Advertisement

1.46 ಲಕ್ಷ ಕೋ.ರೂ. ಜಿಎಸ್‌ಟಿ ಸಂಗ್ರಹ

11:48 PM Dec 01, 2022 | Team Udayavani |

ಹೊಸದಿಲ್ಲಿ: ಸತತ ಒಂಭತ್ತನೇ ತಿಂಗಳು  ಜಿಎಸ್‌ಟಿ ಸಂಗ್ರಹ ಹೆಚ್ಚಳವಾಗಿದೆ. ನವೆಂಬರ್‌ನಲ್ಲಿ 1.46 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಗ್ರಾಹಕರ ಖರೀದಿ ಹೆಚ್ಚಳವಾಗಿರುವುದನ್ನು ಇದು ತೋರಿಸಿದೆ.

Advertisement

2021ರ ನವೆಂಬರ್‌ಗೆ ಹೋಲಿಸಿದರೆ ಇದು ಶೇ. 11ರಷ್ಟು ಹೆಚ್ಚಿರುವುದು ವಿಶೇಷ. ಆದರೆ ಈ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಇದು ಕೊಂಚ ಕಡಿಮೆ. ಆಗ 1.52 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಅಲ್ಲದೆ ಆಗಸ್ಟ್‌ ಬಳಿಕ ಸಂಗ್ರಹ

ವಾಗುತ್ತಿರುವ ಕನಿಷ್ಠ ಮೊತ್ತವೂ ಇದಾಗಿದೆ. ವಿಶೇಷವೆಂದರೆ ಕಳೆದ ಒಂಭತ್ತು ತಿಂಗಳುಗಳಿಂದ ದೇಶದಲ್ಲಿ ತಿಂಗಳಿಗೆ 1.40 ಲಕ್ಷ ಕೋಟಿ ರೂ.ಗೂ ಅಧಿಕ ಜಿಎಸ್‌ಟಿ ಸಂಗ್ರಹವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next