ನೋಂದಣಿಗೆ ಜು.22ರ ವರೆಗೆ ಅವಕಾಶವಿದ್ದು, ಶೇ.86ರಷ್ಟು ವರ್ತಕರು ನೋಂದಣಿ ಮಾಡುವ ಮೂಲಕ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ರಾಜ್ಯ ತೆರಿಗೆ ಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ ಹೇಳಿದರು.
Advertisement
ನಗರದ ರಂಗ ಮಂದಿರದಲ್ಲಿ ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಯೋಜಿಸಿದ್ದ ಜಿಎಸ್‌ಟಿ ಕುರಿತ ವಿಚಾರಗೋಷ್ಠಿಉದ್ಘಾಟಿಸಿ ಮಾತನಾಡಿದ ಅವರು, ಜನಸ್ನೇಹಿಯಾಗಿರುವ ಜಿಎಸ್‌ಟಿ ಕಾಯ್ದೆ ಒಂದು ದೇಶ- ಒಂದು ತೆರಿಗೆ ನೀತಿ ಹೊಂದಿದ್ದು,
ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ. 60 ವರ್ಷಗಳಿಂದ ತೆರಿಗೆ ಕಟ್ಟುತ್ತಲೇ ಬಂದಿದ್ದೇವೆ. ಹಾಗಾಗಿ ಇದು ಹೊಸದೇನಲ್ಲ.
ಹೊಸ ನೀತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಕನ್ನಡದಲ್ಲಿಯೇ ಕಾಯ್ದೆಯ ಮಾಹಿತಿ: ಜಿಎಸ್‌ಟಿ ಕಾನೂನು ಅನುಷ್ಟಾನದಿಂದ ದೇಶದ ಎಲ್ಲ 26 ರಾಜ್ಯಗಳಲ್ಲಿನ ಚೆಕ್‌ಪೋಸ್ rಗಳು ಬಂದ್ ಆಗಲಿವೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆಯ ವಾಹನಗಳು ರಸ್ತೆ ಮೇಲೆ ಗಸ್ತು ತಿರುಗುತ್ತಿರುತ್ತವೆ ಎಂದ ಅವರು, ರಾಜ್ಯದಲ್ಲಿ ಸುಮಾರು 5.20 ಲಕ್ಷ ಜನರು ಜಿಎಸ್‌ಟಿ ವ್ಯಾಪ್ತಿ ಒಳಪಡಲಿದ್ದು, ಕಾಯ್ದೆ ಬಗ್ಗೆ ಕನ್ನಡದಲ್ಲಿಯೇ ಎಲ್ಲ ಮಾಹಿತಿ ಲಭ್ಯವಾಗಲಿದೆ. ಈ ವಿಶೇಷತೆ ಇರುವುದು ರಾಜ್ಯದಲ್ಲಿ ಮಾತ್ರ.
ಕರ್ನಾಟಕದ ವಾಣಿಜ್ಯೋದ್ಯಮಿಗಳಲ್ಲಿ ಜಿಎಸ್‌ಟಿ ಬಗ್ಗೆ ಇರುವಂತಹ ಆಸಕ್ತಿ ಬೇರೆ ರಾಜ್ಯದ ಉದ್ಯಮಿಗಳಲ್ಲಿಲ್ಲ ಎಂದು ಹೇಳಿದರು.
ತೆರಿಗೆಗೆ ಸಂಬಂಧಿಸಿದಂತೆ ದೇಶದಲ್ಲಿ ಕಾನೂನು ಬದಲಾವಣೆ ಆಗಿದೆ. ಆದರೆ, ವ್ಯಾಪಾರ ನಿಂತಿಲ್ಲ. ಮಾರಾಟ ಮಾಡುವ
ವಸ್ತುಗಳ ದರಗಳ ಮೇಲೆ ತೆರಿಗೆ ದರ ತಿಳಿದುಕೊಳ್ಳಬೇಕು. ವರ್ತಕರು ಎಷ್ಟು ತಪ್ಪು ಮಾಡುತ್ತಾರೋ ಅಷ್ಟು ಸರ್ಕಾರಕ್ಕೆ
ಲಾಭವಾಗುತ್ತದೆ. ಹಾಗಾಗಿ ಜಿಎಸ್‌ಟಿ ಸರಿಯಾಗಿ ತಿಳಿದುಕೊಳ್ಳಬೇಕು. ಯಾವುದೇ ವಸ್ತುಗಳನ್ನು ಮಾರಾಟ ಮಾಡಿದರೆ ಮಾರಾಟದ ಸ್ಥಳ ಬರೆಯಬೇಕು. ಈ ಹಿಂದೆ ಬಟ್ಟೆಯ ಮೇಲೆ ತೆರಿಗೆಗೆ ವಿನಾಯಿತಿ ಇತ್ತು. ಈಗ ಶೇ. 5ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ವ್ಯಾಪಾರಸ್ಥರು ಸೆ.5ರ ವರೆಗೆ ತಮ್ಮ ರಿಟರ್ನ್ ಫೈಲ್ ಮಾಡಬೇಕು.
ಕೆ.ಎಸ್. ಬಸವರಾಜ, ಇ-ಆಡಿಟ್ ಜಂಟಿ ಆಯುಕ್ತ, ಬೆಂಗಳೂರು