Advertisement
ಹಿಂಸೆ, ಕ್ರೌರ್ಯದಿಂದ ಪರಿಹಾರ ಅಸಾಧ್ಯ: ಪ್ರಧಾನಿ ಮೋದಿ
09:30 AM Jun 25, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.